Oct 21, 2022, 5:39 PM IST
ಮಾವಿನಹಳ್ಳಿ ಗ್ರಾಮದ ಕರಿಯಮ್ಮ ದೇವಸ್ಥಾನದಲ್ಲಿ ಆರೋಪಿ ಮೋಹನ್ ಪೂಜೆ ಮಾಡ್ತಿದ್ದ. ಕಳೆದ ಐದಾರು ವರ್ಷಗಳ ಹಿಂದೆ ಆ ದೇವಸ್ಥಾನದಲ್ಲಿ ಹಣ ಕದ್ದು ಸಿಕ್ಕಿಬಿದಿದ್ದ. ಅಂದಿನಿಂದ ಮೋಹನ್ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದ. ಆಗಾಗ ಪತ್ನಿಯ ಜೊತೆ ಜಗಳವಾಡಿ ತೊಂದರೆ ಕೊಡುತ್ತಿದ್ದ. ಈ ಬಾರಿ ಗಲಾಟೆ ವಿಕೋಪಕ್ಕೆ ತಿರುಗಿ ಪತ್ನಿ ಹಾಗೂ ಮಗುವಿಗೆ ಹಾರೆಯಿಂದ ಹೊಡೆದು ಕೊಲೆ ಮಾಡಿದ್ದಾನೆ.