ಡ್ರ್ಯಾಗನ್ ದೇಶದಲ್ಲಿ ಏನಾಗ್ತಿದೆ ? ಜಗತ್ತಿಗೂ ಕಾದಿದೆಯಾ ಅಪಾಯ? ಭಾರತದ ಸ್ಥಿತಿ ಏನು?

Dec 22, 2022, 12:05 PM IST

ಚೀನಾದಲ್ಲಿ ಕೊರೋನಾ ಅಬ್ಬರ ಹೆಚ್ಚಾಗಿದೆ. 90 ದಿನಗಳಲ್ಲಿ ಇಲ್ಲಿ 25 ಲಕ್ಷ ಹೆಣ ಬೀಳಲಿದೆ ಎಂದು ವಿಜ್ಞಾನಿಗಳು ಭವಿಷ್ಯ ನುಡಿದಿದ್ದಾರೆ. ಈಗಾಗಲೇ ಸೋಂಕು ಎಲ್ಲೆಡೆ ಹರಡಿದ್ದು ಜನರು ನರಳಾಡುತ್ತಿದ್ದಾರೆ. ಕೊರೋನಾಗೆ ಪ್ರತಿಯಾಗಿ ಚೀನಾ ಕೊಟ್ಟಿದ್ದು ವ್ಯಾಕ್ಸಿನ್ ಅಲ್ಲ ವಿಷಪ್ರಾಶನ ಎಂದು ಹೇಳಲಾಗ್ತಿದೆ. ಚೀನಾ ಮಾಡಿದ ಪಾಪ ಫಲ ತನ್ನನ್ನೇ ಕಾಡುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ. 
ಚೀನಾವನ್ನು ಹೊರತುಪಡಿಸಿ, BF.7 ಭಾರತ, USA, UK ಮತ್ತು ಬೆಲ್ಜಿಯಂ, ಜರ್ಮನಿಯಂತಹ ಅನೇಕ ಯುರೋಪಿಯನ್ ರಾಷ್ಟ್ರಗಳು ಸೇರಿದಂತೆ ಪ್ರಪಂಚದಾದ್ಯಂತದ ಇತರ ದೇಶಗಳಲ್ಲಿ ಕಂಡುಬಂದಿದೆ. ಫ್ರಾನ್ಸ್ ಮತ್ತು ಡೆನ್ಮಾರ್ಕ್‌ನಲ್ಲಿ ವೈರಸ್ ಹರಡುತ್ತಿದೆ.

ಕೋವಿಡ್ ಕಡಿಮೆಯಾಯ್ತು ನಿಜ, ಆದ್ರೂ ಮಾಸ್ಕ್‌ ಧರಿಸೋದು ಬೆಸ್ಟ್ ಅಂತಾರೆ ತಜ್ಞರು