ಕೈ ತುತ್ತು ಕೊಟ್ಟು ಬೆಳೆಸಿದ ಮನೆಯನ್ನೇ ಮರೆತ ಕಿರಿಕ್ ಹುಡುಗಿ: ತಿರುಗೇಟು ಕೊಟ್ಟ ರಿಷಬ್ ಶೆಟ್ಟಿ

ಕೈ ತುತ್ತು ಕೊಟ್ಟು ಬೆಳೆಸಿದ ಮನೆಯನ್ನೇ ಮರೆತ ಕಿರಿಕ್ ಹುಡುಗಿ: ತಿರುಗೇಟು ಕೊಟ್ಟ ರಿಷಬ್ ಶೆಟ್ಟಿ

Published : Nov 23, 2022, 11:47 AM IST

ರಶ್ಮಿಕಾ ಮಂದಣ್ಣ ಇಂದು ಭಾರತೀಯ ಚಿತ್ರರಂಗದ ಟಾಪ್ ಹೀರೋಯಿನ್ ಲೀಸ್ಟ್‌ನಲ್ಲಿರೋ ಅಗ್ರಗಣ್ಯ ನಟಿ. ರಶ್ಮಿಕಾ ಮಾತ್ರ, ತಾನು ಈ ಮಟ್ಟಕ್ಕೆ ಬೆಳೆಯಲು ಕಾರಣವಾದ ಹತ್ತಿದ ಏಣಿಯನ್ನೇ ಒದ್ದು ಬಿಟ್ಟಿದ್ದಾರಾ..? ಹೀಗೊಂದು  ಚರ್ಚೆ ಬಣ್ಣದ ಜಗತ್ತಿನಲ್ಲಿ ಆಗುತ್ತಿದೆ.

ರಶ್ಮಿಕಾ ಮಂದಣ್ಣ ಇಂದು ಭಾರತೀಯ ಚಿತ್ರರಂಗದ ಟಾಪ್ ಹೀರೋಯಿನ್ ಲೀಸ್ಟ್‌ನಲ್ಲಿರೋ ಅಗ್ರಗಣ್ಯ ನಟಿ. ರಶ್ಮಿಕಾ ಮಾತ್ರ, ತಾನು ಈ ಮಟ್ಟಕ್ಕೆ ಬೆಳೆಯಲು ಕಾರಣವಾದ ಹತ್ತಿದ ಏಣಿಯನ್ನೇ ಒದ್ದು ಬಿಟ್ಟಿದ್ದಾರಾ..? ಹೀಗೊಂದು  ಚರ್ಚೆ ಬಣ್ಣದ ಜಗತ್ತಿನಲ್ಲಿ ಆಗುತ್ತಿದೆ. ಅದಕ್ಕೆ ಕಾರಣ ರಶ್ಮಿಕಾ ಸಂದರ್ಶನ ಒಂದರಲ್ಲಿ ಆಡಿರೋ ಮಾತುಗಳು. ಲಿಲ್ಲಿ ಹೇಳಿದ್ದನ್ನ ಕೇಳಿದ್ರೆ ಕೈ ತುತ್ತು ಕೊಟ್ಟು ಬೆಳೆಸಿದ ಮನೆಯನ್ನೇ ಕಿರಿಕ್ ಹುಡುಗಿ ಮರೆತಿದ್ದಾರೆ ಅಂತನಿಸುತ್ತೆ. ಎಂಥದ್ದೇ ಕಹಿ ಮನಸ್ಸಲ್ಲಿದ್ದರೂ ತನ್ನ ಮೊದಲ ಸಿನಿಮಾ ಬಗ್ಗೆ ಕೇಳಿದ್ರೆ ಯಾರೆ ನಟ ನಟಿಯಾದ್ರು ಮನಸ್ಸು ಬಿಚ್ಚಿ ಮಾತಾಡುತ್ತಾರೆ. ಆದ್ರೆ ಟಾಲಿವುಡ್ ಮನದನ್ನೆ ರಶ್ಮಿಕಾ ಹಾಗಲ್ಲ. ಸಂದರ್ಶನ ಒಂದರಲ್ಲಿ ರಶ್ಮಿಕಾಗೆ ಕಿರಿಕ್ ಪಾರ್ಟಿ ಸಿನಿಮಾಗೆ ಸೆಲೆಕ್ಟ್ ಆಗಿದ್ದು ಹೇಗೆ ಅನ್ನೋ ಪ್ರಶ್ನೆ ಎದುರಾಗಿತ್ತು. 

