ವಯಸ್ಸು ಜಾಸ್ತಿಯಾದಂತೆ ಪ್ರಾಸ್ಟೇಟ್ ಕ್ಯಾನ್ಸರ್ ಬರೋ ಅಪಾಯ ಹೆಚ್ಚಾಗುತ್ತಾ?

ವಯಸ್ಸು ಜಾಸ್ತಿಯಾದಂತೆ ಪ್ರಾಸ್ಟೇಟ್ ಕ್ಯಾನ್ಸರ್ ಬರೋ ಅಪಾಯ ಹೆಚ್ಚಾಗುತ್ತಾ?

Published : Sep 12, 2023, 03:53 PM IST

ಪ್ರಾಸ್ಟೇಟ್ ಕ್ಯಾನ್ಸರ್‌ನ್ನು ಆರಂಭದಲ್ಲಿ ಪತ್ತೆ ಹಚ್ಚೋದು ಕಷ್ಟ. ಆರಂಭದಲ್ಲಿ ಯಾವುದೇ ಲಕ್ಷಣ ಕಾಣಿಸೋದಿಲ್ಲ. ರೋಗ ಬೇರೆ ಭಾಗಕ್ಕೆ ಹರಡಿದಾಗ ಸಮಸ್ಯೆ ಕಾಣಿಸಿಕೊಳ್ಳಲು ಶುರುವಾಗುತ್ತದೆ. ಹಾಗಿದ್ರೆ ಪ್ರಾಸ್ಟೇಟ್ ಕ್ಯಾನ್ಸರ್ ಬರೋ ಸಾಧ್ಯತೆ ಯಾರಿಗೆ ಹೆಚ್ಚು? ಆ ಬಗ್ಗೆ ಡಾ. ಹೆಚ್‌.ಸುದರ್ಶನ್‌ ಬಲ್ಲಾಳ್‌ ಮಾಹಿತಿ ನೀಡಿದ್ದಾರೆ.

ಜಗತ್ತಿನಾದ್ಯಂತ ಪುರುಷರಲ್ಲಿ ಕಾಣುವ ಕ್ಯಾನ್ಸರ್ (Cancer) ಗಳ ಪೈಕಿ ಪ್ರಾಸ್ಟೇಟ್ ಕ್ಯಾನ್ಸರ್ ಸಾಮಾನ್ಯವಾಗಿದೆ. ಇದು ಪುರುಷರ ಜನನೇಂದ್ರಿಯದ ಒಂದು ಗ್ರಂಥಿಯಾಗಿದ್ದು ಹೊಟ್ಟೆ (Stomach) ಯ ಕೆಳಭಾಗದಲ್ಲಿರುತ್ತದೆ. ಈ ಗ್ರಂಥಿಯಲ್ಲೇ ವೀರ್ಯ ಉತ್ಪಾದನೆಯಾಗುತ್ತದೆ. ಈ ಗ್ರಂಥಿಯಲ್ಲಿ ಜೀವಕೋಶಗಳ ಅಸಹಜ ಬೆಳವಣಿಗೆಯಾದಾಗ ಅದು ಪ್ರಾಸ್ಟೇಟ್ ಕ್ಯಾನ್ಸರ್ ಗೆ ಕಾರಣವಾಗುತ್ತದೆ. ನಂತರದಲ್ಲಿ ಇದು ದೇಹದ ಇತರ ಭಾಗಗಳಿಗೂ ಹರಡುತ್ತದೆ. ಕೆಲವೊಮ್ಮೆ ಪ್ರಾರಂಭಿಕ ಹಂತದಲ್ಲಿ ಯಾವುದೇ ಲಕ್ಷಣಗಳನ್ನು ತೋರಿಸದ ಈ ಕ್ಯಾನ್ಸರ್ ಕೊನೆಗೆ ಮಾರಣಾಂತಿಕ ಆಗಿಬಿಡುತ್ತೆ. ಪುರುಷರಲ್ಲಿ ವಯಸ್ಸಾಗುತ್ತ ಬಂದಂತೆ ಪ್ರಾಸ್ಟೇಟ್ ಕ್ಯಾನ್ಸರ್ ಉಂಟಾಗುವ ಅಪಾಯ ಹೆಚ್ಚಿರುತ್ತದೆ. ಇದರಿಂದ ಸೆಕ್ಸ್ ಸಮಸ್ಯೆಗಳು ಮತ್ತು ಕಾಲುಗಳಲ್ಲಿ ಕೂಡ ದೌರ್ಬಲ್ಯ ಉಂಟಾಗುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಡಾ. ಹೆಚ್‌.ಸುದರ್ಶನ್‌ ಬಲ್ಲಾಳ್‌ ನೀಡಿದ್ದಾರೆ.

