ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!

ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!

Published : Dec 11, 2025, 11:23 AM IST

ಅವರೆಲ್ಲಾ ಒಂದೇ ಏರಿಯಾದ ಹುಡುಗರು.. ತಿನೋದು.. ಕುಡಿಯೋದು ಎಲ್ಲಾ ಒಟ್ಟಿಗೇ.. ಎಲ್ಲರೂ ಆಟೋ ಡ್ರೈವರ್​​ಗಳೇ.. ಆವತ್ತೊಂದು ದಿನ ಗೆಳೆಯರೆಲ್ಲಾ ಸೇರಿ ಎಣ್ಣೆ ಪಾರ್ಟಿ ಮಾಡೋದಕ್ಕೆ ಹೋದ್ರು.. ಆದ್ರೆ ಪಾರ್ಟಿ ಮುಗಿಯೋ ಹೊತ್ತಿಗೆ ಅಲ್ಲಿ ಒಂದು ಹೆಣ ಬಿದ್ದಿತ್ತು.

ಅವರೆಲ್ಲಾ ಒಂದೇ ಏರಿಯಾದ ಹುಡುಗರು.. ತಿನೋದು.. ಕುಡಿಯೋದು ಎಲ್ಲಾ ಒಟ್ಟಿಗೇ.. ಎಲ್ಲರೂ ಆಟೋ ಡ್ರೈವರ್​​ಗಳೇ.. ಆವತ್ತೊಂದು ದಿನ ಗೆಳೆಯರೆಲ್ಲಾ ಸೇರಿ ಎಣ್ಣೆ ಪಾರ್ಟಿ ಮಾಡೋದಕ್ಕೆ ಹೋದ್ರು.. ಆದ್ರೆ ಪಾರ್ಟಿ ಮುಗಿಯೋ ಹೊತ್ತಿಗೆ ಅಲ್ಲಿ ಒಂದು ಹೆಣ ಬಿದ್ದಿತ್ತು.. ಜೊತೆಯಲ್ಲಿ ಕೂತು ಕುಡಿದವರೇ ಒಬ್ಬನ ಕಥೆ ಮುಗಿಸಿದ್ರು.. ಅಷ್ಟೇ ಅಲ್ಲ ಕೊಂದ ಮೇಲೆ ಕೊಲೆಗಾರ ತನ್ನ ಅಕ್ಕನಿಗೆ ವಿಡಿಯೋ ಕಾಲ್​ ಮಾಡಿ ವಿಷಯ ತಿಳಿಸಿದ್ದ.. ಇನ್ನೂ ಪೊಲೀಸರು ತನಿಖೆ ಆರಂಭಿಸುತ್ತಾರೆ.. ಆಗಲೇ ನೋಡಿ ಗೊತ್ತಾಗಿದ್ದು ಅದು ಗೆಳೆಯ ಮಾಡಿದ ಉಪಕಾರಕ್ಕೆ ನಡೆದ ಕೊಲೆ ಅಂತ. ಅಷ್ಟಕ್ಕೂ ಆ ಉಪಕಾರವೇನು..? ಆವತ್ತು ಆ ನಿರ್ಜನ ಪ್ರದೇಶದಲ್ಲಿ ನಡೆದಿದ್ದೇನು..?

