
ಹೆಂಡತಿಯೇ ಗಂಡನ ಕೊಲೆ ಮಾಡಿ ಆತ ಸಾವಿಗೆ ಶರಣಾಗಿದ್ದಾನೆ ಎಂದು ಹೇಳಿದ್ದು, ಪ್ರಕರಣ ಬೇಧಿಸಿದ ಪೊಲೀಸರು ಆತನ ಪತ್ನಿಯ ಬಂಧಿಸಿದ್ದಾರೆ. ಕಟ್ಟಿಕೊಂಡ ಪತಿಯನ್ನೇ ಆಕೆ ಕೊಂದಿದ್ದೇಕೆ ಇಲ್ಲಿದೆ ಡಿಟೇಲ್ ಸ್ಟೋರಿ…
ಅವನು ಊರಿನ ಚಿಕ್ಕೆಜಮಾನ... ಕಡುಬಡವನ್ನಾದ್ರೂ ಅವನ ಒಳ್ಳೆತನಕ್ಕೆ ಊರಿನ ಜನ ಅವನನ್ನ ಯಜಮಾನನಾಗಿ ಆಯ್ಕೆ ಮಾಡಿದ್ರು.. ಇನ್ನೂ ಮನೆಯ ವಿಷಯಕ್ಕೆ ಬರೋದಾದ್ರೆ 13 ವರ್ಷದ ದಾಂಪತ್ಯ ಜೀವನ ಅವರದ್ದು.. ಇಬ್ಬರು ಗಂಡು ಮಕ್ಕಳು.. ಕೂಲಿ ಮಾಡಿದ್ರೂ ಹೆಂಡತಿ ಮಕ್ಕಳನ್ನ ಚೆನ್ನಾಗಿ ನೋಡಿಕೊಳ್ತಿದ್ದ.. ಆದ್ರೆ ಆವತ್ತೊಂದು ದಿನ ಆತ ಇದ್ದಕ್ಕಿದ್ದಂತೆ ತನ್ನದೇ ಮನೆಯಲ್ಲಿ ಮೃತಪಟ್ಟಿದ್ದ.. ಹೆಂಡತಿ ಆತ ನೇಣುಬಿಗಿದುಕೊಂಡು ಸತ್ತ ಅಂದಿದ್ಲು.. ಪೊಲೀಸರು ಬಂದ್ರು.. ಆದ್ರೆ ಪೊಲೀಸರು ಎಂಟ್ರಿ ಕೊಟ್ಟಾಗಲೇ ನೋಡಿ ಅಲ್ಲಿ ಸತ್ತವನದ್ದು ಸೂಸೈಡ್ ಅಲ್ಲ ಬದಲಿಗೆ ಡೆಡ್ಲಿ ಮರ್ಡರ್ ಅನ್ನೋದು ಗೊತ್ತಾಗೋದು.. ಅಷ್ಟಕ್ಕೂ ಆತನನ್ನ ಕೊಂದಿದ್ಯಾರು..? ಆತನನ್ನ ಕೊಂದು ಸೂಸೈಡ್ನಂತೆ ಬಿಂಬಿಸಿದ್ದೇಕೆ...? ಒಂದು ಡೆಡ್ಲಿ ಮರ್ಡರ್ ಹಿಂದಿನ ರೋಚಕ ಕಥೆಯೇ ಇವತ್ತಿನ ಎಫ್.ಐ.ಆರ್