ಇನ್ಮುಂದೆ ಕ್ಯಾನ್ಸರ್‌ ಬಗ್ಗೆ ಭಯ ಬೇಡ: 7 ನಿಮಿಷದ ಚಿಕಿತ್ಸೆಯ ಚುಚ್ಚುಮದ್ದು ಶೀಘ್ರ ರಿಲೀಸ್‌!

02:42ಸಿನಿಲೋಕದ ಸುಂದರಿಯರ ಸೌಂದರ್ಯದ ಸೀಕ್ರೆಟ್ಟು, 44ರಲ್ಲೂ ಕರೀನಾ ಕಪೂರ್ ಬ್ಯೂಟಿ ರಹಸ್ಯವಿದು!
02:51ಈಗಲೂ 20ರ ಯುವತಿಯಂತೆ ಕಾಣುವ ಕತ್ರಿನಾ; ಕೋಮಲಾಂಗಿ ಕತ್ರಿನಾ ಬ್ಯೂಟಿ ಸೀಕ್ರೆಟ್ ಏನು ಗೊತ್ತಾ?
05:07ಬೆಂಗಳೂರು 8 ತಿಂಗಳ ಮಗುವಿಗೆ HMPV ಸೋಂಕು, ಇಲ್ಲಿದೆ ಲೇಟೆಸ್ಟ್‌ ಹೆಲ್ತ್‌ ಅಪ್ಡೇಟ್
05:35ಚೀನಾ ವೈರಸ್ ಬಗ್ಗೆ ನಿರ್ಲಕ್ಷ್ಯ ಬೇಡ, ರಾಜ್ಯದ ಜನರಿಗೆ ಸರ್ಕಾರದ ಸೂಚನೆ!
01:35ಲ್ಯುಕೇಮಿಯಾ ಕ್ಯಾನ್ಸರ್‌ಗೆ ಚಿಕಿತ್ಸೆಯೇನು?
01:25ಇಮ್ಯುನೋ ಥೆರಪಿಯಿಂದ ಕ್ಯಾನ್ಸರ್‌ ವಾಸಿಯಾಗುತ್ತಾ?
01:27Cardiac rehabilitation ಎಂದರೇನು, ಹೃದಯದ ಆರೋಗ್ಯಕ್ಕೇನು ಪ್ರಯೋಜನ?
02:39ಸರ್ವಿಕಲ್ ಕ್ಯಾನ್ಸರ್‌ ಎಂದರೇನು? ಕ್ಯಾನ್ಸರ್‌ ತಜ್ಞೆ ಡಾ. ಪ್ರತಿಮಾ ರಾಜ್ ವಿವರಿಸುತ್ತಾರೆ..
01:23ಕ್ಯಾನ್ಸರ್‌ ಇರುವುದನ್ನು ಪತ್ತೆ ಹಚ್ಚುವುದು ಹೇಗೆ?
04:24ಹೃದಯಾಘಾತವಾದ ತಕ್ಷಣ ಹೃದಯದ ಸೆಲ್‌ ಬೇಗ ಸಾಯುವುದಿಲ್ಲ
Read more