ದುಡ್ಡು ಕೇಳಲಿಲ್ಲ ಒಡವೆ ಮುಟ್ಟಲಿಲ್ಲ..! ಜಾತ್ರೆಗೆ ಹೋಗಿದ್ದ ವೃದ್ಧೆಯ ಕತ್ತು ಸೀಳಿದಾತ ಯಾರು ?

ದುಡ್ಡು ಕೇಳಲಿಲ್ಲ ಒಡವೆ ಮುಟ್ಟಲಿಲ್ಲ..! ಜಾತ್ರೆಗೆ ಹೋಗಿದ್ದ ವೃದ್ಧೆಯ ಕತ್ತು ಸೀಳಿದಾತ ಯಾರು ?

Published : Dec 15, 2023, 02:19 PM IST

ಅವಳ ಹೆಣ ಹಾಕಲು ಮಧ್ಯರಾತ್ರಿವರೆಗೆ ಕಾದು ಕೂತಿದ್ದ!
ವೃದ್ಧೆಯನ್ನ ಕೊಂದವನು ಅವಳ ಮನೆಯಲ್ಲೇ ಇದ್ದ..!
ಅಮ್ಮ-ಮಗಳ ಎದುರು ನಿಂತು ಇರಿದಿದ್ದು ಒಬ್ಬಳಿಗೇ..!

ಅವರು ಅಮ್ಮ ಮಗಳು, ಕೂಲಿ ನಾಲಿ ಮಾಡಿಕೊಂಡು ಬದುಕುತ್ತಿದ್ದರು. ಮಗಳು ಗಾರ್ಮೆಂಟ್ಸ್‌ನಲ್ಲಿ ಕೆಲಸಕ್ಕೆ ಹೋಗಿ ವಿಕಲಚೇತನ ತಾಯಿಯನ್ನ ಮತ್ತು ಮಗುವನ್ನ ನೋಡಿಕೊಳ್ತಿದ್ದಳು. ಆವತ್ತು ಊರ ಜಾತ್ರೆಗೆ(Fair) ಎಂದು ಇಡೀ ಕುಟುಂಬ ದೇವರ ಪೂಜೆಗೆ ಹೋಗಿತ್ತು. ಮಧ್ಯರಾತ್ರಿ ಸಮಯ. ಪೂಜೆ ಮುಗಿಸಿ ವಾಪಸ್ ಆಗುತ್ತಿರುವಾಗಲೇ ತಾಯಿಯ ಮೇಲೆ ಹಂತಕನೊಬ್ಬ ಅಟ್ಯಾಕ್(attack) ಮಾಡಿ ಕತ್ತು ಸೀಳಿ ಎಸ್ಕೇಪ್ ಆಗಿದ್ದ. ಎಲ್ಲರೂ ಒಡವೆ ಕದಿಯಲು ಬಂದವನು ಹೀಗೆ ಮಾಡಿದ್ದಾನೆ ಅಂತ ಅಂದುಕೊಂಡಿದ್ರು. ಆದ್ರೆ ತನಿಖೆ ನಡೆಸಿದ ಪೊಲೀಸರಿಗೆ(police) ಇದು ಸರಗಳ್ಳ ಮಾಡಿದ ಕೆಲಸ ಅನ್ನಿಸಲೇ ಇಲ್ಲ. ಅಳಿಯ ಕಾಂತರಾಜುನೇ ಅತ್ತೆ(mother in law) ಪಾರ್ವತಮ್ಮಳ ಹೆಣ ಹಾಕಿದ್ದ. ಅವರಿಬ್ಬರು ಮದುವೆಯಾಗಿ 5 ವರ್ಷ ಕಳೆದಿತ್ತು. ಮುದ್ದಾದ ಗಂಡು ಮಗು ಕೂಡ ಆಗಿತ್ತು. ಆದ್ರೆ ಮಗು ಆದಮೇಲೆ ಗಂಡ ತನ್ನ ವರಸೆ ಬದಲಿಸಿದ್ದ. ಪ್ರತೀನಿತ್ಯ ಕುಡಿಯೋದು ಮನೆಗೆ ಬಂದು ಜಗಳವಾಡೋದು ಇದೇ ಅವನ ಕಾಯಕವಾಗಿತ್ತು. ಮಗಳ ಜೀವನ ಕಣ್ಣಮುಂದೆಯೇ ಹಾಳಾಗ್ತಿರೋದನ್ನ ನೋಡಿದ ಪಾರ್ವತಮ್ಮ ಮಗಳು ಮತ್ತು ಮೊಮ್ಮಗನನ್ನ ಕರೆದುಕೊಂಡು ತನ್ನ ಮನೆಗೆ ಬಂದುಬಿಟ್ಟಳು. ಇನ್ನೂ ಮಗಳು ಕೂಡ ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡಿಕೊಂಡು ತನ್ನ ಜೀವನ ನಡೆಸಿಕೊಂಡು ಹೋಗ್ತಿದ್ದಳು. ಆದ್ರೆ ಯಾವಾಗ ಹೆಂಡತಿ 2 ವರ್ಷವಾದ್ರೂ ವಾಪಸ್ ಮನೆಗೆ ಬರಲಿಲ್ಲವೋ ಗಂಡ ಕೆಂಡಮಂಡಲನಾಗಿಬಿಟ್ಟಿದ್ದ. ತನ್ನ ಸಂಸಾರ ಈಗಾಗಲು ಕಾರಣ ಅತ್ತೆಯೇ ಅಂದುಕೊಂಡು ಆವತ್ತೊಂದು ದಿನ ಚಾಕು ಹಿಡಿದು ಅತ್ತೆ ಮನೆ ಕಡೆ ಹೊರಟೇಬಿಟ್ಟ.ಅವಳನ್ನ ಹಿಂಬಾಲಿಸಿಕೊಂಡು ಬಂದು ಅವಳ ಕತ್ತು ಸೀಳಿದ್ದ. ತನ್ನ ಸಂಸಾರ ಹಾಳಾಗಲು ಅತ್ತೆಯೇ ಕಾರಣವೆಂದು ಅತ್ತೆಯನ್ನೇ ನಡುರಾತ್ರಿಯಲ್ಲಿ ಭೀಕರವಾಗಿ ಹತ್ಯೆ ಮಾಡಿ ಇದೀಗ ಪೊಲೀಸರ ಅಥಿತಿಯಾಗಿದ್ದಾನೆ ಅಳಿಯ.

ಇದನ್ನೂ ವೀಕ್ಷಿಸಿ:  ಪೂಜಾ ಹೆಗ್ಡೆಗೆ ಕೊಲೆ ಬೆದರಿಕೆ: ನಟಿ ಈ ಬಗ್ಗೆ ಹೇಳಿದ್ದೇನು..?

30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
24:482.5 ಲಕ್ಷ ಸಂಬಳ, 1 ಕೋಟಿ ಸಾಲ: ಸುಳಿವೇ ಇಲ್ಲದ ಟೆಕ್ಕಿ ಮರ್ಡರ್​​ ಕೇಸ್ ಟ್ರೇಸ್​​ ಆಗಿದ್ದೇ ರೋಚಕ!
Read more