ತುಳುನಾಡಿನಲ್ಲಿ ಕೊರಗಜ್ಜನ ಶಕ್ತಿ ಮತ್ತೊಮ್ಮೆ ಸಾಬೀತಾಗಿದೆ. ಕೆಲ ಸಮಯದ ಹಿಂದೆ ಮಂಗಳೂರಿನ ಹಲವು ದೈವಸ್ಥಾನಗಳ ಕಾಣಿಕೆ ಹುಂಡಿಗಳಿಗೆ ಕಾಂಡೋಮ್ ಸಹಿತ ನಿಂದನಾತ್ಮಕ ಬರಹ ಹಾಕಿದ್ದಾರೆ ಎನ್ನಲಾದ ಯುವಕರ ತಂಡದ ಒಬ್ಬ ಸದಸ್ಯ ಕೆಲ ದಿನಗಳ ಹಿಂದೆ ದಿಢೀರನೆ ರಕ್ತಕಾರಿ ಸಾವಿಗೀಡಾಗಿದ್ಧಾನೆ.
ಬೆಂಗಳೂರು (ಏ. 02): ತುಳುನಾಡಿನಲ್ಲಿ ಕೊರಗಜ್ಜನ ಶಕ್ತಿ ಮತ್ತೊಮ್ಮೆ ಸಾಬೀತಾಗಿದೆ. ಕೆಲ ಸಮಯದ ಹಿಂದೆ ಮಂಗಳೂರಿನ ಹಲವು ದೈವಸ್ಥಾನಗಳ ಕಾಣಿಕೆ ಹುಂಡಿಗಳಿಗೆ ಕಾಂಡೋಮ್ ಸಹಿತ ನಿಂದನಾತ್ಮಕ ಬರಹ ಹಾಕಿದ್ದಾರೆ ಎನ್ನಲಾದ ಯುವಕರ ತಂಡದ ಒಬ್ಬ ಸದಸ್ಯ ಕೆಲ ದಿನಗಳ ಹಿಂದೆ ದಿಢೀರನೆ ರಕ್ತಕಾರಿ ಸಾವಿಗೀಡಾಗಿದ್ದಾನೆ.
ಇದರಿಂದ ಭಯಗೊಂಡ ಉಳಿದಿಬ್ಬರು ಯುವಕರು ಕೊರಗಜ್ಜ ದೈವದ ಎದುರು ಶರಣಾಗಿದ್ದಾರೆ. ಅವರನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನ ಜೋಕಟ್ಟೆನಿವಾಸಿಗಳಾದ ಅಬ್ದುಲ್ ರಹೀಂ, ಅಬ್ದುಲ್ ತೌಫೀಕ್ ಬಂಧಿತರು. ಮುಖ್ಯ ಆರೋಪಿಯಾಗಿದ್ದ ನವಾಝ್ ಈಗಾಗಲೇ ಸಾವಿಗೀಡಾದವನು.