ಎಲ್ರೋ ಆ ಮಚ್ಚು..? ರಜತ್​-ವಿನಯ್​ಗೆ ಖಾಕಿ ಡ್ರಿಲ್! ಮಚ್ಚೇಶ್ವರ ಏನಾದ..? ಪ್ರಶ್ನೆಗೆ ಬ್ಯಾಡ್​ ಬಾಯ್ಸ್ ತಬ್ಬಿಬ್ಬು!

ಎಲ್ರೋ ಆ ಮಚ್ಚು..? ರಜತ್​-ವಿನಯ್​ಗೆ ಖಾಕಿ ಡ್ರಿಲ್! ಮಚ್ಚೇಶ್ವರ ಏನಾದ..? ಪ್ರಶ್ನೆಗೆ ಬ್ಯಾಡ್​ ಬಾಯ್ಸ್ ತಬ್ಬಿಬ್ಬು!

Published : Mar 28, 2025, 10:31 AM ISTUpdated : Mar 28, 2025, 10:41 AM IST

ತಮ್ಮದು ಸಣ್ಣ ಅಪರಾಧ.. ಕೋರ್ಟ್​ ತಮಗೆ ಬೇಲ್ ಕೊಡುತ್ತೆ ಅಂದುಕೊಂಡಿದ್ದ ವಿನಯ್ ಅಂಡ್ ರಜತ್​ಗೆ ಶಾಕ್ ಕೊಟ್ಟಿರೋ ಕೋರ್ಟ್  ಇಬ್ಬರನ್ನೂ ಮತ್ತೆ ಮೂರು ದಿನಗಳ ಕಾಲ ಖಾಕಿ ವಶಕ್ಕೆ ನೀಡಿದೆ.

ಮಚ್ಚು ಝಳಪಿಸಿ ಹುಚ್ಚು ಹುಚ್ಚಾಗಿ ರೀಲ್ಸ್ ಮಾಡಿದ್ದ ಬಿಗ್ ಬಾಸ್ ಮನೆಯ ಬ್ಯಾಡ್ ಬಾಯ್ಸ್​​ನ ಮತ್ತೆ ಮೂರು ದಿನ ಖಾಕಿ ವಶಕ್ಕೆ ನೀಡಲಾಗಿದೆ. ಅಷ್ಟಕ್ಕೂ ರಜತ್ ಅಂಡ್ ವಿನಯ್​ ನ ಮೂರು ಮೂರು ದಿನ ಪೊಲೀಸರು ನೂರಾರು ಪ್ರಶ್ನೆ ಕೇಳ್ತಾ ಇಲ್ಲ. ಇವ್ರನ್ನ ಕೇಳ್ತಿರೋದು ಒಂದೇ ಪ್ರಶ್ನೆ ‘ಎಲ್ರೋ ಆ ಮಚ್ಚು ಅಂತ..’ ಹಾಗಾದ್ರೆ ಆ ಮಚ್ಚೇಶ್ವರ ಏನಾದ..? ಆ ಕುರಿತ ರೋಚಕ ಸ್ಟೋರಿ ಇಲ್ಲಿದೆ ನೋಡಿ. ಬಿಗ್ ಬಾಸ್ ಮನೆಯ ಬ್ಯಾಡ್​ ಬಾಯ್ಸ್​​ ಪರದಾಟದ ಕಥೆ ಮುಗಿಯೋ ಹಾಗೆ ಕಾಣ್ತಾ ಇಲ್ಲ. ಮಂಗಳವಾರ ಇವರನ್ನ ಎರಡನೇ ಬಾರಿ ಅರೆಸ್ಟ್ ಮಾಡಿದ್ದ ಪೊಲೀಸರು ಪರಪ್ಪನ ಅಗ್ರಹಾರಕ್ಕೆ ಬಿಟ್ಟು ಬಂದಿದ್ರು. ಬುಧವಾರ ಕೋರ್ಟ್ ಎದುರು ಹಾಜರು ಪಡಿಸಿದ್ರು. 

