ಅಪ್ಪನ ₹30 ಲಕ್ಷ ಇನ್ಸೂರೆನ್ಸ್​​​​ ಹಣಕ್ಕಾಗಿ ಮಗ ಮಾಡಿದ್ದು ಆಕ್ಸಿಡೆಂಟ್ ಪ್ಲಾನ್!

ಅಪ್ಪನ ₹30 ಲಕ್ಷ ಇನ್ಸೂರೆನ್ಸ್​​​​ ಹಣಕ್ಕಾಗಿ ಮಗ ಮಾಡಿದ್ದು ಆಕ್ಸಿಡೆಂಟ್ ಪ್ಲಾನ್!

Published : Dec 31, 2024, 11:17 PM IST

ಟ್ಯಾಂಕ್​ ರಿಪೇರಿಗೆಂದು ಹೋದ ವೃದ್ಧ ಆ್ಯಕ್ಸಿಡೆಂಟ್​​ನಲ್ಲಿ ಸಾವನ್ನಪ್ಪಿದ್ದ. ಆದರೆ, ತನಿಖೆ ನಡೆಸಿದಾಗ ಅದು ಆ್ಯಕ್ಸಿಡೆಂಟ್​​ ಅಲ್ಲ, ಮರ್ಡರ್​​ ಅನ್ನೋದು ಬೆಳಕಿಗೆ ಬಂದಿತ್ತು. ಹಣಕ್ಕಾಗಿ ತಂದೆಯನ್ನೇ ಕೊಂದ ಮಗನ ಪಾಪದ ಕಥೆ ಇದು.

ಅವನು ಸ್ಟವ್​​ ರಿಪೇರಿ ಹಾಗೂ ಪ್ಲಾಸ್ಟಿಕ್​ ರಿಪೇರಿ ಮಾಡುವವನು. ಮೊದಲ ಹೆಂಡತಿ ಸತ್ತ ಮೇಲೆ 2ನೇ ಮದುವೆಯಾಗಿದ್ದ. ಎರಡನೇ ಹೆಂಡತಿ ಮಕ್ಕಳೊಂದಿಗೆ ದೂರದ ಊರಿನಲ್ಲಿದ್ದರೆ ಈತ ಮಾತ್ರ ಮೊದಲ ಹೆಂಡತಿಯ ಮಕ್ಕಳೊಂದಿಗೆ ವಾಸ ಮಾಡುತ್ತಿದ್ದನು. ಅದರೆ, ಆವತ್ತೊಂದು ದಿನ ಟ್ಯಾಂಕ್​​ ರಿಪೇರಿ ಇದೆ ಅಂತ ಹೋದವನು ಮಾರ್ಗ ಮಧ್ಯೆಯೇ ಆ್ಯಕ್ಸಿಡೆಂಟ್​​ ಆಗಿ ಮೃತಪಟ್ಟಿದ್ದನು.

ಪೊಲೀಸರೂ ಕೂಡ ಮೊದಲಿಗೆ ಆ್ಯಕ್ಸಿಡೆಂಟ್​​ ಕೇಸ್​ ದಾಕಲಿಸಿಕೊಂಡಿದ್ದರು. ಆದರೆ, ಕೊಂಚ ಯೋಚಿಸಿದಾಗ ಅದು ಅಪಘಾತವಲ್ಲ ಬದಲಿಗೆ ಮರ್ಡರ್​​ ಅನ್ನೋದು ಗೊತ್ತಾಗಿತ್ತು. ಹಾಗಾದರೆ ಆ ವೃದ್ಧನನ್ನ ಕೊಂದಿದ್ಯಾರು..? ಅವನನ್ನ ಕೊಂದು ಆ್ಯಕ್ಸಿಡೆಂಟ್​​​ನಂತೆ ಬಿಂಬಿಸೋದಕ್ಕೆ ಕಾರಣವೇನು..? ಒಬ್ಬ ಅಮಾಯಕನ ಬರ್ಬರ ಕೊಲೆ ಮತ್ತು ಪೊಲೀಸರ ರೋಚಕ ಇನ್ವೆಸ್ಟಿಗೇಷನ್​​ ಕಥೆಯೇ ಇವತ್ತಿನ ಎಫ್​​.ಐ.ಆರ್​​​​​..

