Jun 30, 2023, 9:09 AM IST
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬಾಡಿಗೆ ಕೊಡುವ ಮುನ್ನ ಮನೆ ಮಾಲೀಕರು ಸ್ವಲ್ಪ ಎಚ್ಚರಿಕೆಯಿಂದ ಇರಿ. ಹೌದು, ಯಾಕೆಂದರೆ ಇಲ್ಲೊಂದು ಜೋಡಿ ನಾಲ್ಕು ತಿಂಗಳು ಬಾಡಿಗೆ ಮನೆಯಲ್ಲಿ ಇದ್ದು, ಬಳಿಕ ಆ ಮನೆಯಲ್ಲೇ ಕಳ್ಳತನ ಮಾಡಿದೆ. ಲಿವಿಂಗ್ ಟುಗೆದರ್‌ನಲ್ಲಿದ್ದ ಸುಮಂತ್ ಮತ್ತು ಲಿಖಿತಾ, ಪ್ರೇಮಲತಾ ಎಂಬುವವರ ಮನೆಯಲ್ಲಿ ಬಾಡಿಗೆಗೆ ಇದ್ದರು. ನಾಲ್ಕು ತಿಂಗಳ ನಂತರ ಮನೆಯನ್ನು ಕಾಲಿ ಮಾಡಿ, ಕೆಲವೇ ದಿನಗಳ ಬಳಿಕ ದರೋಡೆ ಮಾಡಿದ್ದಾರೆ. ಈ ಘಟನೆ ಬೆಂಗಳೂರಿನ ಎಜಿಎಸ್ ಲೇಔಟ್‌ನಲ್ಲಿ ನಡೆದಿದೆ. ಕಳ್ಳತನ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ವೇಳೆ ಆರೋಪಿಗಳು ಇದೇ ರೀತಿ ಮತ್ತೊಂದು ಮನೆಯಲ್ಲಿ ಕಳ್ಳತನ ಮಾಡಲು ಪ್ಲ್ಯಾನ್ ಮಾಡಿದ್ದರು ಎಂದು ತಿಳಿದುಬಂದಿದೆ.
ಇದನ್ನೂ ವೀಕ್ಷಿಸಿ: Today Horoscope: ಇಂದು ಎರಡನೇ ಆಷಾಢ ಶುಕ್ರವಾರ, ಒಳಿತಿಗಾಗಿ ಲಕ್ಷ್ಮೀ ಆರಾಧನೆ ಮಾಡಿ..