ತಮ್ಮದು ಸಣ್ಣ ಅಪರಾಧ.. ಕೋರ್ಟ್​ ತಮಗೆ ಬೇಲ್ ಕೊಡುತ್ತೆ ಅಂದುಕೊಂಡಿದ್ದ ವಿನಯ್ ಅಂಡ್ ರಜತ್​ಗೆ ಶಾಕ್ ಕೊಟ್ಟಿರೋ ಕೋರ್ಟ್  ಇಬ್ಬರನ್ನೂ ಮತ್ತೆ ಮೂರು ದಿನಗಳ ಕಾಲ ಖಾಕಿ ವಶಕ್ಕೆ ನೀಡಿದೆ. ಅಷ್ಟಕ್ಕೂ ಹೀಗೆ ಕೋರ್ಟ್ ಇವರನ್ನ ಮತ್ತೆ ಮೂರು ದಿನ ಪೊಲೀಸರ ವಶಕ್ಕೆ ನೀಡಲಿಕ್ಕೆ ಕಾರಣ , ರೀಲ್ಸ್​ನಲ್ಲಿ ಇವರು ಬಳಸಿರೋ ಅಸಲಿ ಮಚ್ಚು ಸಿಕ್ಕಿಲ್ಲ. ಅಕ್ಷಯ್ ಸ್ಟುಡಿಯೋದಲ್ಲಿ ಅಸಲಿ ಮಚ್ಚು ಹಿಡಿದು ಸ್ಟೈಲಿಶ್ ಆಗಿ ಪೋಸ್ ಕೊಟ್ಟಿದ್ದ ಇವರನ್ನ ಪೊಲೀಸರು ಎತ್ತಾಕಿಕೊಂಡು ಬಂದಿದ್ರು. ಆಗ ನಿಜವಾದ ಮಚ್ಚನ್ನ ತಂದುಕೊಡೋ ಬದಲು ಫೈಬರ್ ಮಚ್ಚನ್ನ ತಂದು ತಾವು ಇದನ್ನೇ ಬಳಿಸಿದ್ದು ಅಂತ ಸುಳ್ಳು ಹೇಳಿದ್ರು ಈ ಸೋಷಿಯಲ್ ಮಿಡಿಯಾ ವೀರರು. ಇವರ ಕಳ್ಳಾಟ, ಸುಳ್ಳಾಟ ಬಯಲಾದ ಮೇಲೆ ಮತ್ತೆ ಇವರಿಗೆ ಪೊಲೀಸರು ಬುಲಾವ್ ಕೊಟ್ಟಿದ್ರು. 

ಆದ್ರೆ ಆಗ ಎಸಿಪಿ ಚಂದನ್​ ಅವರ ಮೇಲೆ ಪ್ರಭಾವಿಗಳಿಂದ ಒತ್ತಡ ತರೋ ಪ್ಯಯತ್ನವನ್ನ ಇವರಿಬ್ರೂ ಮಾಡಿದ್ದಾರೆ. ಸಾಲದ್ದಕ್ಕೆ ಗುಂಡಿ ಬಿಚ್ಚಿಕೊಂಡು, ಲೈಟರ್ ಹಿಡಕೊಂಡು ರೌಡಿಗಳ ತರಹ ಥಾಣೆಗೆ ವಿಸಿಟ್ ಕೊಟ್ಟಿದ್ದಾರೆ. ಈ ಮದಗಜಗಳ ಮದ ಇಳಿಸಬೇಕು ಅಂತ ತೀರ್ಮಾನಿಸಿದ ಪೊಲೀಸರು ಸರಿಯಾಗಿ ಬೆಂಡೆತ್ತಿದ್ದಾರೆ. ರೀಲ್ಸ್ ಮಾಡಿದ ಜಾಗಕ್ಕೆ ಕರೆದುಕೊಂಡು ಹೋಗಿ ಮಹಜರು ಮಾಡಿದ್ದಾರೆ. ಒಂದು ರಾತ್ರಿ ಪರಪ್ಪನ ಅಗ್ರಹಾರಕ್ಕೆ ಕಳಸಿ ಮಾರನೇ ದಿನ ಕೋರ್ಟ್ ಎದುರು ಹಾಜರು ಪಡಿಸಿದ್ದಾರೆ. ಜೊತೆಗೆ ಇವರು ಅಸಲಿ ಮಚ್ಚನ್ನ ಮುಚ್ಚಿಟ್ಟಿರೋ ವಿಚಾರವನ್ನ ಕೋರ್ಟ್​ಗೆ ಮನವರಿಕೆ ಪಡಿಸಿ ಮತ್ತೆ ಮೂರು ದಿನ ಕಸ್ಟಡಿಗೆ ಪಡೆದಿದ್ದಾರೆ. ಅಸಲಿಗೆ ಈ ಮೂರು ದಿನಗಳಲ್ಲಿ ಇವ್ರನ್ನ ಖಾಕಿ ಕೇಳೋದು ಒಂದೇ ಪ್ರಶ್ನೆ. ಎಲ್ರೋ ಮಚ್ಚು ಅಂತ. ಅಸಲಿ ಮಚ್ಚನ್ನ ಮುಚ್ಚಿಟ್ಟಿರೋ ರಜತ್ ಌಂಡ್ ವಿನಯ್ ಗೌಡ ಈಗ ಏನು ಮಾಡೋದು ಅಂತ ಗೊತ್ತಾಗದೇ ತಬ್ಬಿಬ್ಬಾಗಿದ್ದಾರೆ. 

