ಡೆಡ್ಲಿ ಗುಂಡಿನ ಸದ್ದಿಗೆ ಬೆಚ್ಚಿಬಿದ್ದಿದ್ದ ಗುಮ್ಮಟನಗರಿ: ಸಿನಿಮಿಯ ರೀತಿಯಲ್ಲಿ ಗುಂಡು ಹಾರಿಸಿ ಕೊಂದೇ ಬಿಟ್ಟರು..!

May 25, 2023, 8:27 PM IST

ವಿಜಯಪುರ(ಮೇ.25): ಅದು ವಿಧಾನಸಭಾ ಚುನಾವಣೆ ಕಾವು ಪಡೆದುಕೊಂಡಿದ್ದ ಸಮಯ. ಎಲೆಕ್ಷನ್‌ ನಲ್ಲಿ ಯಾವುದೆ ಗಲಾಟೆ, ಗದ್ದಲಗಳು ನಡೆಯದಂತೆ ಪೊಲೀಸ್‌ ಇಲಾಖೆ ಕಟ್ಟುನಿಟ್ಟಿನ ಕ್ರಮಗಳನ್ನ ತೆಗೆದುಕೊಂಡಿರತ್ತೆ. ಹಾಗೆ ಹಂತಕರಿಂದಲೇ ಕುಖ್ಯಾತಿ ಪಡೆದ ವಿಜಯಪುರ ಜಿಲ್ಲೆಯಲ್ಲೂ ಖಾಕಿ ಹೈ ಅಲರ್ಟ್‌ ಆಗಿತ್ತು. ಆದ್ರೆ ಅದೇನೋ ಗೊತ್ತಿಲ್ಲ. ಇದ್ದಕ್ಕಿದ್ದಂತೆ ಡೆಡ್ಲಿ ಗುಂಡಿನ ದಾಳಿ ನಡೆದು, ಕುಖ್ಯಾತ ರೌಡಿಯ ಹೆಣ ಬಿದ್ದಿತ್ತು. ಎಲೆಕ್ಷನ್‌ ಸಮಯದಲ್ಲಿ ನಡೆದ ಈ ಘಟನೆ ವಿಜಯಪುರ ಜನರನ್ನ ಅಷ್ಟೆ ಅಲ್ಲದೆ ಪೊಲೀಸರನ್ನು ಒಂದು ಕ್ಷಣ ಬೆಚ್ಚಿ ಬೀಳುವ ಹಾಗೇ ಮಾಡಿತ್ತು. ಈ ಡೆಡ್ಲಿ ಶೂಟೌಟ್‌ ಹಿಂದಿನ ಅಸಲಿ ಕಹಾನಿಯೇ ಇವತ್ತಿನ ಎಫ್‌ ಐ ಆರ್

ನೋಡಿದ್ರಲ್ಲ, ಒಂದು ಚುನಾವಣೆ, ರಾಜಕೀಯದ ದ್ವೇಷದಿಂದ ಅದ್‌ ಹೇಗೆ ಹೆಣ ಉರುಳಿದೆ ಅಂತಾ. ಹಾಗಂತ ಏಲೆಕ್ಷನ್‌ ಗಾಗಿಯೇ ಅಂತಾ ಹೆಣ ಬಿದ್ದಿದ್ದು, ಶೂಟೌಟ್‌ ನಡೆದಿದ್ದು ಇದೆ ಮೊದಲೇನಲ್ಲ. ಈ ಹಿಂದೆಯು ಚುನಾವಣೆ ಸಮಯದಲ್ಲೆ ಭಯಾನಕ ಗುಂಡಿನ ದಾಳಿಗಳು ನಡೆದಿವೆ. 

Bengaluru- ಜೀರೋ ರೌಡಿಸಂ, ಡ್ರಗ್ಸ್‌ ಮುಕ್ತ ಬೆಂಗಳೂರು ನಮ್ಮ ಗುರಿ: ಡಿಜಿ-ಐಜಿಪಿ ಅಲೋಕ್ ಮೋಹನ್

ಭೀಮಾತೀರದ ಹಂತಕರ ಕುಖ್ಯಾತಿ ವಿಜಯಪುರ ಜಿಲ್ಲೆಯಲ್ಲಿ ಈ ಶೂಟೌಟ್‌, ಹತ್ಯಾಕಾಂಡಗಳಿಗು ಎಲೆಕ್ಷನ್‌ಗು ಏನೋ ವಿಚಿತ್ರ ಕನೆಕ್ಷನ್‌ ಇದೆ. ಪ್ರತಿ ಬಾರಿಯು ಚುನಾವಣೆಯಲ್ಲಿ ಒಂದಿಲ್ಲೊಂದು ಕಡೆ ಹೆಣಗಳು ಬಿದ್ದೆ ಬೀಳುತ್ವೆ. ಅದ್ರಲ್ಲು ಚುನಾವಣೆ ಹಿನ್ನೆಲೆ ಶುರುವಾಗುವ ಗಲಾಟೆಗಳು ಅದೇಷ್ಟೊ ಹತ್ಯಾಕಾಂಡಗಳಿಗೆ ಕಾರಣವಾಗಿದೆ. 

ಭೀಮಾತೀರದಲ್ಲಷ್ಟೆ ಅಲ್ಲ, ವಿಜಯಪುರ ನಗರದಲ್ಲಿ ನಡೆದ ಹತ್ಯಾಕಾಂಡಗಳಿಗೇನು ಕಡಿಮೆ ಇಲ್ಲ. ಒಂದು ಚುನಾವಣಾ ಪ್ರತಿಷ್ಟೆ, ರಾಜಕೀಯ ಗಲಾಟೆಗಳು ಹೇಗೆಲ್ಲ ಹೆಣಗಳನ್ನ ಕೆಡವಿ ಬಿಡುತ್ವೆ ಅನ್ನೋದಕ್ಕೆ ಇದೆ ಹೈದರ್‌, ಫಯಾಜ್‌, ಶಾಬಿರ್‌ ಪಟೇಲ್‌ ಹತ್ಯೆಗಳೇ ಸಾಕ್ಷಿಯಾಗಿವೆ ಅಂತ ಹೇಳ್ತಾ ಇವತ್ತಿನ ಎಫ್.ಐ.ಆರ್ ಮುಗಿಸುತ್ತಿದ್ದೇನೆ.