ಕಿಡ್ನಾಪರ್ಸ್‌ನಿಂದ ತಪ್ಪಿಸಿಕೊಂಡ ಬಂದ 12 ವರ್ಷದ ಬಾಲಕ, ಹಾವೇರಿಯಲ್ಲಿ ಸಿನಿಮೀಯ ರೀತಿ ಘಟನೆ!

Dec 2, 2024, 4:27 PM IST

ಹಾವೇರಿ(ಡಿ.02) ರಾಜ್ಯದಲ್ಲಿ ಅಪರಾಧ ಚಟುವಟಿಕೆ ಹೆಚ್ಚುತ್ತಿದೆ. ಇದೀಗ ಹಾವೇರಿಯಲ್ಲಿ ಅಪಹರಣಕಾರರು 12 ವರ್ಷದ ಬಾಲಕ ಅಯಾನ್‌ನನ್ನು ಮಾರುತಿ ಇಕೋ ವ್ಯಾನ್‌ನಲ್ಲಿ ಅಪಹರಿಸಿದ್ದಾರೆ. ಡಿಸೆಂಬರ್ 1ರಂದು ಸಂಜೆ 7 ಗಂಟೆಗೆ ಮನೆಯಿಂದ ಮದರಸಾ ಕಡೆ ತೆರಳುತ್ತಿದ್ದ ವೇಳೆ ಅಪಹರಣಕಾರರು ವಾಹನದ  ಮೂಲಕ ಆಗಮಿಸಿದ್ದಾರೆ. ಮಾಸ್ಕ್ ಹಾಗೂ ಮುಖವಾಡ ಧರಿಸಿದ್ದ ಕಿಡ್ನಾಪರ್ಸ್ ಅಯಾನ್ ಎತ್ತಿ ಕಾರಿನಲ್ಲಿ ಹಾಕಿ ತೆರಳಿದ್ದಾರೆ. ಆದರೆ ಮೂತ್ರ ವಿಸರ್ಜನೆ ಕಾರಣ ನೀಡಿ ವಾಹನ ನಿಲ್ಲಿಸಿದ ವೇಳೆ ಅಯಾನ್ ಓಣಿ ಮೂಲಕ ತಪ್ಪಿಸಿಕೊಂಡು ಮನೆಗೆ ಮರಳಿದ್ದಾನೆ. ಬಳಿಕ ಪೋಷಕರಿಗೆ ಮಾಹಿತಿ ನೀಡಿದ್ದಾನೆ. ಪೋಷಕರು ದೂರು ದಾಖಲಿಸಿದ್ದಾರ.ೆ