
ಆವತ್ತು ಸಂತೆಯಲ್ಲಿ ನಡೆದಿದ್ದಾದ್ರೂ ಏನು..? ರೌಡಿ ಶೀಟರ್ ಒಬ್ಬ ಚಿಲ್ಟಾರಿ ಹುಡುಗನ ಕೈಯಲ್ಲಿ ಮರ್ಡರ್ ಆದ ಕಥೆಯೇ ಇವತ್ತಿನ ಎಫ್.ಐ.ಆರ್.
ಆತ ನಗರಸಭೆಯ ಮಾಜಿ ಸದಸ್ಯ ... ರೌಡಿ ಶೀಟರ್ ಕೂಡ ಹೌದು.. ಆದ್ರೆ ಆವತ್ತು ಇದೇ ಮನುಷ್ಯ ಮನೆಗೆ ತರಕಾರಿ ಬೇಕು ಅಂತ ಭಾನವಾರ ಸಂತೆಗೆ ಹೋಗಿದ್ದ.. ಆದ್ರೆ ತರಕಾರಿ ಖರೀದಿಸುವಾಗಲೇ ಆತ ಮರ್ಡರ್ ಆಗಿಬಿಟ್ಟ. ಹಂತಕ ಚಾಕುವಿನಿಂದ ಚುಚ್ಚಿ ಅವನನ್ನ ಕೊಂದುಬಿಟ್ಟಿದ್ದ... ಇನ್ನೂ ಇದೇ ಕೇಸ್ನ ತನಿಖೆ ನಡೆಸಿದ ಪೊಲೀಸರಿಗೆ ಆ ರೌಡಿ ಶೀಟರ್ನನ್ನ ಕೊಂದಿದ್ದು ಒಬ್ಬ ಚಿಲ್ಟಾರಿ ಹುಡುಗ ಅನ್ನೋದನ್ನ ಪತ್ತೆ ಮಾಡಿದ್ರು. ಅಷ್ಟೇ ಅಲ್ಲ ಇಲ್ಲಿ ಹೆಣ ಹಾಕಿದ್ದ ಆ ಹುಡುಗ ಸೀದಾ ಗೋವಾಗೆ ಹೋಗಿ ಪಾರ್ಟಿ ಮಾಡ್ತಿದ್ದ. ಹಾಗಾದ್ರೆ ನಗರಸಭೆ ಸದಸ್ಯನನ್ನ ಆ ಯುವಕ ಕೊಂದಿದ್ದೇಕೆ..? ಆವತ್ತು ಸಂತೆಯಲ್ಲಿ ನಡೆದಿದ್ದಾದ್ರೂ ಏನು..? ರೌಡಿ ಶೀಟರ್ ಒಬ್ಬ ಚಿಲ್ಟಾರಿ ಹುಡುಗನ ಕೈಯಲ್ಲಿ ಮರ್ಡರ್ ಆದ ಕಥೆಯೇ ಇವತ್ತಿನ ಎಫ್.ಐ.ಆರ್.
ಮೊದಲು ದುಡ್ಡೇ ಕೊಡದೇ ಸತಾಯಿಸಿದ್ದವನು.. ನಂತರ ಡ್ರಾಮ ಮಾಡಿ ಮೂರುವರೆ ಲಕ್ಷವನ್ನ ಕೊಟ್ಟಿದ್ದ.. ಆದ್ರೆ ಇನ್ನೂ 60 ಸಾವಿರ ಬಾಕಿ ಇತ್ತು.. ಆ 60 ಸಾವಿರ ವಿಷಯವನ್ನ ನಿತೇಶ ಊರಲ್ಲೆಲ್ಲಾ ಹೇಳಿಕೊಂಡು ಬಂದಿದ್ದ. ಇದು ಸತೀಶನ ಕಿವಿಗೂ ಬಿತ್ತು.. ಈ ಟೈಂನಲ್ಲಿ ಸತೀಶ ಒಂದು ಎಡವಟ್ಟು ಮಾಡಿಬಿಟ್ಟ... ಅದೇ ಎಡವಟ್ಟು ಅವನ ಪ್ರಾಣವನ್ನೇ ತಗೆಯುವಂತೆ ಮಾಡಿತ್ತು. ಸತಾಯಿಸಿ.. ಸತಾಯಿಸಿ ಹಣ ಕೊಟ್ಟಿದ್ದ ಸತೀಶ ಇನ್ನೂ 60 ಸಾವಿರ ಬಾಕಿ ಇಟ್ಟುಕೊಂಡಿದ್ದ. ಇದನ್ನ ನಿತೇಶ ಊರಲ್ಲೆಲ್ಲಾ ಹೆಳಿಕೊಂಡು ಬಂದಿದ್ದ.. ಸತೀಶನಿಗೆ ಇದ್ರಿಂದ ಅವಮಾನವಾಗಿತ್ತು.. ಈ ಟೈಂನಲ್ಲಿ ಸತೀಶ ಒಂದು ಎಡವಟ್ಟು ಮಾಡಿಬಿಟ್ಟ.. ನಿತೇಶನನ್ನ ಮುಗಿಸಲು ಸತೀಶ ಸುಪಾರಿ ಕೊಟ್ಟ.
ಇನ್ನೂ ಸುಪಾರಿ ವಿಷಯವನ್ನ ಆತ ಸೀದ ಹೋಗಿ ಅವನ ಬಳಿಯೇ ಹೋಗಿ ಹೇಳಿಬಿಟ್ಟ.. ಯಾವಾಗ ನಿತೇಶನಿಗೆ ಸುಪಾರಿ ವಿಷಯ ಗೊತ್ತಾಯ್ತೋ ಸತೀಶನನ್ನೇ ಮುಗಿಸಲು ತೀರ್ಮಾನಿಸಿಬಿಟ್ಟ.. ಅದರಂತೆ ಆವತ್ತು ಸತೀಶ ಮಾತುಕತೆಗೆ ಕರೆದಾಗ ಜೊತೆಯಲ್ಲಿ ಚಾಕುವನ್ನೂ ತಗೆದುಕೊಂಡು ಹೋದ. ಸಣ್ಣ ಮೊತ್ತದ ಹಣಕಾಸಿನ ವಿಚಾರದಲ್ಲಿ ಪ್ರಾರಂಭಗೊಂಡ ಗಲಾಟೆ, ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿರುವುದು ವಿಪರ್ಯಾಸ. ಇವತ್ತು ಸತೀಶ ಪ್ರಾಣ ಬಿಟ್ಟರೆ ನಿತೇಶ ಜೈಲಿಗೆ ಹೋಗಿದ್ದಾನೆ.. ಹೆಣ್ಣು ಹೊನ್ನು ಮಣ್ಣುವಿನಿಂದ ಏನೆಲ್ಲಾ ಆಗುತ್ತೆ ಅನ್ನೋದಕ್ಕೆ ಇವತ್ತಿನ ಎಪಿಸೋಡ್ ಬೆಸ್ಟ್ ಎಕ್ಸಾಂಪಲ್ ಅಂತ ಹೇಳ್ತಾ ಇವತ್ತಿನ ಎಪಿಸೋಡ್ ಮುಗಿಸುತ್ತಿದ್ದೇನೆ.