ಒಂದು ಲೈವ್​ ಮರ್ಡರ್​ ಹಿಂದಿನ ಕಥೆಯೇ ಇವತ್ತಿನ ಎಫ್​ಐಆರ್​​. ಈಗ ಕಣ್ಣೀರು ಹಾಕಿದ್ರೆ ಏನ್​ ಪ್ರಯೋಜನ.. ಇವತ್ತು ಸಮಾಜಕ್ಕೆ ಮೆಸೆಜ್​ ಕೊಡುತ್ತಿರುವ ಇವರು ಮೊದಲೇ ತಮ್ಮ ಮನೆಯ ಮಗನ ಬಗ್ಗೆ ಎಚ್ಚರ ವಹಿಸಿದ್ರೆ  ಇವತ್ತು ಆತ ಬದುಕುಳಿಯುತ್ತಿದ್ದ. ಅಷ್ಟೇ ಅಲ್ಲ ಕುಟುಂಬದ ಜೊತೆ ನೆಮ್ಮದಿಯ ಜೀವನ ನಡೆಸುತ್ತಿದ್ದ.. ಆದ್ರೆ ಮಾಡಬಾರದವರ ಜೊತೆ ಸಹವಾಸ ಮಾಡಿ ಇವತ್ತು ಮಸಣ ಸೇರಿದ್ದಾನೆ.. ಅಷ್ಟಕ್ಕೂ ಉಲ್ಲಾಸ, ಕೀರ್ತಿಯನ್ನ ಕೊಂದಿದ್ದೇಕೆ..? ಗೆಳೆಯನನ್ನೇ ಕೊಲ್ಲುವಂಥಹ ನಿರ್ಧಾರ ಆತ ಮಾಡಿದ್ದೇಕೆ..? 15 ದಿನಗಳ ಹಿಂದೆ ಉಲ್ಲಾಸ, ಕೀರ್ತಿ ಸೇರಿದಂತೆ ಫುಲ್​ ಗ್ಯಾಂಗ್​ ದೇವಿರಮ್ಮ ದೇವಸ್ಥಾನಕ್ಕೆ ಹೋಗಿದ್ರು.. ಆಗ ದೇವಸ್ಥಾನದ ಸಮೀಪ ಮತ್ತೊಂದು ಗ್ಯಾಂಗ್​​ ಜೊತೆ ಉಲ್ಲಾಸ ಜಗಳಕ್ಕಿಳಿದಿದ್ದ..

ಈ ಟೈಂನಲ್ಲಿ ಕೀರ್ತಿ ಜಗಳವನ್ನ ಬಿಡಿಸಿ ಉಲ್ಲಾಸ್​ನನ್ನ ಮನೆಗೆ ಕರೆತಂದಿದ್ದ.. ಇದು ಉಲ್ಲಾಸನಿಗೆ ಸಿಟ್ಟು ತರಿಸಿತ್ತು.. ನನ್ನನ್ನ ಗೆಳೆಯನೇ ತಡೆದುಬಿಟ್ಟನಲ್ಲ ಅನ್ನೋ ಕೋಪವಿತ್ತು.. ಇದೇ ವಿಚಾರವಾಗಿ ಕೊಲೆಯಾಗೋ ಹಿಂದಿನ ದಿನ ಕೀರ್ತಿ, ಉಲ್ಲಾಸನಿಗೆ ಇದೇ ವಿಷಯಕ್ಕೆ ಹೊಡೆದುಬಿಟ್ಟಿದ್ದ.. ಈ ಎರಡೂ ಸಿಟ್ಟುಗಳನ್ನ ಇಟ್ಟುಕೊಂಡಿದ್ದ ಉಲ್ಲಾಸ ಮರು ದಿನ ಎಣ್ಣೆ ಪಾರ್ಟಿ ಮಾಡೋಣ ಬಾ ಅಂತ ಕರೆದಿದ್ದಾನೆ.. ಕೀರ್ತಿ ಗೆಳೆಯನೇ ಅಲ್ವಾ ಅಂತ ಹೋಗಿದ್ದಾನೆ.. ಒಟ್ಟಿಗೆ ಪಾರ್ಟಿ ಮಾಡಿದ್ದಾನೆ.. ಆದ್ರೆ ಕಂಠ ಪೂರ್ತಿ ಕುಡಿದ ಉಲ್ಲಾಸ್​​, ಅವನನ್ನ ಕೆಳಗೆ ಬೀಳಿಸಿ ಪಕ್ಕದಲ್ಲೇ ಇದ್ದ ಕಲ್ಲನ್ನ ಎತ್ತಿಹಾಕಿದ್ದಾನೆ. ಕೊಲೆ ಮಾಡೋದಕ್ಕೆ ಇದೂ ಒಂದು ಕಾರಣನಾ..? ಅದೂ ಕೂಡ ಪ್ರಾಣದ ಸ್ನೇಹಿತನನ್ನ.. ಇದಕ್ಕೇ ಅಲ್ವಾ ಹೆಳೋದು.. ಸ್ನೇಹ ಮಾಡುವಾಗಲೂ ಹಿಂದೆ ಮುಂದೆ ಯೋಚಿಸಿ ಮಾಡಬೇಕು.

23:12ಬೀದಿಗೆ ಬಂತು ಕನ್ನಡದ ಮತ್ತೊಬ್ಬ ಸೀರಿಯಲ್ ನಟಿಯ ಕುಟುಂಬ; ಮದುವೆಗೂ ಮುನ್ನವೇ ಬಳಸಿಕೊಂಡಿದ್ದ ಸುರೇಶ!
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
Read more