ಹುಡುಗಿ ಕೈಕೊಟ್ಟಿದ್ದಕ್ಕೆ ಮೇಷ್ಟ್ರುಗೆ ಶಿಕ್ಷೆ! ನ್ಯೂ ಇಯರ್​​ ಲಡ್ಡು​​ನಲ್ಲಿ ವಿಷ.. ಮೂಲದಲ್ಲಿ ಲವ್‌ ಸ್ಟೋರಿ!

ಹುಡುಗಿ ಕೈಕೊಟ್ಟಿದ್ದಕ್ಕೆ ಮೇಷ್ಟ್ರುಗೆ ಶಿಕ್ಷೆ! ನ್ಯೂ ಇಯರ್​​ ಲಡ್ಡು​​ನಲ್ಲಿ ವಿಷ.. ಮೂಲದಲ್ಲಿ ಲವ್‌ ಸ್ಟೋರಿ!

Published : Jan 09, 2025, 04:16 PM ISTUpdated : Jan 09, 2025, 04:19 PM IST

ಅವರು ಪ್ರತಿಷ್ಟಿತ ವಿದ್ಯಾ ಸಂಸ್ಥೆಯ ಸೆಕ್ರೆಟರಿ.. ಮಕ್ಕಳ ಭವಿಷ್ಯ ರೂಪಿಸೋದ್ರಲ್ಲಿ ಪ್ರಮುಖ ಪಾತ್ರವಹಿಸಿದ್ರು.. ಆ ಭಾಗದಲ್ಲಿ ಒಳ್ಳೆ ಹೆಸರು ಮಾಡಿದ್ರು.. ಆದ್ರೆ ಆವತ್ತೊಂದು ದಿನ ಅದೇ ಭಾಗದ ಶಾಸಕರಿಂದ ನ್ಯೂ ಇಯರ್​​ ಗಿಫ್ಟ್​ ಬಂದಿತ್ತು. 

ಅವರು ಪ್ರತಿಷ್ಟಿತ ವಿದ್ಯಾ ಸಂಸ್ಥೆಯ ಸೆಕ್ರೆಟರಿ.. ಮಕ್ಕಳ ಭವಿಷ್ಯ ರೂಪಿಸೋದ್ರಲ್ಲಿ ಪ್ರಮುಖ ಪಾತ್ರವಹಿಸಿದ್ರು.. ಆ ಭಾಗದಲ್ಲಿ ಒಳ್ಳೆ ಹೆಸರು ಮಾಡಿದ್ರು.. ಆದ್ರೆ ಆವತ್ತೊಂದು ದಿನ ಅದೇ ಭಾಗದ ಶಾಸಕರಿಂದ ನ್ಯೂ ಇಯರ್​​ ಗಿಫ್ಟ್​ ಬಂದಿತ್ತು. ಬಾಕ್ಸ್​​ನಲ್ಲಿ ಲಡ್ಡು ಇತ್ತು. ಮನೆಗೆ ಹೋಗಿ ಊಟ ಮಾಡಿ ಆ ಸ್ವೀಟ್​ ತಿನ್ನೋಣ ಅಂತ ಒಂದು ಲಡ್ಡುನ ತೆಗೆದು ಬಾಯಿಗೆ ಹಾಕಿಕೊಂಡ್ರು ಅಷ್ಟೇ.. ಫುಲ್​ ಕಹಿ ಕಹಿ.. ಶಾಸಕರಿಗೇ ಫೋನ್​ ಮಾಡಿ ಕೇಳೋಣ ಅಂತ ಕಾಲ್​ ಮಅಡಿದ್ರೆ ಶಾಸಕರು ನಾನು ಸ್ವೀಟ್​​ ಕಳಿಸೇ ಇಲ್ಲ ಅಂದುಬಿಟ್ರು.. ಇನ್ನೇನು ಮಾಡೋದು ಅಂತ ಲಡ್ಡುಗಳನ್ನ ಪರೀಕ್ಷೆಗೆ ಕಳಿಸಿದ್ರೆ ಅದರಲ್ಲಿ ವಿಷ ಇರೋದು ಪತ್ತೆಯಾಗಿತ್ತು. ಹಾಗಾದ್ರೆ ಆ ವಿಷದ ಲಡ್ಡುವನ್ನ ಸೆಕ್ರೆಟರಿಗೆ ಕಳಿಸಿದ್ಯಾರು..? ಅದರಲ್ಲಿ ವಿಷ ಬೆರಸಿದ್ದೇಕೆ..? ಒಂದು ವಿಷ ಲಡ್ಡುವಿನ ಹಿಂದಿನ ರೋಚಕ ಕಥೆಯೇ ಇವತ್ತಿನ ಎಫ್​.ಐ.ಆರ್​​​. 

