Sep 5, 2020, 6:43 PM IST
ಬೆಂಗಳೂರು(ಸೆ. 05) ಡ್ರಗ್ಸ್ ಜಾಲಕ್ಕೆ ಸಂಬಂಧಿಸಿ ಮಾತನಾಡುವ ವೇಳೆ ಗೊತ್ತಿಲ್ಲದೆ ಚಿರಂಜೀವಿ ಸರ್ಜಾ ಹೆಸರು ಉಲ್ಲೇಖವಾಗಿದ್ದರೆ ಅದಕ್ಕೆ ನಾನು ಕ್ಷಮೆ ಕೋರುತ್ತೇನೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.
ಮೇಘನಾ ಒಂದು ಪತ್ರ ಬರೆದಿದ್ದಾರೆ. ಅದರಲ್ಲಿ ತುಂಬಾ ನೋವುಂಟಾಗಿದೆ ಅಂದಿದ್ದಾರೆ. ಪ್ರಮಿಳಾ ಜೋಷಾಯಿ ಮತ್ತು ಸುಂದರ್ ರಾಜ್ ನನ್ನ ಮಗುವಿನಂತೆ ಆಡಿಸಿದ್ದಾರೆ ಚಿರು ಸತ್ತಾಗ ನನಗೆ ನೋವಾಯ್ತು ನನಗೆ ಸಂಶಯ ಬಂತು. ಏನೇ ಇದ್ದರೂ ನಾನು ವಾಣಿಜ್ಯ ಮಂಡಳಿ ಮುಂದೆ ಕ್ಷಮೆ ಕೇಳುತ್ತೇನೆ ಎಂದು ಲಂಕೇಶ್ ಹೇಳಿದ್ದಾರೆ.