ಟ್ಯಾಕ್ಸಿ ಚಾಲಕನ ನೆರವಿನಿಂದ ಮಗುನ್ನು ಕೊಂದ ಆರೋಪದಲ್ಲಿ ಸೆರೆಯಾಗಿರುವ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ವಿವರ ಇಲ್ಲಿದೆ ನೋಡಿ..
ಮಗುವನ್ನು ಕೊಂದು ಸೂಟ್‌ಕೇಸ್‌ನಲ್ಲಿ ಸಾಗಿಸ್ತಿದ್ದ ತಾಯಿ ಸೆರೆಯಾಗಿದ್ದಾರೆ. ಬೆಂಗಳೂರಿನ ಸ್ಟಾರ್ಟಪ್ ಸಿಇಒ ಚಿತ್ರದುರ್ಗದಲ್ಲಿ ಬಂಧನವಾಗಿದ್ದಾರೆ. 4 ವರ್ಷದ ಗಂಡು ಮಗುವನ್ನು ಕೊಂದು ಗೋವಾದಿಂದ ಪರಾರಿಯಾಗ್ತಿದ್ದವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಟ್ಯಾಕ್ಸಿ ಚಾಲಕನ ನೆರವಿನಿಂದ ಇದು ಸಾಧ್ಯವಾಗಿದ್ದು, ಆತ ಐಮಂಗಲ ಪೊಲೀಸ್ ಠಾಣೆಗೆ ಆರೋಪಿ ಮಹಿಳೆಯನ್ನು ಹಸ್ತಾಂತರಿಸಿದ ಬಳಿಕ ಆಕೆಯನ್ನು ವಶಕ್ಕೆ ಪಡೆಯಲಾಗಿದೆ.