ಕೋಲ್ಕತ್ತಾದ ವೈದ್ಯ ವಿದ್ಯಾರ್ಥಿನಿ ರೇಪ್ & ಮರ್ಡರ್..! ಡಾಕ್ಟರ್ ಅಭಯಾ ಕೇಸ್ ಮುಚ್ಚಿ ಹಾಕೋ ಸಂಚು ನಡೆದಿತ್ತಾ

ಕೋಲ್ಕತ್ತಾದ ವೈದ್ಯ ವಿದ್ಯಾರ್ಥಿನಿ ರೇಪ್ & ಮರ್ಡರ್..! ಡಾಕ್ಟರ್ ಅಭಯಾ ಕೇಸ್ ಮುಚ್ಚಿ ಹಾಕೋ ಸಂಚು ನಡೆದಿತ್ತಾ

Published : Aug 21, 2024, 12:06 PM IST

ಕೋಲ್ಕತ್ತಾದಲ್ಲಿ ನಡೆದ ಡಾಕ್ಟರ್ ರೇಪ್ & ಮರ್ಡರ್ ಕೇಸಿನಲ್ಲಿ, ದೇಶಾದ್ಯಂತ ಇರೋ ವೈದ್ಯರೆಲ್ಲ ರೊಚ್ಚಿಗೆದ್ದು ಬೀದಿಗೆ ಇಳಿದಿದ್ದು ಈ ಕಾರಣಕ್ಕೆ. ಸುಪ್ರೀಂಕೋರ್ಟ್ ಉಗಿದಿರೋದೂ ಕೂಡಾ ಅದಕ್ಕೇ. ಸರ್ಕಾರದ ಒಂದು ವ್ಯವಸ್ಥೆಯೇ ಆರೋಪಿಗಳ ರಕ್ಷಣೆಗೆ ನಿಂತಿದ್ಯೇನೋ ಅನ್ನಿಸೋಕೆ ಕಾರಣ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ. 

ಕೋಲ್ಕತ್ತಾ(ಆ.21): ಒಬ್ಬ ಹೆಣ್ಣು ಮಗಳು, ಇಂಡಿಪೆಂಡೆಂಟ್ ಆಗಿ ಡಾಕ್ಟರ್ ಆಗಿ ಕೆಲಸ ಮಾಡಬೇಕಿದ್ದ ಟ್ರೈನಿ ಡಾಕ್ಟರ್ ಒಬ್ಬರು, ತಾನು ಕೆಲಸ ಮಾಡ್ತಿದ್ದ ಆಸ್ಪತ್ರೆಯಲ್ಲೇ ರೇಪ್ ಆಗ್ತಾರೆ. ಬರ್ಬರವಾಗಿ ಕೊಲೆಯಾಗ್ತಾರೆ. ಆ ರೇಪ್ & ಮರ್ಡರ್‌ಅನ್ನು ಮುಚ್ಚಿ ಹಾಕೋಕೆ ಒಂದಿಡೀ ಸಿಸ್ಟಂ ಇನ್ನಿಲ್ಲದ ಪ್ರಯತ್ನ ಮಾಡುತ್ತೆ. ಆದರೆ ಆ ಕೇಸ್, ಇಡೀ ದೇಶವನ್ನ ಒಂದುಗೂಡಿಸುತ್ತೆ. ಸುಪ್ರೀಂಕೋರ್ಟ್‌ ಈಗ ರಾಜ್ಯ ಸರ್ಕಾರಕ್ಕೆ ಉಗಿದು ಉಪ್ಪಿನಕಾಯಿ ಹಾಕಿದೆ. ಅದೇ ಈ ಹೊತ್ತಿನ ವಿಶೇಷ ಜಸ್ಟೀಸ್ ಫಾರ್ ಅಭಯಾ.

