Feb 15, 2024, 3:56 PM IST
ಪರೀಕ್ಷಾ ಸಮಯ ಹತ್ತಿರ ಬಂದಿದೆ. ಕೆಲವು ವಿದ್ಯಾರ್ಥಿಗಳು ಪ್ರತಿ ಪರೀಕ್ಷೆಗೂ ಮುನ್ನ ಪರೀಕ್ಷೆಯ ಒತ್ತಡಕ್ಕೆ ಒಳಗಾಗುತ್ತಾರೆ. ಅಂತೆಯೇ ಈಗಾಗಲೇ ಸಾಕಷ್ಟು ವಿದ್ಯಾರ್ಥಿಗಳು ಪರೀಕ್ಷೆಯ ಭಯ, ಆತಂಕ, ಒತ್ತಡದಲ್ಲಿ ಬಳಲುತ್ತಿದ್ದಾರೆ. ಎಕ್ಸಾಂ ಟೈಂ ಮಕ್ಕಳ ಪಾಲಿಗೆ ತುಂಬಾ ಕಷ್ಟಕರವಾಗಿದೆ. ಓದುವ ಬಗ್ಗೆ ಹೆಚ್ಚು ಒತ್ತಡವನ್ನು ಅನುಭವಿಸುತ್ತಾರೆ. ಹೆಚ್ಚು ಕಿರಿಕಿರಿ, ಓದಲು ಸಾಧ್ಯವಾಗದೆ ತೊಂದರೆ ಪಡುತ್ತಾರೆ. ಓದಿನ ಬಗ್ಗೆ ಗಮನ ಕೊಡಲಾಗದೆ ಒದ್ದಾಡುತ್ತಾರೆ. ಮುಖ್ಯವಾಗಿ ಪರೀಕ್ಷಾ ಸಮಯ ಹತ್ತಿರ ಬಂದಾಗ ಮಕ್ಕಳಲ್ಲಿ ಫೋಕಸಿಂಗ್ ಸಮಸ್ಯೆ ಕಾಡುತ್ತದೆ. ಇದಕ್ಕೇನು ಕಾರಣ. ಈ ಬಗ್ಗೆ ಮಕ್ಕಳ ನೇತ್ರತಜ್ಞೆ ಹಾಗೂ ಮೆಳ್ಳೆಗಣ್ಣು ತಜ್ಞೆ ಡಾ.ಸುಮೀತಾ ಮುತ್ತು ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಬಂದೇ ಬಿಟ್ಟಿತು ಪರೀಕ್ಷೆ; ಮಕ್ಕಳಲ್ಲಿ ಹೆಚ್ಚುವ ಒತ್ತಡ ನಿಯಂತ್ರಿಸೋದು ಹೇಗೆ?