ಕೊನೆಗೂ ಲಡ್ಡು ಪಾರ್ಸೆಲ್​ ಕಳಿಸಿದ್ದವನು ಯಾರು ಅನ್ನೋದನ್ನ ಪೊಲೀಸರು ಪತ್ತೆ ಮಾಡಿದ್ರು.. ನಂತರ ಅವರ ಬೇಟೆಗೆ ನಿಂತ್ರು.. ಆದ್ರೆ ಇದೇ ಟೈಂನಲ್ಲಿ ಪೊಲೀಸರಿಗೆ ಮತ್ತೊಂದು ಶಾಕಿಂಗ್​ ನ್ಯೂಸ್​​ ಸಿಕ್ಕಿತ್ತು.. ಅದೇನಂದ್ರೆ ಆ ಕಿರಾತಕ ಇನ್ನೂ ಇಬ್ಬರಿಗೆ ಇದೇ ರೀತಿ ಪಾರ್ಸೆಲ್​ ಕಳಿಸಿದ್ದ ಅಂತ.. ಅಷ್ಟಕ್ಕೂ ಆತ ಹೀಗ್ಯಾಕೆ ಮಾಡಿದ..? ಆತ ಇನ್ಯಾರಿಗೆಲ್ಲಾ ಸ್ವೀಟ್​​ ಬಾಕ್ಸ್​​ ಕಳಿಸಿದ ಅಂತ ವಿಚಾರಿಸಿದಾಗಲೇ ನೋಡಿ ಅಲ್ಲೊಂದು ಲವ್​ ಸ್ಟೋರಿ ಓಪನ್​ ಆಗೋದು. ಅವನೊಬ್ಬ ಲವ್ವರ್​​ ಬಾಯ್​​​.. ಇದೇ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯಲ್ಲಿ LLB ಮಾಡುವಾಗ್ಲೇ ಅದೇ ಸಂಸ್ಥೆಯಲ್ಲಿ ಮೆಡಿಸೀನ್​​​ ಓದುತ್ತಿದ್ದ ಹುಡುಗಿಯನ್ನ ಪ್ರೀತಿಸುತ್ತಿದ್ದ.. ಇಬ್ಬರೂ ಲವ್​​ನಲ್ಲಿ ಬಿದ್ದಿದ್ರು.. ಆದ್ರೆ ಒಂದು ದಿನ  ನಾಗರಾಜು ರವರು ಇಬ್ಬರನ್ನೂ ಕರೆದು ವಾರ್ನ್​ ಮಾಡಿದ್ರು.. ಆಗ ಹುಡುಗಿ ಇವನ ಜೊತೆ ಬ್ರೇಕ್​ ಅಪ್​ ಮಾಡಿಕೊಂಡು ಬಿಟ್ಟಳು.. 

ಲವ್​ ಬ್ರೇಕ್​ ಅಪ್​ ಆದ ನಂತರ ಈತ ಖಿನ್ನತೆಗೆ ಒಳಗಾದ ಇಬ್ಬರು ಡಾಕ್ಟರ್​​ ಬಳಿಯೂ ಚಿಕಿತ್ಸೆ ಪಡೆಯುತ್ತಿದ್ದ.. ಆದ್ರೆ ಇವನ ಆರೋಗ್ಯ ಚೇತರಿಸಲಿಲ್ಲ.. ಇನ್ನೂ ಇವನ ಸ್ಥಿತಿ ನೋಡಿ ಈತನ ಹೆತ್ತವರೂ ದೂರವಾಗಿಬಿಟ್ರು.. ಯಾವಾಗ ಅಪ್ಪ-ಅಮ್ಮ ದೂರವಾದ್ರೋ ಅವನ ಈ ಸ್ಥಿತಿಗೆ ನಾಗರಾಜು ಮತ್ತು ತನಗೆ ಚಿಕಿತ್ಸೆ ನೀಡಿದ ವೈದ್ಯರೇ ಕಾರಣ ಅಂತ ತಿಳಿದು.. ತನಗೆ ಕೊಟ್ಟಿದ್ದ ಟ್ಯಾಬ್ಲೆಟ್​ಗಳನ್ನೇ ಪುಡಿ ಮಾಡಿ ಅದನ್ನ ಲಡ್ಡುಗೆ ಬೆರಸಿ ಶಾಸಕರ ಹೆಸರಲ್ಲಿ ಮೂವರಿಗೂ ಕಳಿಸಿಬಿಟ್ಟ. ಲಾಯರ್​ ಒಬ್ಬ ಪ್ರೇಮ ವೈಫಲ್ಯದಿಂದ ಮಾನಸಿಕ ರೋಗಿಯಾಗಿ ಮೂವರ ಕೊಲೆಗೂ ಸಂಚು ರೂಪಿಸಿದ್ದು ನಿಜಕ್ಕೂ ವಿಪರ್ಯಾಸ.  ಪ್ರೀತಿಸಿದವಳು ಹೋದಳು.. ಹೆತ್ತವರನ್ನಾದ್ರೂ ಖುಷಿಯಿಂದ ನೋಡಿಕೊಳ್ಳೋಣ ಅಂತ ಇದ್ದಿದ್ರೆ ಇವತ್ತು ಚೆನ್ನಾಗಿರ್ತಿದ್ದ.. ಆದ್ರೆ ಸೇಡು ತೀರಿಸಿಕೊಳ್ಳಲು ಹೋಗಿ ಜೈಲು ಸೇರಿದ್ದಾನೆ.

24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
23:12ಬೀದಿಗೆ ಬಂತು ಕನ್ನಡದ ಮತ್ತೊಬ್ಬ ಸೀರಿಯಲ್ ನಟಿಯ ಕುಟುಂಬ; ಮದುವೆಗೂ ಮುನ್ನವೇ ಬಳಸಿಕೊಂಡಿದ್ದ ಸುರೇಶ!
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!