Jul 14, 2023, 4:09 PM IST
ಅನಾರೋಗ್ಯಕರ ಜೀವನಶೈಲಿ, ಕಳಪೆ ಆಹಾರಪದ್ಧತಿಯಿಂದಾಗಿ ಇತ್ತೀಚಿನ ದಿನಗಳಲ್ಲಿ ಅನೇಕರು ಕಿಡ್ನಿ ಸ್ಟೋನ್ ಅಥವಾ ಮೂತ್ರಪಿಂಡದಲ್ಲಿ ಕಲ್ಲು ಉಂಟಾಗುವ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಮೂತ್ರಪಿಂಡದ ಕಲ್ಲುಗಳು ಮೂತ್ರಪಿಂಡದೊಳಗೆ ರೂಪುಗೊಳ್ಳುವ ಖನಿಜಗಳು ಮತ್ತು ಲವಣಗಳಿಂದ ಮಾಡಲ್ಪಟ್ಟ ಘನ ದ್ರವ್ಯರಾಶಿಯಾಗಿದೆ. ಮೂತ್ರವು ಕೇಂದ್ರೀಕೃತವಾದಾಗ ಮತ್ತು ಖನಿಜಗಳು ಸ್ಫಟಿಕೀಕರಣಗೊಂಡಾಗ ಮೂತ್ರಪಿಂಡದ ಕಲ್ಲುಗಳು ರೂಪುಗೊಳ್ಳುತ್ತವೆ. ಆದರೆ ಈ ರೀತಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಾಗ ಆಪರೇಷನ್ ಮಾಡುವುದು ಅನಿವಾರ್ಯವೇ ಎಂಬುದರ ಬಗ್ಗೆ ಮಣಿಪಾಲ್ ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಎಚ್. ಸುದರ್ಶನ ಬಲ್ಲಾಳ್ ಮಾಹಿತಿ ನೀಡಿದ್ದಾರೆ. ಈಗ ಬೇರೆ ಬೇರೆ ವಿಧಗಳ ಚಿಕಿತ್ಸೆ ಲಭ್ಯವಿರುವ ಕಾರಣ ಮೆಡಿಕಲೀ ಟ್ರೀಟ್‌ಮೆಂಟ್ ಕೊಡಲು ಸಾಧ್ಯವಾಗುತ್ತದೆ ಎಂದಿದ್ದಾರೆ.
Health Tips: ಈ ಲಕ್ಷಣ ಕಡೆಗಣಿಸಿದ್ರೆ ಕಿಡ್ನಿ ಕ್ಯಾನ್ಸರ್ ಅಪಾಯ ಹೆಚ್ಚು