Apr 8, 2022, 5:40 PM IST
ಬೆಂಗಳೂರು, (ಏ.08): ಸಿಲಿಕಾನ್ ಸಿಟಿ ಬೆಂಗಳೂರಿನ ನಾಲ್ಕು ಶಾಲೆಗಳಿಗೆ ಬಾಂಬ್ ಬೆದರಿಕೆಯನ್ನು ಹಾಕಲಾಗಿದೆ. ಇಂದು(ಶುಕ್ರವಾರ) ಇ-ಮೇಲ್ ಮೂಲಕ ಅನಾಮಿಕ ಹೆಸರಿನಲ್ಲಿ ಬಾಂಬ್ ಬೆದರಿಕೆ ಸಂದೇಶ ಕಳುಹಿಸಲಾಗಿದ್ದು, ಶಾಲೆಗಳಲ್ಲಿ ಈಗ ಆತಂಕ, ಭಯದ ವಾತಾವರಣ ನಿರ್ಮಾಣವಾಗಿದೆ.
ಶಾಲೆಯಲ್ಲಿ ಬಾಂಬ್ ಇಟ್ಟಿದ್ದೇವೆ, ಜೋಕ್ ಅಲ್ಲ, ಕಡೆಗಣಿಸ್ಬೇಡಿ: ಬೆಂಗಳೂರಿನ ಸ್ಕೂಲ್‌ಗಳಿಗೆ ಬೆದರಿಕೆ!
ಈ ಮಾಹಿತಿ ನೀಡಿರುವಂತ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು, ಇ-ಮೇಲ್ ಮೂಲಕ ಅನಾಮಿಕ ಹೆಸರಿನಲ್ಲಿ ಹುಸ್ಕೂರಿನ ಎಬಿನೈಜರ್ ಇಂಟರ್ ನ್ಯಾಷನರ್ ಸ್ಕೂಲ್, ವಿನ್ಸೆಂಟ್ ಪಲ್ಲೋಟಿ ಶಾಲೆ ಸೇರಿದಂತೆ ನಾಲ್ಕು ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ ಬಂದಿರೋದಾಗಿ ತಿಳಿಸಿದ್ದಾರೆ. ಇನ್ನು ಈ ಬೆದರಿಕೆ ಹಾಕಿದ್ಯಾರು..? ಯಾಕೆ ಈ ಬೆದರಿಕೆ ಹಾಕಲಾಗಿದೆ?