Aug 27, 2022, 1:26 PM IST
ಮದುವೆ, ಪಾರ್ಟಿ, ಫಂಕ್ಷನ್‌ಗಳಿಗೆಂದು ಹೋಗುವಾಗ ಧರಿಸಲು ಎಲ್ಲರನ್ನೂ ಸೆಳೆಯುವ ಅಟ್ರ್ಯಾಕ್ಟಿವ್ ಡ್ರೆಸ್ ಬೇಕೆಂದು ಬಯಸುತ್ತಾರೆ. ಆದ್ರೆ ಇಂಥಾ ಗೌನ್ ಎಲ್ಲಾ ಕಡೆ ಸಿಗುವುದಿಲ್ಲ. ಆದ್ರೆ ಬುಕ್ ಮೈ ಗೌನ್‌ನಲ್ಲಿ ಸ್ಟೈಲಿಶ್ ಗೌನ್‌ಗಳು ಸಿದ್ಧವಿದ್ದು, ಯಾವುದೇ ಸಮಾರಂಭಗಳಿಗೆ ಧರಿಸಬಹುದಾಗಿದೆ. ಬುಕ್ ಮೈ ಗೌನ್‌ನಲ್ಲಿ ಡ್ರೆಸಸ್‌ನ್ನು ಗ್ರಾಹಕರ ಅಭಿರುಚಿಗೆ ತಕ್ಕಂತೆ ಭಿನ್ನ-ವಿಭಿನ್ನವಾಗಿ ಸ್ಟಿಚ್ ಸಹ ಮಾಡಿಕೊಡುತ್ತಾರೆ.
ಯಾವ ಮೈ ಬಣ್ಣಕ್ಕೆ ಯಾವ ಬಣ್ಣದ ಸೀರೆ ಸೂಕ್ತ? ಇಲ್ಲಿದೆ ಟಿಪ್ಸ್
ನಾವು ಎಲ್ಲಾ ವಿಧದ ಗೌನ್‌ಗಳನ್ನು ಸ್ಟಿಚ್ ಮಾಡಿಕೊಡುತ್ತೇವೆ. ಸಾಂಪ್ರದಾಯಿಕ ಮಾಡರ್ನ್ ಗೌನ್‌ಗಳು ನಮ್ಮಲ್ಲಿ ಲಭ್ಯವಿದೆ. ಮಾತ್ರವಲ್ಲ ಮೆನ್ಸ್ ವೇರ್, ಕೋಟ್, ಮಾಮ್ ಡ್ರೆಸ್ ಎಲ್ಲವೂ ಲಭ್ಯವಿದೆ. ಇದನ್ನು ನಾವು ರೆಂಟ್‌ಗೂ ಕೊಡುತ್ತೇವೆ. ಮದುವೆಗೆ ಬೇಕಾದ ಎಲ್ಲಾ ಡ್ರೆಸ್‌ಗಳು, ಮಂಟಪ ಡೆಕೊರೇಷನ್ ಐಟಮ್ ನಮ್ಮಲ್ಲಿ ಸಿಗುತ್ತದೆ. ಎಲ್ಲವೂ ಒಂದಕ್ಕಿಂತ ಒಂದು ಭಿನ್ನವಾಗಿರುತ್ತದೆ. ಎಂದು ಬುಕ್ ಮೈ ಗೌನ್‌ನ ಡೈರೆಕ್ಟರ್ ಪ್ರತಿಮಾ ಹೇಳುತ್ತಾರೆ. ಮಾತ್ರವಲ್ಲ ಹದಿನೈದು ದಿನಕ್ಕೊಮ್ಮೆ ಹೊಸ ಹೊಸ ಡಿಸೈನ್‌ನಲ್ಲಿ ಡ್ರೆಸ್‌ಗಳನ್ನು ಸ್ಟಿಚ್ ಮಾಡಿ ಇಡಲಾಗುತ್ತದೆ ಎಂದವರು ತಿಳಿಸಿದ್ದಾರೆ. 2500ರಿಂದ ಹಿಡಿದು 10,000ದ ವರೆಗಿನ ಆಕರ್ಷಕ ದಿರಿಸುಗಳು ಇಲ್ಲಿ ಲಭ್ಯವಿದೆ.