Dec 27, 2024, 9:51 AM IST
ಅದು ಆ ಊರಿನ ಒಂಟಿ ಮನೆ.. ಒಂಟಿ ಮನೆ, ಒಂಟಿ ವೃದ್ದರನ್ನೆ ಟಾರ್ಗೆಟ್ ಮಾಡ್ಕೊಂಡು ಹೊಂಚು ಹಾಕ್ತಿದ್ದ ವ್ಯಕ್ತಿಯೊಬ್ಬ ಅಲ್ಲಿ ಸೃಷ್ಟಿಸಿದ್ದು ಭೀಕರತೆಯನ್ನ.. ಯೆಸ್ ಇಡೀ ಊರಿಗೆ ಊರೇ ನಡುಗುವಂತೆ ಆ ಹಂತಕ ಮಾಡಿಬಿಟ್ಟಿದ್ದಾನೆ. ಯಾಕಂದ್ರೆ ಅವ್ನು ಮಾಡಿದ ಹತ್ಯೆ ಯಾವುದೇ ಕ್ರೈಂ ಥ್ರಿಲ್ಲರ್ ಸಿನಿಮಾಗೂ ಕಡಿಮೆ ಇರ್ಲಿಲ್ಲ.. ಬಳಸಿದ ಆಯುಧ ಕಂಡು ಪೊಲೀಸರೇ ಒಂದು ಕ್ಷಣ ಶಾಕ್ ಆಗಿದ್ದರು. ಇದೇ ಇವತ್ತಿನ ಎಫ್‌ಐಆರ್.ಕಾವೇರಿ ಗಲಾಟೆಗೆ, ಸಕ್ಕರೆ ವಿಚಾರಕ್ಕೆ, ರಾಜಕೀಯ ವಿಚಾರಕ್ಕೆ ಸದಾ ಸುದ್ದಿಯಲ್ಲಿದ್ದ ಸಕ್ಕರೆನಾಡು ಮಂಡ್ಯ ಇದೀಗ ಭೀಕರವಾದ ಹತ್ಯೆಯೊಂದಕ್ಕೆ ಸಾಕ್ಷಿಯಾಗಿದೆ. ಒಂಟಿ ಮಹಿಳೆ, ಒಂಟಿ ಮನೆಗಳನ್ನೆ ಟಾರ್ಗೆಟ್ ಮಾಡಿಕೊಂಡಿದ್ದ ದರೋಡೆಕೋರ ಅಲ್ಲಿ ಭೀಕರತೆಯನ್ನೆ ಸೃಷ್ಟಿಸಿದ್ದಾನೆ. ಮರಕತ್ತರಿಸುವ ಗರಗಸ ಮಾದರಿಯ ಯಂತ್ರದಿಂದ ವೃದ್ಧನೊಬ್ಬನನ್ನು ಕೊಂದು ಭಯದ ವಾತಾವರಣವನ್ನು ಸೃಷ್ಟಿಸಿದ್ದಾನೆ.
