ಬುರ್ಖಾ ವೇಷದಲ್ಲಿ ಮಹಿಳಾ ಉದ್ಯಮಿ ಕಿಡ್ನಾಪ್: ಪೊಲೀಸರ ಸಮಯಪ್ರಜ್ಞೆಯಿಂದ ಬಚಾವ್!

ಬುರ್ಖಾ ವೇಷದಲ್ಲಿ ಮಹಿಳಾ ಉದ್ಯಮಿ ಕಿಡ್ನಾಪ್: ಪೊಲೀಸರ ಸಮಯಪ್ರಜ್ಞೆಯಿಂದ ಬಚಾವ್!

Published : Oct 03, 2023, 10:11 AM IST

ಬೆಂಗಳೂರಿನಲ್ಲಿ ಸಿನಿಮೀಯ ರೀತಿಯಲ್ಲಿ ಹೋಟೇಲ್‌ಗೆ ನುಗ್ಗಿ ಮಹಿಳೆಯನ್ನ ಕಿಡ್ನಾಪ್ ಮಾಡಿದ್ದಾರೆ. ಕಿಡ್ನಾಪ್ ಅಂದ್ಮೇಲೆ ಐದಾರು ಮಂದಿ ಸೇರಿ ಮಾಡೋದನ್ನ ನೋಡಿರ್ತೀರಾ.. ಆದ್ರೆ ಇಲ್ಲಿ ಬರೊಬ್ಬರಿ 25 ಕ್ಕೂ ಅಧಿಕ ಮಂದಿ ಬಂದು ಕಿಡ್ನಾಪ್ ಮಾಡಿದ್ದಾರೆ. ಅದು ಬಂದ ಅಷ್ಟೂ ಮಂದಿ ಕೂಡ ಬುರ್ಕಾ ಧರಿಸಿ ..
 

