
ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
ಶ್ರೀ ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಶುಕ್ಲ ಪಕ್ಷ, ಸೋಮವಾರ, ಏಕಾದಶಿ ತಿಥಿ, ಚಿತ್ರಾ ನಕ್ಷತ್ರ.
ಈ ಏಕಾದಶಿಯನ್ನು ನಿರ್ಜನ ಏಕಾದಶಿ ಎಂದು ಕರೆಯಲಾಗುತ್ತದೆ. ಇಲ್ಲಿಂದ ಪ್ರತಿ ಏಕಾದಶಿ ಒಂದೊಂದು ವಿಶೇಷತೆಯನ್ನು ಹೊಂದಿರುತ್ತದೆ. ಮಿಥುನ ರಾಶಿಯವರಿಗೆ ಈ ದಿನ ಲಾಭದಾಯಕವಾಗಿದ್ದು, ವ್ಯಾಪಾರಿಗಳಿಗೆ ಪರಿಶ್ರಮ. ಮನಸ್ಸಿಗೆ ಪೆಟ್ಟುಬೀಳಲಿದೆ. ಮನೋಬಲ ಇರಲಿದೆ. ಲಲಿತಾ ಪರಮೇಶ್ವರೀ ಪ್ರಾರ್ಥನೆ ಮಾಡಿ. ಕರ್ಕಟಕ ರಾಶಿಯವರಿಗೆ ಭಯದ ವಾತಾವರಣವಿದ್ದು, ಬಂಧು-ಮಿತ್ರರಲ್ಲಿ ಮನಸ್ತಾಪ. ವೃತ್ತಿಯಲ್ಲಿ ಅನುಕೂಲ. ದುರ್ಗಾ ಸನ್ನಿಧಾನದಲ್ಲಿ ಪಂಚಾಮೃತ ಸೇವೆ ಮಾಡಿಸಿ.
ಇದನ್ನೂ ವೀಕ್ಷಿಸಿ: Weekly-Horoscope: ಈ ರಾಶಿಯವರಿಗೆ ವೃತ್ತಿಯಲ್ಲಿ ವಿಶೇಷ ಅನುಕೂಲವಿದ್ದು, ಹೆಚ್ಚಿನ ವ್ಯಯ ಇದೆ..