Nov 18, 2021, 11:47 AM IST
ಬೆಂಗಳೂರು (ನ.18): ಮತ್ತೆ ಬೆಂಗಳೂರಿನಲ್ಲಿ (Bengaluru) ಉಗ್ರರ ಭೀತಿ ಕಾಡುತ್ತಿದೆ. ಯುವಕರನ್ನು ಐಸಿಸ್‌ಗೆ (ISIS ಕಳುಹಿಸುತ್ತಿದ್ದ ಕುರಾನ್ ಸರ್ಕಲ್ ಗ್ಯಾಂಗ್‌ನ ಮತ್ತೊಬ್ಬ ಶಂಕಿತ ಉಗ್ರನನ್ನು ರಾಷ್ಟ್ರೀಯ ತನಿಖಾ ದಳದ ಎನ್‌ಐಎ ಅಧಿಕಾರಿಗಳು ಬಂಧಿಸಿದ್ದಾರೆ.
ಬೋಕೋ ಹರಾಂ, ಐಸಿಸ್ ಜತೆ ಹಿಂದುತ್ವ ಹೋಲಿಕೆ ಮಾಡಿದ ಕಾಂಗ್ರೆಸ್ಸಿಗ ಖುರ್ಷಿದ್!
ಬೆಂಗಳೂರಿನ ಸಾಫ್ಟ್‌ವೇರ್ ಎಂಜಿನಿಯರ್ ಜುಹೇಬ್ ಮುನ್ನಾನನ್ನು ಬಂಧಿಸಲಾಗಿದೆ. ಈತ ಮೂಲತಃ ಬೆಂಗಳೂರು ನಿವಾಸಿಯಾಗಿದ್ದು, ನಗರದ ಸಾಫ್ಟವೇರ್ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದ ಎಂಬ ಮಾಹಿತಿ ಇದೆ. ವಾಟ್ಸಾಪ್ ಗ್ರೂಪ್ ಮೂಲಕ ಯುವಕರನ್ನು ಸೆಳೆಯುತ್ತಿದ್ದು ಇಲ್ಲಿಂದ ಯುವಕರನ್ನು ಉಗ್ರ ಸಂಘಟನೆಗೆ ಕಳುಹಿಸುತ್ತಿದ್ದ. ಈತ ಸಕ್ರಿಯವಾಗಿದ್ದ ಕುರಾನ್ ಸರ್ಕಲ್‌ನ ಸದಸ್ಯನಾಗಿದ್ದ ಹಾಗೂ ಈ ಹಿಂದೆ ಪೊಲೀಸರ ಬಲೆಗೆ ಬಿದ್ದಿದ್ದ ದಂತ ವೈದ್ಯ ಡಾ.ತೌಕೀರ್ ಮೆಹಮೂದ್ ವಿಚಾರಣೆ ವೇಳೆ ನೀಡಿದ ಮಾಹಿತಿ. ಐಸಿಸ್ ಸಂಘಟನೆಗೆ ಯುವಕರ ನೇಮಕ ಮತ್ತು ದೇಣಿಗೆ ಸಂಗ್ರಹ ಸಂಬಂಧ ಎನ್‌ಐಎ ಅಧಿಕಾರಿಗಳು 2020ರ ಸೆಪ್ಟೆಂಬರ್‌ಲ್ಲಿ ಕಾರ್ಯಾಚರಣೆ ನಡೆಸಿ ಫ್ರೇಜರ್ ಟೌನ್‌ನ ಅಕ್ಕಿ ವ್ಯಾಪಾರಿ ಇರ್ಫಾನ್ ನಾಸೀರ್ ಮತ್ತು ತಮಿಳುನಾಡಿನ ಬ್ಯಾಂಕ್ ನೌಕರ ಅಹಮ್ಮದ್ ಅಬ್ದುಲ್ ಖಾದರ್, ದಂತ ವೈದ್ಯ ಡಾ.ಮಹಮ್ಮದ್ ತೌಕೀರ್ ಮೆಹಬೂಬ್ ಎಂಬುವರನ್ನು ಬಂಧಿಸಿದ್ದರು.