
ಒಬ್ಬ ಕುರಿಗಾಹಿಯನ್ನು ಕೊಲೆ ಮಾಡಲಾಗುತ್ತದೆ. ಯಾರು ಕೊಂದರು, ಯಾಕೆ ಕೊಂದರು ಎಂಬುದು ನಿಗೂಢವಾಗಿರುತ್ತದೆ. ಆದರೆ, ಕುರಿ ಮತ್ತು ನಾಯಿಗಳು ಹಂತಕನ ಸುಳಿವು ನೀಡಿವೆ.
ಆತ ಕುರಿಗಾಹಿ... 60 ಕುರಿಗಳನ್ನ ಇಟ್ಟುಕೊಂಡು ಊರೂರು ಸುತ್ತುತ್ತಿದ್ದ.. ಮನೆಯಲ್ಲಿ ಹೆಂಡತಿ.. ಅಪ್ಪ ಅಮ್ಮ ಮತ್ತು ಇಬ್ಬರು ತಮ್ಮಂದಿರು... ಆವತ್ತು ಎಂದಿನಂತೆ ಆತ ತನ್ನ ಕುರಿಗಳನ್ನ ಕರೆದುಕೊಂಡು ಮೇಯಿಸಲು ಹೊರಟಿದ್ದ... ಪ್ರತಿನಿತ್ಯದಂತೆ ಆತನ ಸಾಕು ನಾಯಿ ಯನ್ನೂ ಕರೆದುಕೊಂಡಿದ್ದ.. ಆದ್ರೆ ಆವತ್ತು ಸಂಜೆ ಆತ ಎಷ್ಟೇ ಹೊತ್ತಾದ್ರೂ ವಾಪಸ್ ಆಗೋದಿಲ್ಲ.. ಆದ್ರೆ ಕುರಿ ಮತ್ತು ನಾಯಿ ಮಾತ್ರ ಅದೇಗೋ ವಾಪಸ್ ಬಂದಿದ್ವು... ಫೋನ್ ಮಾಡಿದ್ರೆ ನೋ ರೆಸ್ಪಾನ್ಸ್.. ಕೊನೆಗೆ ಆತನ ತಮ್ಮನೇ ಆತ ಹೋದ ಜಮೀನಿಗೆ ಹೋಗಿ ಪರಿಶೀಲಿಸುತ್ತಾನೆ.. ಆಗಲೇ ನೋಡಿ ಅವನು ಸತ್ತಿದ್ದಾನೆ.. ಅವನನ್ನ ಕೊಲೆ ಮಾಡಿದ್ದಾರೆ ಅಂತ ಗೊತ್ತಾಗೋದು.. ಕೂಡಲೇ ಪೊಲೀಸರು ಎಂಟ್ರಿ ಕೊಡ್ತಾರೆ.. ಬಟ್ ಯಾರು ಕೊಂದಿದ್ದಾರೆ.. ಯಾಕೆ ಅನ್ನೋ ಒಂದೇ ಒಂದು ಸುಳಿವು ಸಿಕ್ಕಿರಲಿಲ್ಲ.. ಆದ್ರೆ ಆತ ಸಾಕಿದ್ದ ಕುರಿ ಮತ್ತು ನಾಯಿಯೇ ಹಂತಕನ ಸುಳಿವು ಕೊಡುತ್ವೆ... ತನ್ನ ಒಡೆಯನನ್ನ ಕೊಂದವರನ್ನ ಅವುಗಳೇ ಪತ್ತೆ ಮಾಡುತ್ವೆ.. ಹಾಗಾದ್ರೆ ಅವನನ್ನ ಕೊಂದಿದ್ಯಾರು..? ಒಬ್ಬ ಅಮಾಯಕ ಕುರಿಗಾಯಿಯ ಕೊಲೆ ರಹಸ್ಯವೇ ಇವತ್ತಿನ ಎಫ್.ಐ.ಆರ್..