Feb 22, 2023, 3:07 PM IST
ವ್ಯಾಕ್ಸಿನೇಶನ್ ಅನ್ನೋದು ಮಕ್ಕಳಿಗೆ ಕಾಯಿಲೆ ಬರದಂತಿರಲು ಕೊಡುವ ಚುಚ್ಚುಮದ್ದು. ಇಂಡಿಯನ್ ಅಕಾಡೆಮಿ ಆಫ್ ಪೆಡಿಯಾಟ್ರಿಕ್ಸ್ ಅನುಸಾರ ಮಕ್ಕಳಿಗೆ ಚುಚ್ಚುಮದ್ದು ಕೊಡಬಹುದು. ಈ ರೀತಿಯ ಲಸಿಕೆಗಳನ್ನು ತೆಗೆದುಕೊಳ್ಳದೇ ಇರುವುದರಿಂದ ಮಕ್ಕಳು ಶಾಲೆಗೆ ಹೋಗುವಾಗ ಸುಲಭವಾಗಿ ಕಾಯಿಲೆ ಹರಡುತ್ತದೆ. ಕೆಲವೊಮ್ಮೆ ಇದು ಗಂಭೀರವಾಗಿ ಪರಿಣಮಿಸಬಹುದು. ಇಂಥಾ ಸಂದರ್ಭದಲ್ಲಿ ವ್ಯಾಕ್ಸಿನೇಷನ್ ಯಾವಾಗಲೂ ಮಕ್ಕಳ ಆರೋಗ್ಯವನ್ನು ರಕ್ಷಿಸುತ್ತದೆ ಎಂದು ಮಕ್ಕಳ ತಜ್ಞ ಡಾ.ಸಯ್ಯದ್ ಮುಜಾಹಿದ್ ಹುಸೇನ್ ಹೇಳುತ್ತಾರೆ.