ಮನೆಯಲ್ಲಿ ಟ್ಯಾಂಕ್​ ರಿಪೇರಿ ಕೆಲಸ ಇದೆ ಅಂತ ಕಳಿಸಿದ್ದ ಮಗನೇ ಅಪ್ಪನ ಹೆಣ ಹಾಕಿದ್ದ. ಅಷ್ಟೇ ಅಲ್ಲ ತಂದೆಯ ಹೆಣದ ಮುಂದೆ ನಿಂತು ಕಣ್ಣೀರು ಹಾಕಿದ್ದನು. ಎಲ್ಲ ಮಕ್ಕಳಂತೆ ಆತ ಕೂಡ ತಂದೆಯನ್ನ ಪ್ರೀತಿಯಿಂದ ನೋಡಿಕೊಳ್ತಿದ್ದ. ಅದೇ ಪ್ರೀತಿಯಲ್ಲಿ ತಂದೆಗೆ ಒಂದು ಇನ್ಶುರೆನ್ಸ್​​​ ಮಾಡಿಸಿದ್ದನು. ಆದ್ರೆ ಇತ್ತಿಚೆಗೆ ಆತ ತುಂಬಾನೇ ಸಾಲ ಮಾಡಿಕೊಂಡುಬಿಟ್ಟಿದ್ದ. ಸಾಲಗಾರರ ಕಾಟ ಹೆಚ್ಚಾಯ್ತು. ಏನಪ್ಪ ಮಾಡೋದು ಅಂತ ಯೋಚಿಸುತ್ತಿರುವಾಗ್ಲೇ ಅವನ ನೆನಪಿಗೆ ಬಂದಿದ್ದು ತಾನೇ ಮಾಡಿಸಿದ್ದ ಇನ್ಶುರೆನ್ಸ್​​​.

ತಂದೆ ಸತ್ತರೆ ಅವರ ಹೆಸರಿಗೆ ಮಾಡಿಸಿದ್ದ 12 ಲಕ್ಷ ರೂ. ಬರುತ್ತದೆ. ಒಂದು ವೇಳೆ ಅಪಘಾತದಲ್ಲಿ ಸತ್ತರೆ 30 ಲಕ್ಷ ರೂ. ಬರುತ್ತದೆ ಎಂಬುದನ್ನು ತಿಳಿದ ಮಗ ತಂದೆಯನ್ನೇ ಮುಗಿಸಲು ತೀರ್ಮಾನಿಸಿದ್ದಾನೆ. ಅದರಂತೆ ಪಕ್ಕ ಪ್ಲಾನ್​ ಮಾಡಿ ಆ್ಯಕ್ಸಿಡೆಂಟ್​​ ಆಗಿರುವಂತೆ ಬಿಂಬಿಸಿದ್ದಾನೆ. ಆದರೆ, ಅವನ ಬ್ಯಾಡ್​​ ಟೈಂ ತಂದೆಯ ಚಿತೆಗೆ ಬೆಂಕಿ ಇಡುವ ಮುನ್ನವೇ ಅವನು ಲಾಕ್​​ ಆಗಿದ್ದನು. ಕೇವಲ ಹಣಕ್ಕಾಗಿ ತನ್ನ ತಂದೆಯನ್ನೇ ಕೊಂದ ಮಗ ಇವತ್ತು ಜೈಲು ಸೇರಿದ್ದಾನೆ. ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಿಯೇ ತೀರುತ್ತಾನೆ.. ಆದರೆ ಇಂಥ ಕೆಟ್ಟ ಮಕ್ಕಳಿಂದ ಸಮಾಜಕ್ಕೆ ಕೆಟ್ಟ ಸಂದೇಶಗಳು ಹೋಗುತ್ತವೆ.

24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?