ಎಡಮಂಗಲ: ದೈವ ನರ್ತನದ ವೇಳೆ ಕುಸಿದು ಬಿದ್ದು ಹಿರಿಯ ದೈವನರ್ತಕ‌ ಸಾವು

ಎಡಮಂಗಲ: ದೈವ ನರ್ತನದ ವೇಳೆ ಕುಸಿದು ಬಿದ್ದು ಹಿರಿಯ ದೈವನರ್ತಕ‌ ಸಾವು

Published : Mar 30, 2023, 05:58 PM ISTUpdated : Mar 30, 2023, 06:02 PM IST

ದೈವದ ನರ್ತನ ಸೇವೆ ಮಾಡುತ್ತಿದ್ದಾಗಲೇ ದೈವ ನರ್ತಕರೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಎಡಮಂಗಲ ಗ್ರಾಮದಲ್ಲಿ ನಡೆದಿದೆ.

ಕಡಬ: ದೈವದ ನರ್ತನ ಸೇವೆ ಮಾಡುತ್ತಿದ್ದಾಗಲೇ ದೈವ ನರ್ತಕರೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಎಡಮಂಗಲ ಗ್ರಾಮದಲ್ಲಿ ನಡೆದಿದೆ.  ದೈವ ನರ್ತನಕ್ಕೆ ಖ್ಯಾತಿ ಗಳಿಸಿದ್ದ 55 ವರ್ಷ ಪ್ರಾಯದ ಕಾಂತು ಅಜಿಲ ಹೀಗೆ ದೈವದ ಆರಾಧನೆಯಲ್ಲಿರುವಾಗಲೇ ದಿಢೀರ್ ಕುಸಿದು ಬಿದ್ದು ಸಾವನ್ನಪ್ಪಿದವರು. ಇವರು ಎಡಮಂಗಲ ಗ್ರಾಮದಲ್ಲಿ ಅನೇಕ ವರ್ಷಗಳಿಂದ ಗ್ರಾಮ ದೈವಗಳ ಪರಿಚಾರಕರಾಗಿ ಕೆಲಸ ಮಾಡುತ್ತಿದ್ದರು. ಇವರು ದೈವ ನರ್ತನ ಮಾಡುತ್ತಿದ್ದಾಗಲೇ ಕುಸಿದು ಬೀಳುವ ದೃಶ್ಯ ಕ್ಯಾಮರಾದಲ್ಲಿ ಸೆರೆ ಆಗಿದ್ದು, ವೈರಲ್ ಆಗಿದೆ. ಗ್ರಾಮದ ಇಡ್ಯಡ್ಕದಲ್ಲಿ  ನೇಮೋತ್ಸವದ ವೇಳೆ ದೈವ ನರ್ತನ ಮಾಡುತ್ತಿದ್ದಾಗ ಘಟನೆ ನಡೆದಿದೆ. ಕೂಡಲೇ ಆಸ್ಪತ್ರೆಗೆ ಕರೆದೊಯ್ದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ತಿಳಿದು ಬಂದಿದೆ. ಘಟನೆ ನಡೆಯುವ ವೇಳೆ ಅವರು ಶಿರಾಡಿ ದೈವದ ನರ್ತನ ಸೇವೆ ನಡೆಸಿಕೊಡುತ್ತಿದ್ದರು. ಇವರ ಜೊತೆಗೆ ಕಲ್ಕುಡ ದೈವದ ಪಾತ್ರಿಯೂ ನರ್ತಿಸುತ್ತಿದ್ದರು.  ಹೃದಯಾಘಾತಕ್ಕೊಳಗಾಗಿ ಕಾಂತು ಅಜಿಲ ಸಾವನ್ನಪ್ಪಿದ್ದಾರೆ ಎಂದು ಅವರನ್ನು ತಪಾಸಣೆ ನಡೆಸಿದ ವೈದ್ಯರು ಹೇಳಿದ್ದಾರೆ. 

04:36ಮಂಗಳೂರು Justice for Abhishek ಕೇಸಿನ ಹನಿಟ್ರ್ಯಾಪ್ ಆರೋಪಿ ನಿರೀಕ್ಷಾ ಬಂಧನ! ರೂಮೇಟ್ ನಗ್ನ ವಿಡಿಯೋ ರೆಕಾರ್ಡ್!
24:46ಗಂಡ ಕೆಲಸಕ್ಕೆ ಹೋದಾಗ ಗೆಳೆಯ ಮನೆಗೆ ಬರ್ತಿದ್ದ: ರೊಚ್ಚಿಗೆದ್ದ ಗಂಡ ಇಬ್ಬರನ್ನೂ ಮುಗಿಸೋ ಪ್ಲಾನ್​ ಮಾಡಿದ್ದ!
44:37ಸುಜಾತಾ ಭಟ್ ಕಣ್ಣೀರು ನೋಡಿ ವಿಡಿಯೋ ಮಾಡ್ದೆ, ಸುಳ್ಳಾದ್ರೆ ನಾನೇನು ಮಾಡ್ಲಿ, ಸಮೀರ್ ಹೊಸ ರಾಗ
22:09ಕೇರಳ ಸಂಸದನ ಅಖಾಡದಲ್ಲಿ ಬುರುಡೆಯಾಟ: ಕಮ್ಯುನಿಸ್ಟ್ ಸಂಸದ, ಸೂತ್ರಧಾರಿನಾ? ಪಾತ್ರಧಾರಿನಾ?
42:45ಎರಡು ವರ್ಷ... ಎರಡು ಗ್ಯಾಂಗ್.. ಒಂದೇ ತಲೆಬುರುಡೆ: ಬುರುಡೆ ಗ್ಯಾಂಗ್ ಷಡ್ಯಂತ್ರ ಸರ್ಕಾರಕ್ಕೆ ಮೊದಲೇ ಗೊತ್ತಿತ್ತಾ?
25:15ತಿಮರೋಡಿ ಮನೆಯಲ್ಲಿ ಬುರುಡೆ ಬ್ಲೂಪ್ರಿಂಟ್? ಅರೆಸ್ಟ್ ಆಗುತ್ತಾ ಧರ್ಮಸ್ಥಳ ವಿರೋಧಿ ಗ್ಯಾಂಗ್?
48:09ಚಿನ್ನಯ್ಯ ಅರೆಸ್ಟ್ ಆದ್ರೆ, ತಿರುಗಿಬಿದ್ರೆ, ಪಾರಾರಿಯಾದ್ರೆ; ತಿಮರೋಡಿ ಮನೆಯಲ್ಲಿನ ಸೀಕ್ರೆಟ್ ಸಂಚು ಬಯಲು
20:49ಕಳೇಬರ ಸಿಕ್ಕಾಗ ಪಾರ್ಟಿ, ಸಿಗದಿದ್ದಾಗ ಚಾಟಿ, ಚಿನ್ನಯ್ಯಗೆ ಬುರುಡೆ ಗ್ಯಾಂಗ್ ಕೊಟ್ಟ ಟಾರ್ಚರ್ ಬಹಿರಂಗ
24:31ತಿರುಗುಬಾಣವಾಯ್ತಾ ಹೋರಾಟ? ಈಗೇನ್ಮಾಡ್ತಾರೆ ಸುಜಾತಾ ಭಟ್?
23:09ಆತನ ಬಾಯಿಗೆ ನಡುಗಿತು ಬ್ರಹ್ಮಾವರ ಸ್ಟೇಷನ್..​! ಧರ್ಮಸ್ಥಳ ವಿರೋಧಿ ಗ್ಯಾಂಗ್​​ನ ಮುಂದಿನ ನಡೆ ಏನು?