Feb 16, 2024, 9:58 AM IST
ಶ್ರೀ ಶೋಭಕೃನ್ನಾಮ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಶುಕ್ಲ ಪಕ್ಷ, ಶುಕ್ರವಾರ,ಸಪ್ತಮಿ ತಿಥಿ, ಭರಣಿ ನಕ್ಷತ್ರ.
ಇಂದು ರಥಸಪ್ತಮಿ ಇದ್ದು, ಈ ದಿನ ಸೂರ್ಯ ಉತ್ತರದ ಕಡೆ ಪಯಣ ಮಾಡುತ್ತಾನೆ ಎಂದು ಹೇಳಲಾಗುತ್ತದೆ. ನಮಗೆ ಸೂರ್ಯ ಕೃಪೆಯ ಅವಶ್ಯಕವಿದೆ. ಯಾಕೆಂದರೆ ಆತ ಆರೋಗ್ಯದ ಅಧಿಪತಿಯಾಗಿದ್ದಾನೆ. ಮಾಘ ಮಾಸದಲ್ಲಿ ಸೂರ್ಯ ಪ್ರಜ್ವಲಿಸುತ್ತಿರುತ್ತಾನೆ. ಇದರಿಂದ ಆರೋಗ್ಯ ಸಮೃದ್ಧಿಯಾಗಿರುತ್ತದೆ. ಈ ದಿನ ಸೂರ್ಯ ದೇವರನ್ನು ಪೂಜಿಸುವುದು ಅನೇಕ ಪ್ರಯೋಜನಗಳನ್ನು ನೀಡುತ್ತದೆ ಮತ್ತು ಜೀವನದ ಎಲ್ಲಾ ಕಷ್ಟಗಳನ್ನು ತೆಗೆದುಹಾಕುತ್ತದೆ ಎಂದು ನಂಬಲಾಗಿದೆ. ಸೂರ್ಯನಿಗೆ ಕೆಂಪು ವರ್ಣ ತುಂಬಾ ಇಷ್ಟವಾದದ್ದು ಆಗಿದೆ.
ಇದನ್ನೂ ವೀಕ್ಷಿಸಿ: ಎಕ್ಸಾಂ ಟೈಂನಲ್ಲಿ ಮಕ್ಕಳನ್ನು ಕಾಡೋ ಫೋಕಸಿಂಗ್ ಪ್ರಾಬ್ಲೆಮ್, ಇದಕ್ಕೇನು ಕಾರಣ?