Sep 13, 2020, 12:44 PM IST
ಬೆಂಗಳೂರು (ಸೆ. 13): ಸಂಜನಾ - ರಾಗಿಣಿ ನಡುವೆ ಇದ್ದ 10 ವರ್ಷಗಳ ದುಷ್ಮನಿ ಕರಗಿದೆ. ಒಬ್ಬರ ಮುಖ ಕಂಡ್ರೆ ಇನ್ನೊಬ್ಬರಿಗೆ ಆಗಲ್ಲ ಅಂತಿದ್ದವರು ಈಗ ಕುಚಿಕೂ ಸ್ನೇಹಿತೆಯರಾಗಿದ್ದಾರೆ. ಒಂದೆ ತಟ್ಟೆಯಲ್ಲಿ ಊಟ, ಒಟ್ಟಿಗೆ ನಿದ್ದೆ, ಒಂದಷ್ಟು ಉಭಯ ಕುಶಲೋಪರಿ.
ಸಂಜನಾ- ರಾಗಿಣಿ ನಡುವೆ ಜಗಳ ಶುರುವಾಗುವುದಕ್ಕೆ ಇಲ್ಲಿದೆ 10 ಕಾರಣಗಳು!
ಡ್ರಗ್ಸ್ ಮಾಫಿಯಾದಲ್ಲಿ ವಿಚಾರಣೆಯಲ್ಲಿ ಸಿಲುಕಿರುವ ರಾಗಿಣಿ -ಸಂಜನಾ ಒಂದೆ ಕೋಣೆಯಲ್ಲಿದ್ದಾರೆ. ಮೊದಲೇ ರಾಗಿಣಿ ಮೇಲೆ ಕೋಪವಿದ್ದ ಸಂಜನಾ ನಿನಗೀಗ ಖುಷಿಯಾಯ್ತಾ? ಎಂದು ರೇಗಾಡಿದ್ಧಾರೆ. ಆದರೆ ಆದ್ಯಾವುದೋ ಗಳಿಗೆಯಲ್ಲಿ ಇಬ್ಬರೂ ದುಷ್ಮನಿ ಮರೆತು ಫುಲ್ ಕ್ಲೋಸ್ ಆಗ್ಬಿಟ್ಟಿದ್ದಾರೆ. ಹಾಗಾದರೆ ಇಬ್ಬರನ್ನೂ ಒಂದು ಮಾಡಿದ್ದೇನು? ಇಲ್ಲಿದೆ ಮಾದಕ ನಟಿಯರ ಮತ್ತಿನ ಕಥೆ!