
ಕನ್ನಡ ಚಿತ್ರರಂಗದ ಹೆಸರಾಂತ ನಟ ರವಿ ಚೇತನ್ ಕನ್ನಡದಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿದ್ದಾರೆ. ಪೊಲೀಸ್ ಪಾತ್ರಗಳು, ಖಳನಟನ ರೋಲ್ಗಳಲ್ಲಿ ಮಿಂಚಿರೋ ರವಿ ಚೇತನ್ ಕಿಚ್ಚ ಸುದೀಪ್, ದರ್ಶನ್ರಂತಹ ದಿಗ್ಗಜ ನಟರ ಜೊತೆ ಅಭಿನಯಿಸಿ ಸೈ ಎನಿಸಿಕೊಂಡವರು. ಇದೀಗ ನಟ ರವಿ ಚೇತನ್ ಧಾರವಾಹಿ
ಸಾಯಿಪ್ರಕಾಶ್ 'ಸೆಪ್ಟೆಂಬರ್ 10' ಟೀಸರ್; ಕಿರುತೆರೆಯಲ್ಲಿ ರವಿ ಚೇತನ್ ದರ್ಬಾರ್ ಶುರು..!:
ಮಹಾಭಾರತದ ಕುಂತೀಪುತ್ರ ಕರ್ಣನ ಇನ್ನೊಂದು ಹೆಸರೇ ಕೌಂತೇಯ. ಇದೀಗ ಇದೇ ಹೆಸರಿನ ಚಿತ್ರವೊಂದು ಸೆಟ್ಟೇರಿದೆ. ಹಾಗಂತ ಇದೇನು ಪೌರಾಣಿಕ ಕಥೆಯಲ್ಲ. ಒಂದು ಮರ್ಡರ್ ಮಿಸ್ಟ್ರಿ ಸುತ್ತ ನಡೆಯುವ ಕ್ರೈಂ, ಥ್ರಿಲ್ಲರ್ ಕಾನ್ಸೆಪ್ಟ್ ಇದಾಗಿದ್ದು, ಕಥೆಗೆ ಇದೇ ಟೈಟಲ್ ಸೂಕ್ತ ಎಂದು ಇಟ್ಟಿದ್ದಾರೆ ನಿರ್ದೇಶಕ ಬಿಕೆ. ಚಂದ್ರಹಾಸ.
ಹಿರಿಯನಟ ಅಚ್ಯುತ್ ಕುಮಾರ್ ಹಾಗೂ ಶರಣ್ಯ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರದ ಮುಹೂರ್ತ ಸಮಾರಂಭ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತು. ಚಿತ್ರದ ಪ್ರಥಮ ದೃಶ್ಯಕ್ಕೆ ಹಿರಿಯ ನಟ ಶಶಿಕುಮಾರ್ ಅವರು ಕ್ಲಾಪ್ ಮಾಡಿ ಶುಭ ಹಾರೈಸಿದರು, ಸಾಹಿತಿ ವಿ.ನಾಗೇಂದ್ರಪ್ರಸಾದ್ ಅವರು ಆಕ್ಷನ್ ಕಟ್ ಹೇಳಿದರು. ಹಾಗೂ ಮತ್ತೊಬ್ಬ ಸಾಹಿತಿ ವಿ.ಮನೋಹರ್ ಅವರು ಕ್ಯಾಮೆರಾ ಚಾಲನೆ ಮಾಡಿದರು. ನಿರ್ಮಾಪಕ ಬಿಕೆ.ಶ್ರೀನಿವಾಸ್,ಮಹೇಶ್ ಬಾಬು, ರವಿತೇಜ, ಸತ್ಯ ಹೆಗಡೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
'ದೇವಸಸ್ಯ' ಟೈಟಲ್ ಟೀಸರ್ ಬಿಡುಗಡೆ:
ದೇವಸಸ್ಯ ಒಂದು ವಿಶಿಷ್ಠ ಕಥಾಹಂದರವನ್ನ ಹೇಳುವ ಹಾಗೂ ಅಪರೂಪದ ಗಿಡದ ಸುತ್ತ ನಡೆಯುವ ಘಟನೆಗಳುಳಲ್ಲ ವಿಭಿನ್ನ ಸಿನಿಮಾ. ಬಹುತೇಕ ಉತ್ತರ ಕನ್ನಡದವರೇ ಸೇರಿ ಮಾಡಿರುವ ಪ್ಯಾನ್ ಇಂಡಿಯಾ ಚಿತ್ರವಿದು. ಕನ್ನಡ, ತೆಲುಗು, ಹಿಂದಿ ಸೇರಿದಂತೆ 5 ಭಾಷೆಗಳಲ್ಲಿ ದೇಶಾದ್ಯಂತ ತೆರೆಗೆ ಬರುತ್ತಿದೆ. ಅನಂತ ಫಿಲಂಸ್ ಅಡಿಯಲ್ಲಿ ಅನಂತಕುಮಾರ್ ಹೆಗ್ಡೆ ಅವರು ನಿರ್ಮಾಣ ಮಾಡಿರೋ ಈ ಚಿತ್ರಕ್ಕೆ ಕಾರ್ತೀಕ್ ಭಟ್ ಆಕ್ಷನ್ ಕಟ್ ಹೇಳಿದ್ದಾರೆ.
