Jul 25, 2023, 3:19 PM IST
ಬೆಡ್ ವೆಟ್ಟಿಂಗ್ ಅಥವಾ ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ ಮಾಡುವುದು ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಸಮಸ್ಯೆ. ಇದು ಕಾಯಿಲೆ ಅಲ್ಲ. ಆದರೆ ಕೆಲವು ಮಕ್ಕಳಲ್ಲಿ ಮೂತ್ರಚೀಲದ ಸಾಮರ್ಥ್ಯ ಹೆಚ್ಚಿರುವುದಿಲ್ಲ. ಹೀಗಾಗಿ ಹಾಸಿಗೆಯಲ್ಲೇ ಮೂತ್ರ ಮಾಡುತ್ತಾರೆ. ಸ್ವಾಭಾವಿಕವಾಗಿ ಮಕ್ಕಳಲ್ಲಿ ಮೂತ್ರಚೀಲದಲ್ಲಿ ಮೂತ್ರದ ಸಂಗ್ರಹ ಸಾಮರ್ಥ್ಯ ಮಗು ಬೆಳೆಯುತ್ತಾ ಹೋದಂತೆ ಹೆಚ್ಚುತ್ತಾ ಹೋಗುತ್ತದೆ. ಮಕ್ಕಳು ಬೆಳೆಯುತ್ತಾ ಹೋದಂತೆ, ಕ್ರಮೇಣ ಈ ಬೆಡ್ ವೆಟ್ಟಿಂಗ್ ನಿಲ್ಲುತ್ತದೆ. ಸ್ವಾಭಾವಿಕವಾಗಿ ಹಾಸಿಗೆಯಲ್ಲಿನ ಮೂತ್ರ ವಿಸರ್ಜನೆಯು ಐದು ವರ್ಷದ ತನಕ ಸಾಮಾನ್ಯವಾಗಿ ಕಂಡುಬಂದರೂ ಆ ನಂತರವೂ ಉಳಿದುಕೊಂಡರೆ ಅದನ್ನು ಸರಿಪಡಿಸುವುದು ಅವಶ್ಯವಾಗುತ್ತದೆ. ಮಕ್ಕಳು ರಾತ್ರಿ ಹಾಸಿಗೆಯಲ್ಲಿ ಮೂತ್ರ ಮಾಡುವುದನ್ನು ತಪ್ಪಿಸಲು ಏನು ಮಾಡಬಹುದು. ಇಲ್ಲಿದೆ ಮಾಹಿತಿ.