ಮುತ್ತಪ್ಪ ರೈ ಸ್ಕೆಚ್.. ಜೈರಾಜ್‌ಗೆ ಮಚ್ಚು ಬೀಸಿದ ಚಕ್ರೆ!

ಮುತ್ತಪ್ಪ ರೈ ಸ್ಕೆಚ್.. ಜೈರಾಜ್‌ಗೆ ಮಚ್ಚು ಬೀಸಿದ ಚಕ್ರೆ!

Published : Sep 29, 2022, 06:52 PM IST

ಡಾನ್ ಜೈರಾಜನ ತಾಕತ್ತೇನು ಅನ್ನೋದನ್ನ ಸರಿಯಾಗಿ ತಿಳಿದುಕೊಳ್ಳದೇ ಆತನನ್ನ ಕೊಲ್ಲೋ ಮಾತನ್ನಾಡಿಬಿಟ್ಟಿದ್ರು ಮುತ್ತಪ್ಪ ರೈ. ಮುತ್ತಪ್ಪ ರೈ ಸ್ಕೆಚ್‌ನಂತೆ ನಟೋರಿಯಸ್‌ ಡಾನ್‌, ಜೈರಾಜ್‌ಗೆ ಕ್ರಿಸ್ಟೋಫರ್‌ ಚಕ್ರವರ್ತಿ ಅಲಿಯಾಸ್‌ ಚಕ್ರೆ ಮಚ್ಚು ಬೀಸಿದ್ದ
 

ಬೆಂಗಳೂರು (ಸೆ.29): 80ರ ದಶಕದ ಕೊನೆಯ ಎರಡ್ಮೂರು ವರ್ಷ ಬೆಂಗಳೂರು ಭೂಗತ ಲೋಕದ ಗಲ್ಲಿಗಳಲ್ಲಿ ಅತೀ ದೊಡ್ಡ ರಕ್ತಪಾತಕ್ಕೆ ಸಾಕ್ಷಿಯಾದ ವರ್ಷ. ಅತೀ ಹೆಚ್ಚು ಗ್ಯಾಂಗ್ ವಾರ್‌ಗಳು ಶುರುವಾಗಿದ್ದು ಆವಾಗಲೇ. ಆದರೆ ಅದು ಶುರುವಾಗಿದ್ದು, ಕಾಟನ್‌ಪೇಟೆ ಪುಷ್ಪಾ ಮತ್ತು ರಾಜೇಂದ್ರ ಜೈರಾಜನ ವಿರುದ್ಧ ತೊಡೆ ತಟ್ಟಿದ ದಿನದಿಂದ. ಇತ್ತ ಪುಷ್ಪನ ಟೀಂನಲ್ಲಿ ರಾಜೇಂದ್ರ, ಕಿಟ್ಟಿ, ಚಕ್ರೆ ಬಿಟ್ರೆ ಬೆಳರಳೆಣಿಕೆಯಷ್ಟು ಮಂದಿ ಮಾತ್ರ ಇದ್ದರೆ, ಜೈರಾಜ್ ಹಿಂದೆ ಟಫ್ ಫೈಟರ್‌ಗಳ ದಂಡೇ ಇತ್ತು. 

ಇನ್ನೂ ಯಾವಾಗ ಜೈರಾಜ್ ಶಿಷ್ಯ ಬಲರಾಮನ ಮೇಲೆ ಚಕ್ರೆ ಮತ್ತು ಆತನ ಸ್ನೇಹಿತರು ಅಟ್ಯಾಕ್ ಮಾಡಿದ್ರೋ, ಜೈರಾಜ್ ಅದರ ರಿವೇಂಜ್‌ಗೆ ನಿಂತುಬಿಟ್ಟ. ಜೇಡರಹಳ್ಳಿ ಕೃಷ್ಣಪ್ಪ ಸೀನ್‌ಗೆ ಎಂಟ್ರಿಯಾಗ್ತಾನೆ. ಇತ್ತ ಜೈರಾಜ್ ಸ್ಕೆಚ್ ಕೇಳಿ ದಂಗಾದ ಪುಷ್ಪಾ ಆ್ಯಂಡ್ ಗ್ಯಾಂಗ್ ಹೋಗಿದ್ದು ಭವಿಷ್ಯದ ಡಾನ್ ಮುತ್ತಪ್ಪ ರೈ ಬಳಿಗೆ. 

ಡಾನ್‌ ಆಗಿ ಮೆರೆದ್ರೂ, ವಿಧಿಯಾಟಕ್ಕೆ ಶರಣಾದ ಬೆಂಗಳೂರು ಭೂಗತ ಲೋಕದ ಚಕ್ರೆ!

ಪುತ್ತೂರಿನ ತೋಟದ ಮನೆಯಲ್ಲಿ ಕೂತು ಮುತ್ತಪ್ಪ ರೈ, ರಾಜೆಂದ್ರ ಮತ್ತು ಪಷ್ಪನಿಗೆ ಇದೊಂದು ಪ್ರಶ್ನೆ ಹಾಕಿದ್ರು. ತಿಗಳರ ಪೇಟೆ ಗಲ್ಲಿಗಳಲ್ಲಿ ಗೋಪಿ ಜೈರಾಜ್ನನ್ನ ತಡವಿಕೊಂಡಿದ್ದೇ ಕೊನೆ ಆನಂತರ ಆತನನ್ನ ಮುಟ್ಟೋ ಧೈರ್ಯ ಯಾರಂದ್ರೆ ಯಾರೂ ಮಾಡಿರಲಿಲ್ಲ. ಈಗ ಒಬ್ಬ ಮುತ್ತಪ್ಪ ರೈ ಬೆಂಬಲಕ್ಕಿದ್ದಾರೆ ಅನ್ನೋ ಒಂದೇ ಒಂದು ಕಾರಣಕ್ಕೆ ಪುಷ್ಪಾ ಟೀಮ್‌ ಎದ್ದು ನಿಂತಿತ್ತು.  ಮಚ್ಚುಗಳು, ಲಾಂಗ್‌ಗಳು, ಬಾಂಬ್,‌ ಪಿಸ್ತೂಲ್‌ಗಳು, ಒಬ್ಬ ನಿರಾಯುಧನನ್ನ ಕೊಲ್ಲೋದಕ್ಕೆ 20 ಜನ ಶಸ್ತ್ರ ಸಜ್ಜಿತ ಹುಡುಗರು, ಅಷ್ಟೆಲ್ಲಾ ಇದ್ದವರು ಡಾನ್ ಜೈರಾಜ್‌ನನ್ನು ಹೊಡೆದು ಮುಗಿಸಲು ಸಾಧ್ಯವಾಗಲಿಲ್ಲ.

04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
25:33ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!
26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