ಇತ್ತೀಚಿಗೆ ನಟ ನವೀನ್ ಕೃಷ್ಣ ಅ ಈ ಚಿತ್ರದ 5 ಭಾಷೆಯ ಟೀಸರ್ನ ಬಿಡುಗಡೆ ಮಾಡಿದ್ದಾರೆ. ಸೆಲ್ವಿನ್ ದೇಸಾಯಿ ಚಿತ್ರದ ನಾಯಕನನಾಗಿದ್ದು ಸಿದ್ದಿ ಹುಡುಗನ ಪಾತ್ರವನ್ನ ಮಾಡಿದ್ದಾರೆ. ಮತ್ತೊಂದು ಮುಖ್ಯ ಪಾತ್ರವನ್ನು ಅಹನ ಮಾಡಿದ್ದಾರೆ. ಬಿಂಬಿಕಾ ಚಿತ್ರದ ನಾಯಕಿಯಾಗಿ ಮಿಂಚಿದ್ದಾರೆ.
ಸೆಪ್ಟೆಂಬರ್ 10: ಸಾಯಿಪ್ರಕಾಶ್ ನಿರ್ದೇಶನದ 105ನೇ ಚಿತ್ರ:
ಜೀವನದಲ್ಲಿ ಎದುರಾಗುವಂಥ ಹಲವಾರು ಸಮಸ್ಯೆಗಳಿಗೆ ಆತ್ಮಹತ್ಯೆ ಒಂದೇ ಪರಿಹಾರವಲ್ಲ ಎಂಬ ಉತ್ತಮ ಸಂದೇಶ ಇಟ್ಟುಕೊಂಡು ಶತ ಸಿನಿಮಾಗಳ ಸರದಾರ ಓಂ ಸಾಯಿ ಪ್ರಕಾಶ್ ಅವರು 'ಸೆಪ್ಟೆಂಬರ್ 10' ಎಂಬ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ. ಶ್ರೀದೇವಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಶ್ರೀಮತಿ ರಾಜಮ್ಮ ಸಾಯಿಪ್ರಕಾಶ್ ಅವರು ನಿರ್ಮಾಣ ಮಾಡಿರುವ ಈ ಚಿತ್ರದ ಟೀಸರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆದಿದೆ. ಚಿತ್ರಕ್ಕೆ ಬೆನ್ನೆಲುಬಾಗಿ ನಿಂತಿರುವ, ಕೋವಿಡ್ ಸಮಯದಲ್ಲಿ ಲಕ್ಷಾಂತರ ಜನರಿಗೆ ಸಹಾಯ ಮಾಡಿದ ಡಾ.ಎಸ್. ರಾಜು ಅವರು ಈ ಚಿತ್ರದ ಕಂಟೆಂಟ್ ಆಧರಿಸಿ ಮಾಡಿರುವ ತುಣುಕುಗಳು ಹಾಗೂ ಮೇಕಿಂಗ್ ವಿಡಿಯೋ ಟೀಸರ್ಗೆ ಚಾಲನೆ ನೀಡಿದ್ರು.
ಕಿರುತೆರೆಯಲ್ಲಿ ರವಿ ಚೇತನ್ ದರ್ಬಾರ್ ಶುರು..!
ಕನ್ನಡ ಚಿತ್ರರಂಗದ ಹೆಸರಾಂತ ನಟ ರವಿ ಚೇತನ್ ಕನ್ನಡದಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿದ್ದಾರೆ. ಪೊಲೀಸ್ ಪಾತ್ರಗಳು ಖಳನಟನ ರೋಲ್ಗಳಲ್ಲಿ ಮಿಂಚಿರೋ ರವಿ ಚೇತನ್ ಕಿಚ್ಚ ಸುದೀಪ್, ದರ್ಶನ್ರಂತಹ ದಿಗ್ಗಜ ನಟರ ಜೊತೆ ಅಭಿನಯಿಸಿ ಸೈ ಎನಿಸಿಕೊಂಡವರು. ಇದೀಗ ನಟ ರವಿ ಚೇತನ್ ಸಿನಿಮಾಗಳ ಜೊತೆ ಜೊತೆಗೆ ಧಾರವಾಹಿ ಲೋಕಕ್ಕೂ ಎಂಟ್ರಿ ಕೊಟ್ಟಿದ್ದಾರೆ. ರವಿ ಚೇತನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರೋ ನಂದ ಗೋಕುಲ ಧಾರವಾಹಿ ಕಲರ್ ಕನ್ನಡದಲ್ಲಿ ಪ್ರಸಾರ ಆಗುತ್ತಿದೆ. ರವಿ ಚೇತನ್ ಸೂರ ಕಾಂತ ಅನ್ನೋ ಊರ ಗೌಡನ ಪಾತ್ರದಲ್ಲಿ ಪವರ್ ಫುಲ್ ರೋಲ್ನಲ್ಲಿ ನಟಿಸಿದ್ದು, ಕಿರಿತೆರೆಯಲ್ಲಿ ಹೊಸ ಅಧ್ಯಾಯ ಆರಂಭಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ...