Sapta Sagaradache Ello: ರಿಲೀಸ್‌ಗೂ ಮುನ್ನ ರೆಕಾರ್ಡ್ ಬ್ರೇಕ್ ಮಾಡಿದ ರಕ್ಷಿತ್‌ ಶೆಟ್ಟಿ ಸಿನಿಮಾ..!

Sep 1, 2023, 8:43 PM IST

ಅವನೇ ಶ್ರೀಮನ್ನಾರಾಯನ ಸಿನಿಮಾದಲ್ಲಿ ರಗಡ್ ಲೂಕ್.. ಚಾರ್ಲಿ ಸಿನಿಮಾದಲ್ಲಿ ಸಿಂಪಲ್ ಆಗಿ ಆಕ್ಟ್ ಮಾಡಿ ಸಿಂಪಲ್ ಸ್ಟಾರ್ ಅನ್ನೊ ಪಟ್ಟ ಗಿಟ್ಟಿಸಿಕೊಂಡ ಸ್ಟಾರ್ ಅಂದ್ರೆ ನಮ್ ರಕ್ಷಿತ್ ಶೆಟ್ರು, ಆದ್ರೆ ಈಗ ಸ್ಯಾಂಡಲ್ವುಡ್ನಲ್ಲಿ ಮತ್ತೆ ಕಮಾಲ್ ಮಾಡೋಕೆ ರಕ್ಷಿತ್ ರೆಡಿಯಾಗಿದ್ದಾರೆ. ರಕ್ಷಿತ್ ಶೆಟ್ಟಿ ಅಭಿನಯದ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾವು ಭಾರಿ ನಿರೀಕ್ಷೆ ಮೂಡಿಸಿದೆ. ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾದ ನಂತರ ಮತ್ತೊಮ್ಮೆ ನಿರ್ದೇಶಕ ಹೇಮಂತ್ ಎಂ ರಾವ್ ಮತ್ತು ರಕ್ಷಿತ್ ಶೆಟ್ಟಿ ಅವರು ಸಪ್ತ ಸಾಗರದಾಚೆ ಎಲ್ಲೋ ಚಿತ್ರಕ್ಕಾಗಿ ಒಂದಾಗಿದ್ದಾರೆ. 

ಸೆ.1ರಂದು 'ಸಪ್ತ ಸಾಗರದಾಚೆ ಎಲ್ಲೋ'- ಸೈಡ್ ಎ ಸಿನಿಮಾ ತೆರೆಗೆ ಬರುತ್ತಿದ್ದು, ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ. ವಿಶೇಷ ಏನಪ್ಪ ಅಂದ್ರೆ, ಪೇಯ್ಡ್ ಪ್ರೀಮಿಯರ್ ಶೋಗೆ ಎಲ್ಲೆಲ್ಲಿ ಬುಕಿಂಗ್ ಓಪನ್ ಮಾಡಲಾಗಿದೆಯೋ, ಅಲ್ಲೆಲ್ಲ ಈಗಾಗಲೇ ಬಹುತೇಕ ಟಿಕೆಟ್ಸ್ ಸೇಲ್ ಆಗಿವೆ. ಜನರು ಮುಗಿಬಿದ್ದು ಟಿಕೆಟ್ಸ್ ಬುಕ್ ಮಾಡುತ್ತಿದ್ದಾರೆ. ಟಿಕೆಟ್ ದರ ಬೆಂಗಳೂರಿನ ಮಲ್ಟಿಪ್ಲೆಕ್ಸ್‌ಗಳಲ್ಲಿ 350 ರೂಪಾಯಿಗಳಿಂದ 900 ರೂಪಾಯಿವರೆಗೂ ಇದೆ. ಇನ್ನು ರಕ್ಷಿತ್ ಶೆಟ್ಟಿ ಸಿನಿಮಾ ಅಂದ್ರೆ ಅಲ್ಲಿ ಲವ್, ಎಮೊಷನ್, ರೊಮ್ಯಾನ್ಸ್ ಎಲ್ಲವೂ ಇರತ್ತೆ ಆದ್ರೆ ಸಪ್ತ ಸಾಗರದಾಚೆ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ 2 ಶೇಡ್ನಲ್ಲಿ ಕಾಣಿಸಿಕೊಂಡಿದ್ದಾರೆ. 

ಒಂದು ಲವರ್ ಬಾಯ್, ಇನ್ನೊಂದು ರಗಡ್ ಲೂಕ್, ಆದ್ರಿಂದ ಪ್ರೇಕ್ಷಕ ಈ ಸಿನಿಮಾವನ್ನ ಅತಿ ಕುತೂಹಲದಿಂದ ಸಿನಿಮಾ ನೋಡೋಕೆ ಕಾತುರದಿಂದ ಕಾಯ್ತಿದ್ದಾನೆ. 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರವನ್ನು ಪರಮ್ವಃ ಸ್ಟುಡಿಯೋಸ್‌ ಬ್ಯಾನರ್‌ ಅಡಿ ರಕ್ಷಿತ್‌ ಶೆಟ್ಟಿ ನಿರ್ಮಿಸಿದ್ದು ಹೇಮಂತ್‌ ರಾವ್‌ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಇನ್ನು ನಟಿ ರುಕ್ಮಿಣಿ ಅವು ಬಿರ್ಬಲ್ ಸಿನಿಮಾ ಆದ್ಮೇಲೆ ಲೀಡ್ ರೋಲ್ನಲ್ಲಿ ರಕ್ಷೀತ್ ಶೆಟ್ಟಿ ಜೊತೆ ನಟಿಸುತ್ತಿದ್ದಾರೆ. ಆದ್ರೆ ರಕ್ಷಿತ್ ಸಿನಿಮಾ ಮೇಲೆ ಕೋಟಿ ಕೋಟಿ ಅಭಿಮಾನಿಗಳು ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದು, ಸಿನಿಮಾ ಸಪ್ತ ಸಾಗರದಾಚೆ ಶುಕ್ರವಾರ ಬಿಡುಗೆಡಯಾಗ್ತಿದೆ.