Mar 3, 2024, 3:05 PM IST
ಬೆಂಗಳೂರಿನಲ್ಲಿ ನಡೆದ ಬಾಂಬ್ ಬ್ಲಾಸ್ಟ್‌ಗೆ ಸಿಲಿಕಾನ್ ಸಿಟಿಯೇ ಬೆಚ್ ಬಿದ್ದಿದೆ. ಈ ಕೃತ್ಯ ಎಸಗಿದವರು ಯಾರು? ಈ ಕೃತ್ಯ ಹಿಂದಿನ ಉದ್ದೇಶವೇನು? ಯಾವ ಕಾರಣಕ್ಕಾಗಿ ರಾಮೇಶ್ವರಂ ಕೆಫೆಯನ್ನೇ(Rameshwaram Cafe) ಆಯ್ಕೆ ಮಾಡಿಕೊಳ್ಳಲಾಯ್ತು ಎಂಬೆಲ್ಲ ಪ್ರಶ್ನೆಗಳು ಹುಟ್ಟಿಕೊಂಡಿವೆ. ಈ ಎಲ್ಲ ಗೊಂದಲಗಳ ನಡುವೆಯೇ ಬೆಂಗಳೂರು ಪೊಲೀಸರು(Police) ಕೃತ್ಯ ಎಸಗಿದವರ ಪತ್ತೆಗೆ ಬಲೆ ಬೀಸಿದೆ. ಆದ್ರೆ, ಬಾಂಬ್ ಬ್ಲಾಸ್ಟ್ ಮಾಡಿದವನ ಪತ್ತೆ ಇನ್ನೂ ಆಗಿಲ್ಲ. ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್(Bomb Blast) ನಡೆದಿದೆ.ಈ ಬ್ಲಾಸ್ಟ್‌ನಲ್ಲಿ 9 ಜನರು ಗಾಯಗೊಂಡಿದ್ದಾರೆ. ಇದರಲ್ಲಿ ಮೂವರು ಗಂಭೀರ ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಈ ಬಾಂಬ್ ಬ್ಲಾಸ್ಟ್‌ನಿಂದಾಗಿ ಯಾವುದೇ ಸಾವು ಸಂಭಿವಿಸಿಲ್ಲ. ಬೆಂಗಳೂರು ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ. ಈತನ ಪತ್ತೆಗೆ ನಿಂತ ಬೆಂಗಳೂರು ಪೊಲೀಸರಿಗೆ ಅನೇಕ ಸವಾಲುಗಳು ಎದುರಾಗುತ್ತಿವೆ. ಎದುರಾದ ಸವಾಲುಗಳನ್ನೆಲ್ಲ ಬೇಧಿಸಿ ಪೊಲೀಸ್ ತನಿಖಾ ಪಡೆ ಮುನ್ನುಗ್ಗುತ್ತಿದೆ.
ಇದನ್ನೂ ವೀಕ್ಷಿಸಿ: ಬ್ಲಾಸ್ಟ್ ಕೇಸ್ ಬಗ್ಗೆ ಕೆಲ ಮಾಹಿತಿ ಸಿಕ್ಕಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುತ್ತೇವೆ: ಗೃಹ ಸಚಿವ ಪರಮೇಶ್ವರ್