ಉಡುಪಿ ವಿಡಿಯೋ ಪ್ರಕರಣ: ಮೂವರು ವಿದ್ಯಾರ್ಥಿನಿಯರಿಗೆ PFI ಸಂಪರ್ಕವಿದೆಯಾ..?

Aug 13, 2023, 10:26 AM IST

ಉಡುಪಿ ವಿಡಿಯೋ ಪ್ರಕರಣ ಸಿಐಡಿಗೆ(CID) ಹಸ್ತಾಂತರವಾಗಿ ಆರು ದಿನಗಳಾದವು. ಒಂದು ಕ್ಷಣವೂ ವಿಳಂಬ ಮಾಡದೆ ಸಿಐಡಿ ಪೊಲೀಸರು ಉಡುಪಿಯಲ್ಲಿ(Udupi) ಬಿಡು ಬಿಟ್ಟು ತನಿಖೆ ನಡೆಸಿದ್ದಾರೆ. ಈ ನಡುವೆ ಎಡಿಜಿಪಿ ಮನೀಶ್ ಕರ್ಬೀಕರ್, ಸಿಐಡಿ- ಎಸ್‌ಪಿ ರಾಘವೇಂದ್ರ ಹೆಗಡೆ ತಮ್ಮ ಕರ್ತವ್ಯ ಮುಗಿಸಿ ವಾಪಸ್ ಆಗಿದ್ದಾರೆ. ಸದ್ಯ ತನಿಖಾಧಿಕಾರಿಯಾಗಿರುವ ಡಿವೈಎಸ್ಪಿ ಅಂಜುಮಾಲ ತನಿಖೆ ತೀವ್ರಗೊಳಿಸಿದ್ದಾರೆ. ತನಿಖೆಯ ಮೂವರು ಮುಸ್ಲಿಂ ವಿದ್ಯಾರ್ಥಿನಿಯರ ಮನೆಗೆ ಡಿವೈಎಸ್ಪಿ ನೇತೃತ್ವದಲ್ಲಿ ದಾಳಿ ನಡೆದಿದೆ. ಮೂವರ ಮನೆಗಳಲ್ಲಿ ತಲಾಶ್ ನಡೆಸಿದ್ದಾರೆ. ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದು ತೆರಳಿದ್ದಾರೆ. ವಿಡಿಯೋ ಪ್ರಕರಣಕ್ಕೆ(video case) ಸಂಬಂಧಿಸಿದಂತೆ ಸ್ಥಳ ಮಹಜರು ನಡೆಸಿ ಅಗತ್ಯ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಈ ರೀತಿಯ ಕೃತ್ಯಗಳಲ್ಲಿ ಈ ಹಿಂದೆ ಏನಾದರೂ ಭಾಗಿಯಾಗಿದ್ರಾ ಅನ್ನೋ ಬಗ್ಗೆ ಪರಿಶೀಲಿಸಿದ್ದಾರೆ. ವಿದ್ಯಾರ್ಥಿನಿಯರಿಗೆ ಪಿಎಫ್ಐ(PFI) ಮಹಿಳಾ ವಿಂಗ್ ಸಂಪರ್ಕ ಇದೆ ಎಂದು ಪ್ರತಿಭಟನಾಕಾರರು ಆರೋಪಿಸಿರುವ ಹಿನ್ನೆಲೆಯಲ್ಲಿ ಈ ದಾಳಿ ಕುತೂಹಲ ಕೆರಳಿಸಿದೆ. ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜಿಗೆ ಸಲ್ಲಿಸಿರುವ ತಪ್ಪೊಪ್ಪಿಗೆ ಪತ್ರ, ನ್ಯಾಯಾಲಯದಲ್ಲಿ ನೀಡಿದ ಹೇಳಿಕೆ ಬಗ್ಗೆ ವಿದ್ಯಾರ್ಥಿನಿಯರನ್ನು ರಹಸ್ಯ ಸ್ಥಳದಲ್ಲಿ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಆರಂಭದಲ್ಲಿ ಒಂದಿಷ್ಟು ಅಸಹಕಾರ ತೋರಿದ ಕಾಲೇಜು ಆಡಳಿತ ಮಂಡಳಿ, ಪೊಲೀಸರ ಎಚ್ಚರಿಕೆಗೆ ಬೆದರಿ ಮಾಹಿತಿ ನೀಡಿರುವ ವಿಚಾರ ಗೊತ್ತಾಗಿದೆ.

ಇದನ್ನೂ ವೀಕ್ಷಿಸಿ: ತೆಲುಗು ನಟಿಯರೂ ಇಂಡಸ್ಟ್ರಿಗೆ ಬರಬೇಕೆಂದ ಸ್ಟೈಲಿಷ್ ಸ್ಟಾರ್: ತೆಲುಗು ನಾಯಕಿಯರೇ ಇಲ್ವಾ?