Jun 2, 2023, 3:00 PM IST
ಇತ್ತೀಚಿನ ವರ್ಷಗಳಲ್ಲಿ ಮಧುಮೇಹ ಹಲವರನ್ನು ಕಾಡುವ ಸಮಸ್ಯೆ. ಮಧುಮೇಹ ಹೊಂದಿರುವ ಪ್ರತಿ 3 ವಯಸ್ಕರಲ್ಲಿ ಒಬ್ಬರು ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಅಧ್ಯಯನದಿಂದ ತಿಳಿದುಬಂದಿದೆ. ಅದರಲ್ಲೂ ಡಯಾಬಿಟಿಕ್ ಕಿಡ್ನಿ ಡಿಸೀಸ್ ಎಂದು ಕರೆಯಲ್ಪಡುವ ಮಧುಮೇಹ ಕಾಯಿಲೆಯಿಂದ ಮೂತ್ರಪಿಂಡದ ತೊಂದರೆಗಳು ಉಂಟಾಗುತ್ತವೆ. ಮೂತ್ರಪಿಂಡದ ಫಿಲ್ಟರ್‌ಗಳಿಗೆ ಹಾನಿಯಾದಾಗ ಮೂತ್ರಪಿಂಡವು ಅಸಹಜ ಪ್ರಮಾಣದ ಪ್ರೋಟೀನ್‌ಗಳನ್ನು ರಕ್ತದಿಂದ ಮೂತ್ರಕ್ಕೆ ಬಿಡುಗಡೆ ಮಾಡಲು ಪ್ರಾರಂಭಿಸುತ್ತದೆ. ಇದರಿಂದ ಮಧುಮೇಹ ಮೂತ್ರಪಿಂಡ ಕಾಯಿಲೆ ಸಂಭವಿಸುತ್ತದೆ. ಈ ಸ್ಥಿತಿಯು ದೇಹಕ್ಕೆ ಅಪಾಯಕಾರಿಯಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಡಾ.ಹೆಚ್ ಸುದರ್ಶನ್ ಬಲ್ಲಾಳ್ ನೀಡಿದ್ದಾರೆ.