ಆದ್ರೆ ಲಿಲ್ಲಿ ಮಾತ್ರ ತನ್ನ ಮೊದಲ ಸಿನಿಮಾ ಹೆಸರು ಹೇಳದ ಕೋಟ್ ಅನ್ನುವ ಸನ್ನೆಯ ಮಾಡಿ ವ್ಯಂಗ್ಯ ಮಾಡಿದ್ದಾರೆ. ನಾನು ಕಾಲೇಜಿನಲ್ಲಿ ಓದುತ್ತಿದ್ದೆ. ಆ ಸಮಯದಲ್ಲಿ 'ನಿರ್ಮಾಣ ಸಂಸ್ಥೆಯೊಂದು ನನಗೆ ದುಂಬಾಲು ಬಿದ್ದು, ನಟಿಸುವಂತೆ ಕೇಳಿಕೊಂಡಿದ್ದರು ಅಂತ ಹೇಳಿದ್ದಾರೆ. ರಶ್ಮಿಕಾ ನಟಿಯಾಗೋಕೆ ಮೊದಲ ಗುರು ರಿಷಬ್ ಶೆಟ್ಟಿ. ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಸಾನ್ವಿಗೆ ಅಭಿನಯದ ಆ.ಆ,ಇ, ಈ ಹೇಳಿಕೊಟ್ಟಿದ್ದೇ ರಿಷಬ್. ಆದ್ರೆ ರಶ್ಮಿಕಾ ಮಂದಣ್ಣಗೆ ಈಗ ಕಿರಿಕ್ ಪಾರ್ಟಿ ಸಿನಿಮಾ ಬಗ್ಗೆ ಕೇಳಿದ್ರೆ ವ್ಯಂಗ್ಯವಾಡುತ್ತಾರೆ. ರಶ್ಮಿಕಾ ಆಡಿರೋ ಮಾತಿಗೆ ರಿಷಬ್ ರಶ್ಮಿಕಾಗೆ ಖಡತ್ ಆಗಿ ಉತ್ತರವನ್ನೂ ಕೊಟ್ಟಿದ್ದಾರೆ. ಸಂದರ್ಶನ ಒಂದರಲ್ಲಿ ಸಮಂತಾ, ರಶ್ಮಿಕಾ, ಕೀರ್ತಿ ಸುರೇಶ್, ಸಾಯಿ ಪಲ್ಲವಿ ಈ 4 ಜನರಲ್ಲಿ ಯಾರ ನಟನೆ ಇಷ್ಟ. ಯಾರ ಜೊತೆ ನಟಿಸುತ್ತೀರಾ ಅನ್ನೋ ಪ್ರಶ್ನೆ ರಿಷಬ್ಗೆ ಎದುರಾಗಿತ್ತು. 

ಇದಕ್ಕೆ ಉತ್ತರಿಸಿದ್ದ ರಿಷಬ್, ನೀವು ಹೇಳಿದ ಹೆಸರುಗಳಲ್ಲಿ ಈ ತರಹದ ನಟಿಯರು ನನಗೆ ಇಷ್ಟ ಇಲ್ಲ ಅಂತ ರಶ್ಮಿಕಾ ಮಾಡಿದ್ದ ಕೋಟ್ ರೀತಿಯಲ್ಲೇ ರಿಯಾಕ್ಷನ್ ಮಾಡಿ ರಶ್ಮಿಕಾ ಸ್ಟೈಲ್ನಲ್ಲೇ ಸಾನ್ವಿಗೆ ಮಾಂಜಾ ಕೊಟ್ಟಿದ್ದಾರೆ ರಿಷಬ್. ರಶ್ಮಿಕಾ ಮಂದಣ್ಣ ಬೆಂಗಳೂರಿನ ಕಾಲೇಜೊಂದರಲ್ಲಿ ಓದುತ್ತಿದ್ದ ಹುಡುಗಿ. ಆದ್ರೆ ರಶ್ಮಿಕಾ ಟ್ಯಾಲೆಂಟ್ ಹೊರ ಜಗತ್ತಿಗೆ ಗೊತ್ತಾಗುವಂತೆ ಮಾಡಿದ್ದು ರಿಷಬ್ ಶೆಟ್ಟಿ ನಿರ್ದೇಶನ ರಕ್ಷಿತ್ ಹೀರೋ ಆಗಿದ್ದ 'ಕಿರಿಕ್ ಪಾರ್ಟಿ' ಸಿನಿಮಾ. ಈ ಸಿನಿಮಾದಿಂದ ರಶ್ಮಿಕಾ ಸಾನ್ವಿಯಾಗಿ ರಾತ್ರಿ ಕಳೆದು ಬೆಳಗಾಗೋದ್ರೊಳಗೆ ಫೇಮಸ್ ಆದ್ರು. ಆ ನಂತರ ರಶ್ಮಿಕಾ ಯಾರ ಕೈಗು ಸಿಗದ ಪಾರಿವಾಳದಂತೆ ಪುರ್ ಅಂತ ಪಕ್ಕದ ತೆಲುಗು ಚಿತ್ರರಂಗಕ್ಕೆ ಹಾರಿದ್ರು. ಆದ್ರೆ ಇಂದು ರಶ್ಮಿಕಾ ತನ್ನ ಸಿನಿ ಜೀವನಕ್ಕೆ ಮೆಟ್ಟಿಲಾಗಿದ ಕಿರಿಕ್ ಪಾರ್ಟಿ ಅನ್ನೋ ಏಣಿಯನ್ನೇ ಒದ್ದು ಕೆಡವಿದಂತೆ ಮಾತನಾಡುತ್ತಿದ್ದಾರೆ. ರಶ್ಮಿಕಾರ ಈ ಮಾತನ್ನ ಸೂಕ್ಷ್ಮವಾಗಿ ಗಮನಿಸಿರೋ ನೆಟ್ಟಿಗರು ನೀವು ಯಾವ್ದೋ ದ್ವೇಷಕ್ಕೋ ಅಥವ ರಿಷಬ್-ರಕ್ಷಿತ್ ಬೆಳವಣಿಗೆ ಸಹಿಸಲಾಗದೇ ಈ ರೀತಿ ಮಾತನಾಡುತ್ತಿದ್ದೀರಾ.? ಅಂತ ರಶ್ಮಿಕಾಗೆ ಪ್ರಶ್ನೆ ಮಾಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
02:35ಬೆಳ್ಳಿತೆರೆ ಮೇಲೆ ಲಾರ್ಡ್ಸ್ ಅಂಗಳದ ಅಧಿಪತಿ, ‘ದಾದಾ’ಗಿರಿಯ ದಿನಗಳು! Sourav Ganguly ಬಯೋಪಿಕ್‌ ಫಸ್ಟ್ ಲುಕ್ ಔಟ್
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
Read more