May 13, 2022, 12:00 AM IST
ಚಿಕ್ಕಮಗಳೂರಿನ ಅಬ್ಲೈಸ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಆಯೋಜಿಸಿರೋ ಎಫ್.ಎಂ.ಎಸ್.ಸಿ. ರ‍್ಯಾಲಿ ಕಾಫಿನಾಡಿಗರಿಗೆ ಭರ್ಜರಿ ಮಜಾ ನೀಡಿದೆ. ಡರ್ಟ್ ಟ್ರ್ಯಾಕ್ ರ‍್ಯಾಲಿಯ ಮೊದಲೆರಡು ರೌಂಡ್ ಶಿವಮೊಗ್ಗ ಹಾಗೂ ಬೆಂಗಳೂರಿನಲ್ಲಿ ಮುಗಿದಿದ್ದು ಕಾಫಿನಾಡಲ್ಲಿ ಮೂರನೇ ರೌಂಡ್ ಆಯೋಜನೆಗೊಂಡಿದೆ. ಈ ರ‍್ಯಾಲಿಯಲ್ಲಿ 56 ಜನ ಕಾಂಪಿಟೇಟರ್ ಇದ್ದು 196 ಜನ ಎಂಟ್ರಿ ಇದೆ. ಏಕ ಕಾಲದಲ್ಲಿ 10 ರೀತಿಯ ವಿಭಾಗಗಳಿಗೆ ನಡೆದ ರ‍್ಯಾಲಿಯಲ್ಲಿ ಹತ್ತಾರು ಕಂಪನಿಯ ಕಾರುಗಳು ಕಮಾಲ್ ಮಾಡಿದ್ವು. ಮಾರುತಿ ಎಸ್ಟೀಮ್, ಓಕ್ಸ್ ಪೋಲೋ, ಓಕ್ಸ್ ವ್ಯಾಗನ್ ಕಾರುಗಳು ಒಂದಕ್ಕೊಂದು ಸೆಡ್ಡು ಹೊಡೆಯುತ್ತಾ ಮುನ್ನುಗುತ್ತಿದ್ವು. ಕೆಲವು ಕಾರ್ ಕ್ರೇಜ್ ಪ್ರಿಯರು ಮಿನಿಜಿಬ್ಸಿ, ಆಲ್ಟೋ ಹಾಗೂ 800 ಕಾರನ್ನೂ ತಂದು ರ‍್ಯಾಲಿಯಲ್ಲಿ ಡ್ರೈವ್ ಮಾಡಿ ಖುಷಿ ಪಟ್ರು.