ಜೀವ ಉಳಿಸಬೇಕಾದ ಡಾಕ್ಟರ್‌ಗೆ, ತಾನು ಕೆಲಸ ಮಾಡೋ ಆಸ್ಪತ್ರೆಯಲ್ಲೇ ರಕ್ಷಣೆ ಇಲ್ಲ ಅಂತಾದ್ರೆ.. ಡಾಕ್ಟರ್ಸ್ ಇನ್ ಡೇಂಜರ್ ಅಂತಾ ಭಯ ಹುಟ್ಟಲ್ವಾ..? ಕೋಲ್ಕತ್ತಾದಲ್ಲಿ ನಡೆದ ಡಾಕ್ಟರ್ ರೇಪ್ & ಮರ್ಡರ್ ಕೇಸಿನಲ್ಲಿ, ದೇಶಾದ್ಯಂತ ಇರೋ ವೈದ್ಯರೆಲ್ಲ ರೊಚ್ಚಿಗೆದ್ದು ಬೀದಿಗೆ ಇಳಿದಿದ್ದು ಈ ಕಾರಣಕ್ಕೆ. ಸುಪ್ರೀಂಕೋರ್ಟ್ ಉಗಿದಿರೋದೂ ಕೂಡಾ ಅದಕ್ಕೇ. ಸರ್ಕಾರದ ಒಂದು ವ್ಯವಸ್ಥೆಯೇ ಆರೋಪಿಗಳ ರಕ್ಷಣೆಗೆ ನಿಂತಿದ್ಯೇನೋ ಅನ್ನಿಸೋಕೆ ಕಾರಣ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ. 

ಡ್ರಾಪ್​​ ಕೇಳಿದವಳ ಮೇಲೆಯೇ ಎರಗಿಬಿಟ್ಟ ಪಾಪಿ! ಅವಳ ಮಾನ, ಪ್ರಾಣ ಉಳಿಸಿದ್ದು ಪ್ಯಾನಿಕ್​​ ಬಟನ್​..!

ದೇಶದಲ್ಲಿ ಶಿಕ್ಷೆ ಕೊಡೋಕೆ ಒಂದು ವ್ಯವಸ್ಥೆ ಹೇಗೆ ಕೆಲಸ ಮಾಡುತ್ತೆ ಅನ್ನೋದರ ಬಗ್ಗೆ ನಮಗೆಲ್ಲ ಒಂದು ಕಲ್ಪನೆ ಇದೆ. ಆದರೆ, ಅದೇ ವ್ಯವಸ್ಥೆ, ಶಿಕ್ಷೆ ಕೊಡಿಸೋದಿರ್ಲಿ, ಅಪರಾಧಿಗಳನ್ನ ರಕ್ಷಣೆ ಮಾಡೋಕೆ ನಿಂತ್ರೆ ಹೇಗಿರುತ್ತೆ ಅನ್ನೋದನ್ನ ಅರ್ಥ ಮಾಡ್ಕೋಬೇಕು ಅಂದ್ರೆ, ಕೋಲ್ಕತ್ತಾದಲ್ಲಿ  ನಡೆದ ಈ ಡಾಕ್ಟರ್ ರೇಪ್ & ಮರ್ಡರ್ ಕೇಸ್ನ ಇನ್ವೆಸ್ಟಿಗೇಷನ್ ನೋಡ್ಬೇಕು.

ನ್ಯಾಯ ಕೊಡಿಸಬೇಕಾದವರೇ, ನ್ಯಾಯಕ್ಕೆ ನೇಣು ಹಾಕೋಕೆ ಹೋದಂತಾಗಿದೆ. ಈಗ ಆ ಹೆಣ್ಣು ಮಗಳ  ಅಪ್ಪ ಏನ್ ಮಾಡ್ಬೇಕು. ಮಗಳು ಡಾಕ್ಟರ್ ಆಗ್ಬೇಕಂತೆ ಕನಸು ಕಂಡಿದ್ದ ಅಪ್ಪ, ಪ್ರಕರಣ ಕೇಳಿದ್ರೆ ಸಾಕು, ಕಣ್ಣೀರಾಗ್ತಾರೆ. ಮಗಳ ಸಾವಿಗೆ ನ್ಯಾಯ ಕೊಡ್ಸಿ ಅನ್ನೋ ಆ ತಂದೆ ತಾಯಿ, ದೇಶದ ಇನ್ನೊಬ್ಬ ಹೆಣ್ಣು ಮಗಳಿಗೆ ಇಂತಾ  ಅನ್ಯಾಯ ಆಗ್ಬಾರ್ದು ಅಂತಾರೆ. ನ್ಯಾಯ ಸಿಗುತ್ತಾ..? ಅದು ನಮ್ಮ ಪ್ರಶ್ನೆಯೂ ಹೌದು. ಏನೇ ಹೋರಾಟ ಮಾಡಿದ್ರೂ.. ನಾವು ಅದೇ ವ್ಯವಸ್ಥೆಯ ಒಳಗೇ ಮಾಡ್ಬೇಕಲ್ವಾ?. 

23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
Read more