Mar 23, 2023, 11:59 AM IST
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ.. ನಮ್ಮ ಸ್ಯಾಂಡಲ್ವುಡ್ ಚೆಲುವೆಯರು ಹಬ್ಬದಂದು ಸಡಗರದಿಂದ ಸಿಂಗರಿಸಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಮಿಂಚಿದ್ದು ಹೀಗೆ. ಕೆಡಿ ಸಿನಿಮಾಗಾಗಿ ಮತ್ತೆ ಕನ್ನಡಕ್ಕೆ ಬಂದ ಶಿಲ್ಪಾ ಶೆಟ್ಟಿ ರೆಟ್ರೋ ಲುಕ್ ರಿವೀಲ್ ಆಗಿದ್ದು ಶಿಲ್ಪಾ ಶೆಟ್ಟಿ ಭರ್ಜರಿಯಾಗಿ ಕಾಣುತ್ತಿದ್ದಾರೆ. ಹಾಗೆಯೇ ಸತ್ಯವತಿಯಾಗಿ ಧ್ರುವ ನಾಯಕಿಯಾದ ರೀಷ್ಮಾ ನಾಣಯ್ಯಾ ಕೂಡ ಮುದ್ದಾಗಿ ಕಾಣಿಸಿಕೊಳ್ಳುತ್ತಿದ್ದು ಹಬ್ಬಕ್ಕೆ ಸತ್ಯವತಿ ಲುಕ್ ಕೂಡ ರೀವೀಲಾಗಿದೆ. ನಟಿ ಅಮೂಲ್ಯಾ ಹಬ್ಬದ ಉಡುಗೆಯಲ್ಲಿ ಮಿಂಚಿದ್ದು ಫೋಟೊ ಹಂಚಿಕೊಂಡಿದ್ದಾರೆ. ನಟಿ ಕಾರುಣ್ಯ ಪ್ರಗ್ನ, ಕೂಡ ಹ್ಬಬದಂದು ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ್ದಾರೆ. ಬೃಂದಾ ಆಚಾರ್ಯ ಕೌಸಲ್ಯ ಸುಪ್ರಜಾ ಪೋಸ್ಟರ್ ಕೂಡ ರಿಲೀಸ್ ಆಗಿದೆ. ಟಗರು ಪಲ್ಯ ಹೊಸಾ ಪೋಸ್ಟರ್ ಕೂಡ ಇದೇ ದಿನ ರಿಲೀಸ್ ಆಗಿದೆ. ಹಿಂದೂ ಸಂಪ್ರದಾಯದಂತೆ ಯುಗಾದಿ ನಮ್ಮ ಹೊಸಾ ವರ್ಷ ಹಾಗಾಗಿ ಹೊಸ ವರ್ಷಕ್ಕೆ ಹಲವು ಸಿನಿಮಾಗಳ ಪೋಸ್ಟರ್‌ಗಳೂ ರಿಲೀಸ್ ಆಗಿವೆ.