ಏನಿದು ಸಿನಿಮೀಯಾ ಮಾದರಿಯ ಸ್ಟೋರಿ ಅನ್ನೋದನ್ನ ನೋಡ್ಕೊಂಡು ಬನ್ನಿ. ಅಸಲಿಗೆ ಈ ರೀತಿ ಭೀಕರವಾಗಿ ಹತ್ಯೆ ಮಾಡಿದ್ದಾದ್ರೂ ಯಾಕೆ..? ಹತ್ಯೆ ನಡೆಸಿ ದರೋಡೆಗೆ ಪಕ್ಕಾ ಪ್ಲಾನ್ ಅನ್ನೂ ಮಾಡಿಕೊಂಡು ಬಂದಿದ ಈ ಮೊಹಮ್ಮದ್ ಇಬ್ರಾಹಿಂ ಆದ್ರೂ ಯಾರು..? ಎಷ್ಟು ಅಚ್ಚುಕಟ್ಟಾದ ಪ್ಲಾನ್ ಮಾಡಿದ್ದ ಇಬ್ರಾಹಿ ಕೊಂಚ ಯಾಮಾರಿದ್ರೂ ಎಸ್ಕೇಪ್ ಆಗಿಬಿಡ್ತಿದ್ದ.. ಈ ರೀತಿ ದರೋಡೆ ಮಾಡುವಂತಹ ಅನಿವಾರ್ಯತೆ ಆದ್ರೂ ಏನಿತ್ತು. ಈ ಮೊಹಮ್ಮದ್ ಇಬ್ರಾಹಿಂ ಎಂತ ಒಳ್ಳೆ ಪ್ಲಾನ್ ಮಾಡ್ಕೊಂಡಿದ್ದ ಅಂದ್ರೆ.. ಎಲ್ಲೂ ಕೂಡ ಪ್ಲಾನ್ ಫೇಲ್ ಆಗ್ಬಾರ್ದು ಅನ್ನೋ ನಿಟ್ಟಿನಲ್ಲಿ ಅಚ್ಚುಕಟ್ಟಾಗಿ ಪ್ಲಾನ್ ಮಾಡಿಕೊಂಡಿದ್ದ. ಮೈಸೂರಿನ ಯಾವುದೇ ಟೂ ವಿಲರ್ ನ ಬಾಡಿಗೆಗೆ ಪಡೆದು ಬಂದಿದ್ದ.
ಸಿಸಿಟಿವಿ ಎಲ್ಲಿ ಇಲ್ಲಾ ಅನ್ನೋದನ್ನ ನೋಡಿ ಪ್ಲಾನ್ ಮಾಡಿಕೊಂಡು ಹಂತಕ ಇಬ್ರಾಹಿಂ ಬಂದಿದ್ದ.. ಆದ್ರೆ ಈ ಇಬ್ರಾಹಿಂ ಇಷ್ಟು ಕ್ರೂರವಾಗಿ ಕೊಲ್ಲೋಕೆ ಅದೊಂದು ಕಾರಣ ಇತ್ತು.. ಅದೇ ಆನ್ ಲೈನ್ ಗೇಮ್.. ಯೆಸ್ ಆನ್ ಲೈನ್ ಗೇಮ್ ನಲ್ಲಿ ಸಿಕ್ಕಾಪಟ್ಟೆ ಸಾಲ ಮಾಡಿಕೊಂಡಿದ್ದ ಇಬ್ರಾಹಿಂ ಈ ರೀತಿ ಕೃತ್ಯ ಎಸಗೋಕೆ ಮುಂದಾಗಿದ್ದಾನೆ ಅನ್ನೋದು ತನಿಖೆಯಿಂದ ಬಟಬಯಲಾಗಿದೆ. ನೋಡುದ್ರಲ್ಲಾ ಇಡೀ ಮಂಡ್ಯ ಜಿಲ್ಲೆಯನ್ನ ಈ ಹಂತಕ ಇಬ್ರಾಹಿಂ ಯಾವ ರೀತಿ ಆತಂಕಕ್ಕೆ ದೂಡಿದ್ದಾನೆ ಅನ್ನೋದನ್ನ.. ಇನ್ನೂ ಬದುಕಿನ ಮುಸ್ಸಂಜೆಯಲ್ಲಿದ್ದ ಅದರಲ್ಲೂ ಹಾಸಿಗೆ ಹಿಡಿದಿದ್ದ ರಮೇಶ್ ರನ್ನು ಈ ರೀತಿ ಭೀಭತ್ಸವಾಗಿ ಕೊಲೆ ಮಾಡಿರೋದು ಮಾತ್ರ ದುರಂತವೇ ಸರಿ.. ಇನ್ನಾದ್ರೂ ಜನ ಇಂತಹ ಕೃತ್ಯಗಳಿಂದ ಪಾಠ ಕಲಿತು ಎಚ್ಚೆತ್ತುಕೊಳ್ಳಬೇಕು.