vuukle one pixel image

ಸಿನಿಲೋಕದ ಸುಂದರಿಯರ ಸೌಂದರ್ಯದ ಸೀಕ್ರೆಟ್ಟು, 44ರಲ್ಲೂ ಕರೀನಾ ಕಪೂರ್ ಬ್ಯೂಟಿ ರಹಸ್ಯವಿದು!

Gowthami K  | Updated: Mar 23, 2025, 11:31 AM IST

ಬಾಲಿವುಡ್ ಬೆಡಗಿ , ಕಪೂರ್ ಖಾಂದಾನಿನ ಕುವರಿ ಕರೀನಾ ಕಪೂರ್​ಗೀಗ ಭರ್ತಿ 44 ವರ್ಷ ವಯಸ್ಸು. ಕರೀನಾ ಲುಕ್​ ನೋಡ್ತಿದ್ರೆ ಇಷ್ಟು ವಯಸ್ಸು ಅಂತ ನಂಬೋದಕ್ಕೆ ಸಾಧ್ಯ ಆಗ್ತಾ ಇಲ್ಲಾ ಅಲ್ವಾ. ಈಗಲೂ ಇಪ್ಪತ್ತರ ತರುಣಿಯಂತಿರೋ ಕರೀನಾ ನಂಗೇ ವಯಸ್ಸೇ ಆಗಲ್ಲ ಅಂತ ನಗೆ ಬೀರ್ತಾರೆ.

ಕರೀನಾ ತನ್ನ ಈ ಮಾಸದ ಸೌಂದರ್ಯದ ಗುಟ್ಟೇನು ಅನ್ನೋದನ್ನ ಕೂಡ ಫ್ಯಾನ್ಸ್ ಜೊತೆ ಹಂಚಿಕೊಳ್ತಾ ಇರ್ತಾರೆ. ನಿಯಮಿತವಾಗಿ ಯೋಗ, ವ್ಯಾಯಾಮ ಮಾಡೋ ಈ ಬ್ಯೂಟಿ ವಿಶೇಷವಾಗಿ ಏರೋಬಿಕ್ಸ್​ನಲ್ಲಿ ಪರಿಣಿತೆ.

ಮದುವೆಯಾಗಿ ಎರಡು ಮಕ್ಕಳ  ತಾಯಿಯಾಗಿರೋ ಕರೀನಾ ಈ ಕಾಲದ ನಟಿಯರಿಗೂ ಟಕ್ಕರ್ ಕೊಡ್ತಾರೆ. ಈ ಚಿರಯುವತಿಯ ಸೌಂದರ್ಯ ಸೀಕ್ರೆಟ್ ತಿಳಿದುಕೊಳ್ಳೋದಕ್ಕೆ ನೀವು ಬೇಕಾದ್ರೆ ಈಕೆಯ ವ್ಲಾಗ್ಸ್ ನೋಡಿ. ಆದ್ರೆ ನೋಡ್ತಾ ನೋಡ್ತಾ ಕರೀನಾ ಸೌಂದರ್ಯದ ಬಲೆಯೊಳಗೆ ಬಂಧಿಯಾದ್ರೆ ನಾವಂತೂ ಜವಾಬ್ದಾರರಲ್ಲ.