ಮೇ 16ರಂದು ಈ ವರ್ಷದ ಮೊದಲ ಚಂದ್ರಗ್ರಹಣ ಸಂಭವಿಸುತ್ತಿದೆ. ಇದು ನಡೆವ ಸಮಯ, ಸೂತಕ ವಿಚಾರ, ಕೈಗೊಳ್ಳಬೇಕಾದ ಕ್ರಮಗಳು ಎಲ್ಲವನ್ನೂ ಜ್ಯೋತಿಷಿಗಳಾದ ಡಾ. ಹರೀಶ್ ಕಶ್ಯಪ್ ವಿವರಿಸುತ್ತಾರೆ.
ಈ ವರ್ಷದ ಮೊದಲ ಕೇತುಗ್ರಸ್ತ ಚಂದ್ರಗ್ರಹಣವು ಮೇ 16ರಂದು ಸಂಭವಿಸುತ್ತದೆ. ಇದು ಭಾರತದಲ್ಲಿ ಗೋಚರವಾಗುವುದಿಲ್ಲ. ಹಾಗಾಗಿ ಆಚರಣೆ ಇರುವುದಿಲ್ಲ. ಆದರೆ, ಗ್ರಹಣದ ಪ್ರಭಾವವು ಇಡೀ ಜಗತ್ತಿನ ಸಕಲ ಚರಾಚರಗಳ ಮೇಲಿರುತ್ತದೆ. ಈ ಬಾರಿ ಚಂದ್ರ ಅಧಿಪತಿಯಾಗಿರುವ ಸೋಮವಾರವೇ ಚಂದ್ರ ಗ್ರಹಣ ಬಂದಿರುವುದು ಬಹಳ ವಿಶೇಷವಾಗಿದೆ.
ಈ ಸಂದರ್ಭದಲ್ಲಿ ಸೂರ್ಯ, ಭೂಮಿ ಮತ್ತು ಚಂದ್ರ ಸಮಾನ ರೇಖೆಯಲ್ಲಿ ಬರುವುದರಿಂದ ಸೂರ್ಯನ ಬೆಳಕು ನೇರವಾಗಿ ಚಂದ್ರನ ಮೇಲೆ ಬೀಳದೆ, ಭೂಮಿಯ ನೆರಳಾಗಿ ಚಂದ್ರನಲ್ಲಿ ಕಾಣುತ್ತದೆ. ಇದನ್ನೇ ಚಂದ್ರಗ್ರಹಣ ಎನ್ನುವುದು. ಇದರಿಂದ ಚಂದ್ರನು ಕೆಂಪಾಗಿ ಕಾಣುತ್ತಾನೆ. ಹೀಗೆ ಕೆಂಪಾಗಿ ಕಾಣುವ ಚಂದ್ರನನ್ನು ಬ್ಲಡ್ ಮೂನ್ ಎನ್ನಲಾಗುತ್ತದೆ. ಇದು ಕಾಣಿಸುವ ಸಮಯ, ನಾವು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಸೇರಿದಂತೆ ಈ ಕುರಿತ ಎಲ್ಲ ಗೊಂದಲಗಳನ್ನು ನೀಗಿಸಲಿದ್ದಾರೆ ಡಾ. ಹರೀಶ್ ಕಶ್ಯಪ್.
ನಿಮಗಿದೆಯೇ ಕೂತಲ್ಲೇ ಕೋಟಿ ಕೋಟಿ ಲಾಭ ನೋಡುವ ಬಹುಭಾಗ್ಯ ಯೋಗ?
ಕೇತುಗ್ರಸ್ತ ಚಂದ್ರಗ್ರಹಣದಿಂದ ಕುಂಭಶನಿಯ ತೀವ್ರಗತಿ ವಕ್ರೀಚಾರ ಉಂಟಾಗುತ್ತದೆ. ಕುಜ-ರವಿ ಅತಿ ಬಲ ಹೊಂದಿರುವ ಮಾಸವಿದಾಗಿದ್ದು, ಇದರಿಂದ ಯಾವೆಲ್ಲ ಪ್ರಭಾವಗಳನ್ನು ಎದುರಿಸಬೇಕಾಗುತ್ತದೆ ತಿಳಿಯೋಣ.