ಕಲುಷಿತ ನೀರು ಸೇವಿಸಿ ದುರಂತ ಪ್ರಕರಣ: ವಿಷಕಾರಿ ಅಂಶ ಕಂಡು ಬಂದಿಲ್ಲ FSL ವರದಿ

Aug 4, 2023, 11:55 AM IST

ಚಿತ್ರದುರ್ಗ: ಕಲುಷಿತ ನೀರು ಸೇವಿಸಿ ಮೃತಪಟ್ಟವರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ. ಕವಾಡಿಗರಹಟ್ಟಿಯ ರುದ್ರಪ್ಪ (50) ಸಾವಿಗೀಡಾಗಿದ್ದಾರೆ. ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆಯಲ್ಲಿ ರುದ್ರಪ್ಪ(cholera) ಮೃತಪಟ್ಟಿದ್ದಾರೆ. ಮೂರು ದಿನದ ಹಿಂದೆ ರುದ್ರಪ್ಪ ಆಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ ಎಫ್‌ಎಸ್ಎಲ್‌ ವರದಿಯಲ್ಲಿ(FSL Report) ಕಾಲರಾ ಲಕ್ಷಣಗಳು ಕಂಡುಬಂದಿವೆ. ಇದನ್ನು ಕುಟುಂಬಸ್ಥರು ನಿರಾಕರಿಸಿದ್ದು, ಕಾಲರಾ(cholera) ಎಂಬ ವರದಿ ಮೋಸದಿಂದ ಕೂಡಿದೆ ಎಂದು ಆರೋಪಿಸಿದ್ದಾರೆ. ಈ ದುರ್ಘಟನೆಗೆ ನೀರಗಂಟಿ ಸುರೇಶ, ನಗರಸಭೆ ಸದಸ್ಯ ಜಯಣ್ಣ ಹೊಣೆಯಾಗಿದ್ದಾರೆ. ದ್ವೇಷದಿಂದ ನೀರಿನ ಟ್ಯಾಂಕಿನಲ್ಲಿ ವಿಷ ಬೆರೆಸಲಾಗಿದೆ. ಆರೋಪಿಗಳನ್ನು ಬಂಧಿಸಿ ಸೂಕ್ತ ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ಏನು ಮಾಡಬೇಕೆಂದು ಗೊತ್ತಿದೆ ಎಂದು ಆಕ್ರೋಶವನ್ನು ಹೊರಹಾಕಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗುತ್ತಿಗೆ ಆಧಾರಿತ ನೌಕರ ನೀರಗಂಟಿ ಸುರೇಶ್ ಕೆಲಸದಿಂದ ವಜಾ ಮಾಡಲಾಗಿದೆ. ನಗರಸಭೆ ಎಇಇ ಮಂಜುನಾಥ್ ಗಿರಡ್ಡಿ, ಜೆಇ ಕಿರಣ್ , ವಾಲ್ ಮ್ಯಾನ್ ಪ್ರಕಾಶಬಾಬು ರನ್ನು ಅಮಾನತು ಮಾಡಿ, ಚಿತ್ರದುರ್ಗ ಜಿಲ್ಲಾಧಿಕಾರಿ ದಿವ್ಯಪ್ರಭು ಆದೇಶ ಹೊರಡಿಸಿದ್ದಾರೆ.

ಇದನ್ನೂ ವೀಕ್ಷಿಸಿ:  ಸೌಜನ್ಯಗೆ ನ್ಯಾಯ: ಧರ್ಮಸ್ಥಳ ಭಕ್ತರಿಂದಲೇ ಬೃಹತ್ ಪ್ರತಿಭಟನೆ!