 ಸ್ಲೋ ಆಗಿ ಹೋಟೆಲ್‌ಗೆ ಎಂಟ್ರಿ ಕೊಡ್ತಿರುವ ಬುರ್ಕಾ ಧಾರಿಗಳು. ಒಬ್ಬರಲ್ಲ, ಇಬ್ಬರಲ್ಲ, ಬರೋಬ್ಬರಿ 25 ಮಂದಿಯನ್ನು ನೋಡಿದ ಓನರ್ ಕಂ ರೆಸಿಪ್ಷನಿಸ್ಟ್‌ಗೆ ಆತಂಕ ಶುರುವಾಗಿದೆ. ಇಲ್ಲಿ ಏನಾಗ್ತಿದೆ ಅಂತ ಮಹಿಳೆ(woman) ಅರಿವಿಗೆ ಬರೋದ್ರಲ್ಲಿ ಬುರ್ಕಾ(Burqa) ವೇಷದಲ್ಲಿದ್ದ ಗಂಡಸರೆಲ್ಲ ಸಿಸಿಟಿವಿ ವೈರ್ ಕಟ್ ಮಾಡಿದ್ರೆ, ಮತ್ತೆ ಕೆಲವರು ಮಹಿಳೆ  ಮೇಲೆ ಹಲ್ಲೆ ನಡೆಸ್ತಿದ್ರು. ಈ ಸೀನ್ ಯಾವ್ದೋ ಸಿನಿಮಾದಲ್ಲ.. ಇದೊಂದು ಪ್ರೀ ಪ್ಲಾನ್ಡ್ ಕಿಡ್ಯಾಪ್ ಕೇಸ್. ಅದು ವೀಕೆಂಡ್.. ಮಟ ಮಟ ಮಧ್ಯಾಹ್ನ 12 ಗಂಟೆ.. ಜನರ ಓಡಾಟವೂ ಅಷ್ಟಕ್ಕಷ್ಟೇ. ಇಂತಹ ಸಂದರ್ಭದಲ್ಲಿ ಬುರ್ಕಾಧಾರಿಗಳ ಗುಂಪೊಂದು ಬೆಂಗಳೂರಿನ ಜಾಲಹಳ್ಳಿ ಕ್ರಾಸ್ನ ಡಿಎಂ ರೆಸಿಡೆನ್ಸಿ ಹೋಟೆಲ್‌ಗೆ ಎಂಟ್ರಿ ಕೊಡುತ್ತೆ.. ನಮಗೊಂದು ರೂಂ ಕೊಡಿ ರಿಪ್ರೆಶ್ ಆಗ್ಬೇಕು ಅಂತಾರೆ. ಅನುಮಾನಗೊಂಡ ಪಂಕಜ ಸ್ಥಳೀಯರಿಗೆ ನಾವು ರೂಮ್ ಕೊಡಲ್ಲ ಎಂದಿದ್ದಾರೆ.. ಅಷ್ಟರಲ್ಲಿ ಮೊದಲೇ ಪ್ಲಾನ್ ಮಾಡಿಕೊಂಡು ಬಂದಂತೆ ರೆಸಿಡೆನ್ಸಿಯ ಕಿಟಕಿ ಗಾಜುಗಳನೆಲ್ಲ ಪುಡಿ ಪುಡಿ ಮಾಡ್ತಾರೆ.. ಬುರ್ಕಾಧಾರಿ ವೇಷದಲ್ಲಿದ್ದ ಪುರುಷ ಹಾಗೂ ಮಹಿಳೆಯರು ಪಂಕಜರನ್ನ ಆಟೋದಲ್ಲಿ ಎಳೆದುಕೊಂಡು ಹೋಗೆ ಬಿಡ್ತಾರೆ. ಆಟೋದಲ್ಲಿದ್ದ ಮಹಿಳಾ ಉದ್ಯಮಿ ಪಂಕಜ, ಕಿರುಚಾಟದ ಕಂಡ ಜಾಲಹಳ್ಳಿ ಸಂಚಾರಿ ಪೊಲೀಸರ ಆಟೋ ತಡೆದಿದ್ದಾರೆ.. ನಂತರ ಮಹಿಳೆಯನ್ನ ರಕ್ಷಿಸುವಲ್ಲಿ ಖಾಕಿ ಯಶಸ್ವಿಯಾಗಿದೆ. ಸಿನಿಮಾ ಸ್ಟೈಲ್ನಲ್ಲಿ ಮಹಿಳೆಯನ್ನ ಕಿಡ್ಯಾಪ್ ( Kidnapping ) ಮಾಡಲು ಕಾರಣ ಅದೊಂದು ಪ್ರಾಪರ್ಟಿ.. ಯೆಸ್, ವಿಜಯ್ ಹಾಗೂ ಪಂಕಜ ದಂಪತಿ, ಗೌತಮ್ ಎಂಬುವರ ಬಳಿ ಈ ಹೋಟೆಲ್  ಪ್ರಾಪರ್ಟಿಯನ್ನ 10 ವರ್ಷ ಲೀಸ್ ಗೆ ಪಡೆದಿದ್ದರಂತೆ. ಪಂಕಜರನ್ನ ಖಾಲಿ ಮಾಡಿಸಲು ಈ ರೀತಿ ಕಿಡ್ನಾಪ್ ಪ್ಲಾನ್ ಮಾಡಲಾಗಿದ್ಯಂತೆ. ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಹಿಳೆ ಆರೋಪ ಮಾಡ್ತಿರೋದು ನಿಜಾನಾ ಎಂಬುದು ಪೊಲೀಸರ ತನಿಖೆಯಲ್ಲಿ ತಿಳಿಯಬೇಕಿದೆ.

ಇದನ್ನೂ ವೀಕ್ಷಿಸಿ:  'ರಾಜ ಮಾರ್ತಾಂಡ'ನಿಗಾಗಿ ಬಂದ ಆ್ಯಕ್ಷನ್ ಪ್ರಿನ್ಸ್ ಧ್ರುವ: ಪತಿಯ ಕೊನೆ ಚಿತ್ರ ಸಕ್ಸಸ್‌ಗಾಗಿ ಮೇಘನಾ ಸರ್ಜಾ ಪಣ!

23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
Read more