Apr 26, 2024, 4:53 PM IST
ಮಕ್ಕಳ ಆರೋಗ್ಯ ತುಂಬಾ ಸೂಕ್ಷ್ಮವಾದುದು. ಆರೋಗ್ಯ ಚೆನ್ನಾಗಿರಬೇಕಾದರೆ ಕೊಡೋ ಆಹಾರದ ಬಗ್ಗೆಯೂ ಪೋಷಕರು ಗಮನಹರಿಸಬೇಕು. ಅದರಲ್ಲೂ ಮಕ್ಕಳಿಗೆ ಪ್ರೋಟೀನ್, ಪೋಷಕಾಂಶ ಭರಿತ ಆಹಾರವನ್ನು ಹೆಚ್ಚು ಕೊಡಬೇಕು. ಹೀಗಾಗಿಯೇ ವೈದ್ಯರು ಮಕ್ಕಳಿಗೆ ಹಣ್ಣು, ಸೊಪ್ಪು ತರಕಾರಿಗಳನ್ನು ಹೆಚ್ಚು ಕೊಡುವಂತೆ ಸಲಹೆ ನೀಡುತ್ತಾರೆ. ಮಕ್ಕಳ ಆರೋಗ್ಯಕ್ಕೆ ಹಣ್ಣಿನ ಸೇವನೆ ತುಂಬಾ ಒಳ್ಳೆಯದು. ಯಾಕೆಂದರೆ ಹಣ್ಣುಗಳು ಹಲವು ವಿಟಮಿನ್‌ಗಳನ್ನು ಒಳಗೊಂಡಿರುತ್ತವೆ. ಆದ್ರೆ ಮಕ್ಕಳಿಗೆ ಹಣ್ಣನ್ನೇ ಕೊಡೋದು ಒಳ್ಳೆಯದಾ, ಹಣ್ಣಿನ ಜ್ಯೂಸ್ ಕೊಡೋದು ಬೆಸ್ಟಾ? ಈ ಬಗ್ಗೆ ಡಾ. ಪ್ರವೀಣ್ ಮಾಹಿತಿ ನೀಡಿದ್ದಾರೆ.