ಹರ್ ಘರ್ ತಿರಂಗಾ ಅಭಿಯಾನ: ರಾಷ್ಟ್ರಧ್ವಜಕ್ಕೆ ಬಹುಬೇಡಿಕೆ

ಹರ್ ಘರ್ ತಿರಂಗಾ ಅಭಿಯಾನ: ರಾಷ್ಟ್ರಧ್ವಜಕ್ಕೆ ಬಹುಬೇಡಿಕೆ

Published : Aug 04, 2022, 11:31 PM IST

ವಿಧಾನಸೌಧ ಸೇರಿದಂತೆ ಸರ್ಕಾರಿ ಕಚೇರಿಗಳು ಹಾಗೂ ಕಾರ್ಪೊರೇಟ್ ಕಂಪೆನಿಗಳಿಂದಲೂ ರಾಷ್ಟ್ರಧ್ವಜಕ್ಕೆ ಆರ್ಡರ್ 

ಬೆಂಗಳೂರು(ಆ.04):  ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನಲೆಯಲ್ಲಿ ಹರ್ ಘರ್ ತಿರಂಗಾ ಅಭಿಯಾನಕ್ಕೆ ಸಂಬಂಧಿಸಿದಂತೆ ಮನೆ ಮನೆಗಳಲ್ಲೂ ತಿರಂಗಾ ಹಾರಿಸುವ ಕೇಂದ್ರ ಸರ್ಕಾರದ ಘೋಷಣೆ ಯಶಸ್ವಿಗೊಳಿಸಲು ಬೆಂಗಳೂರಿನಲ್ಲಿ ಭರದ ಸಿದ್ಧತೆ ನಡೆದಿದೆ. ಸಿಲಿಕಾನ್ ಸಿಟಿಯಲ್ಲಿ ಈಗಾಗಲೇ ಭರ್ಜರಿಯಾಗಿ ರಾಷ್ಟ್ರ ಧ್ವಜ ಮಾರಾಟವಾಗ್ತಿದೆ. ಮೋದಿ ಹರ್ ಘರ್ ತಿರಂಗಾ ಘೋಷಣೆ ಬಳಿಕ ಈ ಬಾರಿ ರಾಷ್ಟ್ರಧ್ವಜಕ್ಕೆ ಬಹುಬೇಡಿಕೆ ವ್ಯಕ್ತವಾಗಿದೆ. ಮಾವಳ್ಳಿಯ ರಾಷ್ಟ್ರಧ್ವಜ ಮಾರಾಟ ಮಳಿಗೆಯಲ್ಲಿ  ದಿನಕ್ಕೆ 20 ರಿಂದ 30 ಸಾವಿರ ರಾಷ್ಟ್ರ ಧ್ವಜದ ಮಾರಾಟವಾಗುತ್ತಿದೆ. 

News Hour: ಪ್ರವೀಣ್ ನೆಟ್ಟಾರು ಹಂತಕರ ಬೇಟೆಗಿಳಿದ NIA: ಸರಣಿ ಹತ್ಯೆ ವರದಿ ಪಡೆದ ಅಮಿತ್ ಶಾ

ವಿಧಾನಸೌಧ ಸೇರಿದಂತೆ ಸರ್ಕಾರಿ ಕಚೇರಿಗಳು ಹಾಗೂ ಕಾರ್ಪೊರೇಟ್ ಕಂಪೆನಿಗಳಿಂದಲೂ ರಾಷ್ಟ್ರಧ್ವಜಕ್ಕೆ ಆರ್ಡರ್ ಬರುತ್ತಿದೆ. ಈಗಾಗಲೇ ಕಳೆದ 15 ದಿನಗಳಿಂದ 5 ಲಕ್ಷ ರಾಷ್ಟ್ರಧ್ವಜದ ಮಾರಾಟ ಮಾಡಲಾಗಿದೆ. ಜೊತೆಗೆ ಆಜಾದಿ ಕ ಅಮೃತ ಮಹೋತ್ಸವ ಎಂಬ ಟೋಪಿ, ಶಾಲು, ಬ್ಯಾಂಡ್ವಗಳಿಗೂ ಸಖತ್ ರೆಸ್ಪಾನ್ಸ್ ವ್ಯಕ್ತವಾಗಿದೆ. 5 ರೂಪಾಯಿಂದ 50 ಸಾವಿರದವರೆಗೂ ರಾಷ್ಟ್ರದ್ವಜ ಸಿಗುತ್ತಿದೆ. ಕಳೆದ ಹಲವು ವರ್ಷಕ್ಕೆ ಹೋಲಿಸಿದ್ರೆ ಈ ಬಾರಿ ನೂರು ಪಟ್ಟು ವ್ಯಾಪಾರ ಜಾಸ್ತಿಯಾಗಿದೆ ಅಂತ ಅಂಗಡಿ ಮಾಲೀಕ‌ ಅನಿಲ್ ಏಷ್ಯಾನೆಟ್ ಸುವರ್ಣನ್ಯೂಸ್‌ಗೆ ಹೇಳಿದ್ದಾರೆ.
 

