ಕೌಟುಂಬಿಕ ಕಲಹಕ್ಕೆ ಬೇಸತ್ತು ಗಾಯಕಿ ಸುಶ್ಮೀತಾ ಆತ್ಮಹತ್ಯೆ/ ಸ್ಯಾಂಡಲ್ ವುಡ್ ನಿಂದ ಮರೆಯಾದ ಗಾಯಕಿ ಸುಶ್ಮೀತಾ/ ಮಿಸ್ ಯೂ ಮಮ್ಮಿ ಎಂದು ಸಂದೇಶ
ಬೆಂಗಳೂರು[ಫೆ. 17] ಕೌಟುಂಬಿಕ ಕಲಹಕ್ಕೆ ಬೇಸತ್ತು ಗಾಯಕಿ ಸುಶ್ಮೀತಾ ನೇಣಿಗೆ ಶರಣಾಗಿದ್ದಾರೆ. ' ನನ್ನ ಸಾವಿಗೆ ಗಂಡನ ಮನೆಯವರೇ ಕಾರಣ. ದೊಡ್ಡಮ್ಮನ ಮಾತು ಕೇಳಿ ನನಗೆ ಚಿತ್ರಹಿಂಸೆ ನೀಡುತ್ತಿದ್ದಾರೆ. ಮದುವೆಯಾದಾಗಿನಿಂದ ಇದೇ ಗೋಳು. ಹಿಂಸೆಯಿಂದ ಬೇಸತ್ತು ನೇಣಿಗೆ ಶರಣಾಗುತ್ತಿದ್ದೇನೆ' ಎಂದು ಅಮ್ಮನಿಗೆ ವಾಟ್ಸಾಪ್ ಮೆಸೇಜ್ ಕಳುಹಿಸಿ ನೇಣಿಗೆ ಕೊರಳು ನೀಡಿದ್ದಾರೆ.
ಹಾಗಾದರೆ ಹಾಡುತ್ತಿದ್ದ ಗಾಯಕಿ ತನ್ನ ಉಸಿರು ತಾನೇ ನಿಲ್ಲಿಸಿಕೊಳ್ಳಲು ಕಾರಣವೇನು? ಈ ಕುಟುಂಬದ ಗೋಳಿಗೆ ಯಾರ ಆಸೆ ಕಾರಣ?