ಅಸಲಿ ಮಚ್ಚು ಕೊಟ್ರೆ ಏನಾಗುತ್ತೋ,, ನಕಲಿ ಮಚ್ಚು ಕೊಟ್ರೆ ಏನಾಗುತ್ತೋ .. ಗೊತ್ತಾಗದೇ ಬೆವರಿ ಬೆಂಡಾಗಿ ಹೋಗಿದ್ದಾರೆ. ಹೌದು ಸೋಷಿಯಲ್ ಮಿಡಿಯಾದಲ್ಲಿ ಮಾರಕಾಸ್ತ್ರಗಳನ್ನ ಪ್ರದರ್ಶನ ಮಾಡೋದು ಗಂಭೀರ ಅಪರಾಧ. ಇದಕ್ಕೆ ಮೂರದಿಂದ 3 ರಿಂದ 7 ವರ್ಷ ಶಿಕ್ಷೆ ಕೊಡಬಹುದು. ಈ ಬಗ್ಗೆ ಬುಧವಾರ ಕೋರ್ಟ್​​ನಲ್ಲಿ ಪ್ರಾಸಿಕ್ಯೂಶನ್ ವಾದ ಮಾಡೋದನ್ನ ನೋಡಿ ರಜತ್- ವಿನಯ್ ಗೌಡ ಥರ ಥರ ನಡುಗಿ ಹೋಗಿದ್ದಾರೆ. ನಾನು ದಾಸನ ಶಿಷ್ಯ.. ನಮ್ಮ ಗುರು ಗಜ.. ನಾನು ಮದಗಜ ಅಂತ ಮದವೇರಿಸಿಕೊಂಡು ಮೆರೀತಾ ಇದ್ದ ರಜತ್ ಬುಜ್ಜಿ ಌಂಡ್ ವಿನಯ್ ಗೌಡ ಈಗ ಪೊಲೀಸ್ ಕಸ್ಟಡಿಯಲ್ಲಿ ಬೇಕಿತ್ತಾ ಬೇಕಿತ್ತಾ,, ನಮಗೆ ಈ ಪಾಡು ಬೇಕಿತ್ತಾ ಅಂತ ಹಾಡು ಹಾಡ್ತಾ ಇದ್ದಾರಂತೆ..!

21:04ಪಿಜಿಯಲ್ಲಿ ಪ್ರೇಯಸಿ ಜೊತೆ ಕುಚ್​-ಕುಚ್​​! ರೆಡ್ ​​ಹ್ಯಾಂಡಾಗಿ ಸಿಕ್ಕಿಬಿದ್ದ ಗಂಡ ಕೊಟ್ಟ ಕಾರಣವೇ ಬೇರೆ!
24:39Bengaluru ಶರ್ಮಿಳಾ ಸಾವಿಗೆ ಬಿಗ್ ಟ್ವಿಸ್ಟ್: ಒಂದೂ ಸುಳಿವು ಬಿಡದೇ ಕೊಂ*ದವನು ಅದೊಂದು ತಪ್ಪು ಮಾಡಿದ್ದ!
24:37ಬೆಂಗಳೂರು: ತಾಯಿ ಮೇಲಿನ ದ್ವೇಷಕ್ಕೆ 6 ವರ್ಷದ ಬಾಲಕಿ ಹತ್ಯೆ; ಪಾಗಲ್ ಪ್ರೇಮಿ ಕಾಟಕ್ಕೆ ವಿದ್ಯಾರ್ಥಿನಿ ಬಲಿ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
23:12ಬೀದಿಗೆ ಬಂತು ಕನ್ನಡದ ಮತ್ತೊಬ್ಬ ಸೀರಿಯಲ್ ನಟಿಯ ಕುಟುಂಬ; ಮದುವೆಗೂ ಮುನ್ನವೇ ಬಳಸಿಕೊಂಡಿದ್ದ ಸುರೇಶ!
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
Read more