May 31, 2024, 4:13 PM IST
ಪೆನ್‌ಡ್ರೈವ್ (pen drive) ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣರನ್ನು (Prajwal Revanna) ಎಸ್‌ಐಟಿ (SIT)ಕೋರ್ಟ್‌ಗೆ ಹಾಜರುಪಡಿಸಲಾಗಿದೆ. ಇದಕ್ಕೂ ಮೊದಲು ಮೆಡಿಕಲ್ ಟೆಸ್ಟ್ ಮಾಡಿಸಲಾಗಿದೆ. ಬಳಿಕ ಸೆಷನ್ಸ್ ಕೋರ್ಟ್‌ಗೆ ಹಾಜರುಪಡಿಸಲಾಗಿದೆ. ಇನ್ನು ಹೆಚ್ಚಿನ ವಿಚಾರಣೆಗೆ ಪ್ರಜ್ವಲ್‌ರನ್ನು ತಮ್ಮ ವಶಕ್ಕೆ ನೀಡಬೇಕು ಎಂದು ಎಸ್‌ಐಟಿ ಕೇಳಲಿದೆ. ಇದಾದ ನಂತರದಲ್ಲಿ ರೇಪ್ ಕೇಸ್ನಲ್ಲಿ ಪ್ರಜ್ವಲ್ ಎಸ್‌ಐಟಿ ವಿಚಾರಣೆ ನಡೆಸಲು ಎಲ್ಲಾ ತಯಾರಿ ಮಾಡೊಕೊಂಡಿದೆ ಎಂದು ತಿಳಿದುಬಂದಿದೆ. ಹಾಗೆಯೇ ಇವರಿಗೆ ಬೌರಿಂಗ್ ಆಸ್ಪತ್ರೆಯಲ್ಲಿ (Bowring Hospital) ಮೆಡಿಕಲ್ ಟೆಸ್ಟ್ ಮಾಡಿಸಲಾಗಿದೆ. 5 ವೈದ್ಯರ ತಂಡದಿಂದ ವೈದ್ಯಕೀಯ ಪರೀಕ್ಷೆ ಮಾಡಲಾಗಿದ್ದು, ಬಿಪಿ, ಶುಗರ್, ಬ್ಲಡ್, ಇಸಿಜಿ, ಯೂರಿನ್ ಟೆಸ್ಟ್ ಅನ್ನು ಪ್ರತ್ಯೇಕ ರೂಮ್ನಲ್ಲಿ ಮಾಡಲಾಗಿದೆ.
ಇದನ್ನೂ ವೀಕ್ಷಿಸಿ: ಎಚ್.ಡಿ.ರೇವಣ್ಣಗೆ ಸದ್ಯಕ್ಕಿಲ್ಲ ರಿಲೀಫ್! ಎರಡೂ ಅರ್ಜಿ ಒಟ್ಟಿಗೆ ವಿಚಾರಣೆ ಮಾಡಲು ಕೋರ್ಟ್ ಒಪ್ಪಿಗೆ