ಜೆಜೆ ನಗರದಲ್ಲಿ ಇತ್ತೀಚೆಗೆ ನಡೆದ ದಲಿತ ಯುವಕ ಚಂದ್ರು ಹತ್ಯೆ ಪ್ರಕರಣದ ಕುರಿತು ಸ್ನೇಹಿತ ಸೈಮನ್ ಸ್ಫೋಟಕ ಹೇಳಿಕೆ ನೀಡುವ ಮೂಲಕ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಲಭಿಸಿದೆ.
ಬೆಂಗಳೂರು, (ಏ.09): ಜೆಜೆ ನಗರದಲ್ಲಿ ಇತ್ತೀಚೆಗೆ ನಡೆದ ದಲಿತ ಯುವಕ ಚಂದ್ರು ಹತ್ಯೆ ಪ್ರಕರಣದ ಕುರಿತು ಸ್ನೇಹಿತ ಸೈಮನ್ ಸ್ಫೋಟಕ ಹೇಳಿಕೆ ನೀಡುವ ಮೂಲಕ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಲಭಿಸಿದೆ.
ಬೆಂಗಳೂರಿನ ಜೆಜೆ ನಗರದಲ್ಲಿ ಚಂದ್ರು ಎಂಬಾತನನ್ನು ದುಷ್ಕರ್ಮಿಗಳು ಚಾಕುವಿನಿಂದ ತೊಡೆ ಭಾಗಕ್ಕೆ ಇರಿದು ಕೊಲೆ ಮಾಡಿದ್ದರು. ಈ ಪ್ರಕರಣದಲ್ಲಿ ಉರ್ದು ಬರಲ್ಲ ಅಂತ ಕೊಲೆ ಮಾಡಲಾಗಿದೆ ಎಂದು ಹೇಳಿಕೆ ನೀಡಿದ್ದ ಗೃಹ ಸಚಿವ ಅರಗ ಜ್ಞಾನೇಂದ್ರ, ನಂತರ ಬೈಕ್ ಟಚ್ ಆಗಿದ್ದರಿಂದ ಕೊಲೆ ಆಗಿತ್ತು ಎಂದು ಹೇಳಿಕೆ ಬದಲಿಸಿದ್ದರು. ಅಲ್ಲದೇ ಇದೇ ರೀತಿಯ ಹೇಳಿಕೆಯನ್ನು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ನೀಡಿದ್ದರು. ಇದೀಗ ಚಂದ್ರು ಸ್ನೇಹಿತ ಸೈಮನ್ ಮಹತ್ವದ ಹೇಳಿಕೆ ನೀಡಿದ್ದಾನೆ.