Mar 9, 2023, 2:30 PM IST
ಇತ್ತೀಚಿಗೆ ಹಾರ್ಟ್‌ಅಟ್ಯಾಕ್‌ನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಗಣನೀಯವಾಗಿ ಹೆಚ್ತಿದೆ. ಮಕ್ಕಳು, ಯುವಕರು, ವೃದ್ಧರು ಎನ್ನದೆ ಎಲ್ಲರೂ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಡ್ಯಾನ್ಸ್ ಕ್ಲಾಸ್, ಗ್ರೌಂಡ್, ಮದುವೆ ಮನೆ ಹೀಗೆ ಎಲ್ಲೆಂದರಲ್ಲಿ ಜನರು ಕುಸಿದು ಬಿದ್ದು ಸಾವನ್ನಪ್ಪುತ್ತಿದ್ದಾರೆ. ಹೀಗಿರುವಾಗ ಅದರಲ್ಲೂ ಮುಖ್ಯವಾಗಿ ಆ ಜವರಾಯನ ಯಮಪಾಶ ಯುವಕರಿಗೇ ಶಾಪವಾಗಿದ್ಯೇನೋ ಅನ್ನುಸ್ತಿದೆ.. ಕೋವಿಡ್ ಬಳಿಕ ಈ ಸಾವಿನ ಲೆಕ್ಕ ತೆಗೆದುನೋಡಿದ್ರೆ ಇನ್ನೂ ಭಯವಾಗುತ್ತೆ.. ಯಾಕಂದ್ರೆ, ಇತ್ತೀಚಿನ ದಿನಗಳಲ್ಲಿ ಯುವಕರ ಹಾರ್ಟ್ ಅಟ್ಯಾಕ್ ಸಾಧ್ಯತೆ 20% ಏರಿಕೆಯಾಗಿದೆ ಎಂಬುದು ವರದಿಗಳಿಂದ ತಿಳಿದುಬಂದಿದೆ. ಈ ಮಹಾ ಅಪಾಯದಿಂದ ಪಾರಾಗೋಕೆ ಮಾರ್ಗವೇನು ? ಈ ಬಗ್ಗೆ ತಜ್ಞರು ಏನ್ ಹೇಳ್ತಾರೆ ನೋಡೋಣ.
ಹೆಚ್ತಿದೆ ಸಡನ್ ಹಾರ್ಟ್‌ಅಟ್ಯಾಕ್ ಕೇಸ್, ದಿನಕ್ಕೆ 11 ನಿಮಿಷ ವಾಕ್ ಮಾಡಿ ಜೀವ ಉಳಿಸಿಕೊಳ್ಬೋದಾ?