Feb 7, 2020, 5:03 PM IST
ಶಿವಮೊಗ್ಗ(ಫೆ. 07) ನಟೋರಿಯಸ್ ರೌಡಿ ಹಂದಿ ಅಣ್ಣಿ ಸಹೋದರ ರೌಡಿ ಗಿರೀಶ್ ನನ್ನು ಶಿವಮೊಗ್ಗದಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಹತ್ಯೆಯ ಘೋರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮಚ್ಚಿನೇಟಿನಿಂದ ಗಾಯಗೊಂಡಿದ್ದ ಗಿರೀಶ್ ಮಧ್ಯ ರಸ್ತೆಯಲ್ಲೇ ಬಿದ್ದು ಹೊರಳಾಡುತ್ತಾರೆ. ಸಹಾಯಕ್ಕಾಗಿ ಅಂಗಲಾಚುತ್ತಾರೆ. ಈ ಘೋರ ದೃಶ್ಯದ ವಿಡಿಯೋ ಲಭ್ಯವಾಗಿದ್ದು ಎಂಥವರನ್ನು ಭಯ ಬೀಳಿಸುತ್ತದೆ.
ಕಾಂಡೋಮ್ ಬಳಸಲ್ಲ ಎಂದಿದ್ದಕ್ಕೆ ಸೆಕ್ಸ್ ನಿರಾಕರಿಸಿದ್ಲು; ಕೊಂದೆ ಬಿಟ್ಟ ಪಾಪಿ
ಶಿವಮೊಗ್ಗದ ಅನುಪಿನ ಕಟ್ಟೆ ಬಡಾವಣೆಯ ಸಿದ್ದೇಶ್ವರ ಸರ್ಕಲ್ ಬಳಿ ಮಾರಾಕಾಸ್ತ್ರ ದಿಂದ ಅಜ್ರು ಗ್ಯಾಂಗ್ ಕೊಲೆ ಮಾಡಿ ಪರಾರಿಯಾಗಿದೆ ಎನ್ನಲಾಗಿದೆ. ಅನುಪಿನ ಕಟ್ಟೆಯ ಮಂದಾರ ಶಾಲೆಯ ಹಿಂಭಾಗ ತೂರ ಬಿಲ್ಲೆ ಗ್ಯಾಂಬ್ಲಿಂಗ್ ನಡೆಸಲಾಗಿತ್ತು. ಈ ಗ್ಯಾಂಬ್ಲಿಂಗ್ ಆಟದಲ್ಲಿ ಹಣ ಹಾಕಿದ್ದ ರೌಡಿ ದೊರೈ ಹಾಗೂ ಗ್ಯಾಂಬ್ಲರ್ ಅಜ್ರು ನಡುವೆ ಆಟದ ಸಂಬಂಧ ಮಾತಿನ ಚಕಮಕಿ ನಡೆದಿತ್ತು.