17:44ಭಾರತದ ರಕ್ಷಣಾ ಸಾಮರ್ಥ್ಯ: ಡ್ರೋನ್‌ಗಳಿಂದ ಸ್ವದೇಶಿ ಶಸ್ತ್ರಾಸ್ತ್ರಗಳವರೆಗೆ ಜಯರಾಂ ಮಾಹಿತಿ
01:13ಮದ್ವೆಗೆ ಟಿ-ಶರ್ಟ್‌ನಲ್ಲಿ ಬಂದ ಬಾಬಿ ಡಿಯೋಲ್‌; ಏನಾಗಿದೆ ನಿನಗೆ ಎಂದು ಕಾಲೆಳೆದ ನೆಟ್ಟಿಗರು
09:00ಬಿಜೆಪಿಯ 'ಡಬಲ್ ಎಂಜಿನ್' ಮಂತ್ರ: ಇದು ಗುಜರಾತ್ ಗೆಲುವಿನ ರಹಸ್ಯ
22:33India@75: ಶ್ರೀ ಧರ್ಮಸ್ಥಳ ಸಿರಿ ಗ್ರಾಮದ್ಯೋಗ ಸಂಸ್ಥೆಯ ಡಾ. ಎಲ್‌ ಎಚ್‌ ಮಂಜನಾಥ್‌ ವಿಶೇಷ ಸಂದರ್ಶನ
08:01Inchageri Math: 75 ವರ್ಷದ ಬಳಿಕ ಸ್ವಾತಂತ್ರ್ಯಕ್ಕೆ ಹೋರಾಡಿದ ಇಂಚಗೇರಿ ಮಠಕ್ಕೆ ಸಿಕ್ತು ಗೌರವ
22:46ನವಭಾರತ ನಿರ್ಮಾಣಕ್ಕೆ ನವಚೈತನ್ಯ ತುಂಬುತ್ತಿರುವ ಐಎಚ್‌ಎಕ್ಸ್‌ಗೆ ಆಜಾದಿ ಕಾ ಅಮೃತ್‌ ಮಹೋತ್ಸವ ಯಾತ್ರೆ
19:57ವಿಶ್ವದ ಮಾಹಿತಿ ತಂತ್ರಜ್ಞಾನ ದಿಗ್ಗಜ ಇನ್ಫೋಸಿಸ್‌ಗೆ ಅಮೃತ ಮಹೋತ್ಸವ ಯಾತ್ರೆ
20:46ಭೌತ ವಿಜ್ಞಾನಿಯ ಕನಸಿನ ಕೂಸು ರಾಮನ್ ಸಂಶೋಧನಾ ಸಂಸ್ಥೆಗೆ ಅಮೃತ ಮಹೋತ್ಸವ ಯಾತ್ರೆ
22:26ಭಾರತದ ಪ್ರತಿಷ್ಠಿತ ಸಂಸ್ಥೆ IISc ಕಡೆ ಅಮೃತ ಮಹೋತ್ಸವ ಯಾತ್ರೆ
24:09ಅಮೃತ ಮಹೋತ್ಸವ ಯಾತ್ರೆ: ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಭಾರತದ ಹೆಮ್ಮೆ ಇಸ್ರೋ
Read more